For Quick Alerts
ALLOW NOTIFICATIONS  
For Daily Alerts
 

World Cup 2023 In India: 10 ತಂಡಗಳು, 10 ಸ್ಥಳಗಳು; ಎಲ್ಲಾ ಕ್ರೀಡಾಂಗಣಗಳ ಆಸನ ಸಾಮರ್ಥ್ಯ ತಿಳಿಯಿರಿ

10 ತಂಡಗಳ ನಡುವೆ 46 ದಿನಗಳಲ್ಲಿ 48 ಪಂದ್ಯಗಳು ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ 13ನೇ ಆವೃತ್ತಿಗೆ ಅಕ್ಟೋಬರ್ 5ರಂದು ಭಾರತದಲ್ಲಿ ಅಧಿಕೃತ ಚಾಲನೆ ಸಿಗಲಿದೆ.

ಅಕ್ಟೋಬರ್ 5ರಂದು ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ 2019ರ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಲಿವೆ. ಇದೇ ಸ್ಥಳದಲ್ಲಿ ನವೆಂಬರ್ 19ರಂದು ಫೈನಲ್ ಪಂದ್ಯ ಕೂಡ ನಡೆಯಲಿದೆ.

ICC World Cup 2023 Stadium List, Seating Capacity of All-World Cup Venue in India

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಅಹಮದಾಬಾದ್, ಚೆನ್ನೈ, ಬೆಂಗಳೂರು, ಮುಂಬೈ, ಪುಣೆ, ಧರ್ಮಶಾಲಾ, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಲಕ್ನೋ ಸ್ಥಳಗಳಲ್ಲಿ ಮುಖ್ಯ ಪಂದ್ಯಗಳು ನಡೆಯಲಿವೆ. ಇನ್ನು ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಅಭ್ಯಾಸ ಪಂದ್ಯಗಳ ಆಯೋಜನೆಯಾಗಿವೆ.

ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಯ ಭಾರತದ ಹತ್ತು ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ದಕ್ಷಿಣದಲ್ಲಿ ಚೆನ್ನೈನಿಂದ ಉತ್ತರದಲ್ಲಿ ಧರ್ಮಶಾಲಾ, ಪೂರ್ವದಲ್ಲಿ ಕೋಲ್ಕತ್ತಾ ಮತ್ತು ಪಶ್ಚಿಮದಲ್ಲಿ ಅಹಮದಾಬಾದ್‌ ನಗರಗಳವರೆಗೆ ವ್ಯಾಪಿಸಿದೆ.

ಈ ಕ್ರೀಡಾಂಗಣಗಳು ಚೆನ್ನೈನ ಕರಾವಳಿ ತೀರದ ಚಿದಂಬರಂ ಕ್ರೀಡಾಂಗಣದಿಂದ ಹಿಡಿದು ಹಿಮಾಚಲ ಪ್ರದೇಶದ ಸುಂದರವಾದ ಪರ್ವತಗಳ ನಡುವೆ ಸ್ಥಾಪಿತವಾಗಿರುವ ಧರ್ಮಶಾಲಾ ಸ್ಟೇಡಿಯಂ ಮತ್ತು ರಾಜಧಾನಿ ನವದೆಹಲಿಯ ಹೃದಯಭಾಗದಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದವರೆಗೆ ಇವೆ.

ಈ ಕೆಲವು ಕ್ರೀಡಾಂಗಣಗಳು ಇತ್ತೀಚಿನ ವರ್ಷಗಳಲ್ಲಿ ಆಗಾಗ್ಗೆ ರಾಜಕಾರಣಿಗಳು ಮತ್ತು ದೇಶದ ಮಾಜಿ ಮುಖ್ಯಸ್ಥರನ್ನು ಗೌರವಿಸಲು ವಿವಾದಾತ್ಮಕ ಮರುನಾಮಕರಣಕ್ಕೆ ಒಳಗಾಗಿವೆ ಎಂದು ಗಮನಾರ್ಹ ಸಂಗತಿ.

ಪ್ರಮುಖವಾಗಿ 2021ರಲ್ಲಿ ಉದ್ಘಾಟನೆಗೆ ಕೆಲವೇ ಗಂಟೆಗಳ ಮೊದಲು ಅಹಮದಾಬಾದ್‌ನ ಮೋಟೆರಾ ಕ್ರೀಡಾಂಗಣವನ್ನು ಪ್ರಸ್ತುತ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಗೌರವಿಸಲು ಅಚ್ಚರಿಯ ಕ್ರಮದಲ್ಲಿ ಮರುನಾಮಕರಣ ಮಾಡಲಾಯಿತು.

2023ರ ಐಸಿಸಿ ಏಕದಿನ ವಿಶ್ವಕಪ್ ನಡೆಯುವ ಕ್ರೀಡಾಂಗಣಗಳ ಆಸನ ಸಾಮರ್ಥ್ಯ

1) ನರೇಂದ್ರ ಮೋದಿ ಕ್ರೀಡಾಂಗಣ - ಅಹಮದಾಬಾದ್- 1,32,000 ಆಸನ

2) ಈಡನ್ ಗಾರ್ಡನ್ಸ್ - ಕೋಲ್ಕತ್ತಾ - 68,000 ಆಸನ

3) ಅರುಣ್ ಜೇಟ್ಲಿ ಕ್ರೀಡಾಂಗಣ - ದೆಹಲಿ - 55,000 ಆಸನ

4) ಏಕನಾ ಕ್ರೀಡಾಂಗಣ - ಲಕ್ನೋ - 50,000 ಆಸನ

5) ಎಂ ಚಿನ್ನಸ್ವಾಮಿ ಕ್ರೀಡಾಂಗಣ - ಬೆಂಗಳೂರು - 40,000 ಆಸನ

6) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ - ಹೈದರಾಬಾದ್ - 39,200 ಆಸನ

7) ಎಂಎ ಚಿದಂಬರಂ ಕ್ರೀಡಾಂಗಣ - ಚೆನ್ನೈ - 38,000 ಆಸನ

8) ವಾಂಖೆಡೆ ಕ್ರೀಡಾಂಗಣ - ಮುಂಬೈ - 33,000 ಆಸನ

9) MCA ಸ್ಟೇಡಿಯಂ - ಪುಣೆ - 32,000 ಆಸನ

10) HPCA ಸ್ಟೇಡಿಯಂ - ಧರ್ಮಶಾಲಾ - 23,000 ಆಸನ

Story first published: Thursday, September 28, 2023, 17:21 [IST]
Other articles published on Sep 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+