ಭಾರತದಲ್ಲಿ ಆರಂಭವಾಗುವ ಬಹು ನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯು ಅಕ್ಟೋಬರ್ 5ರಿಂದ ಅಧಿಕೃತವಾಗಿ ಚಾಲನೆ ಸಿಗಲಿದೆ. ಈಗಾಗಲೇ ಶುಕ್ರವಾರ, ಸೆಪ್ಟೆಂಬರ್ 29ರಿಂದ ಅಭ್ಯಾಸ ಪಂದ್ಯಗಳ ಆರಂಭವಾಗಿವೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.
ಇನ್ನು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ತಮ್ಮ ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಪರಸ್ಪರರ ವಿರುದ್ಧ ಆಡುವ ಮೊದಲು, ಎರಡೂ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿದವು. ಈ ವೇಳೆ ಆತಿಥೇಯ ಭಾರತ 2-1 ಅಂತರದಿಂದ ಗೆದ್ದಿತು.

ಏಕದಿನ ವಿಶ್ವಕಪ್ ಸಮೀಪಿಸಿರುವ ಕಾರಣ, ಭಾಗವಹಿಸುವ ಎಲ್ಲಾ ಇತರ ಒಂಬತ್ತು ತಂಡಗಳು ಭಾರತಕ್ಕೆ ಬಂದಿಳಿದಿವೆ. ಇದೀಗ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧದ ತಮ್ಮ ವಿಶ್ವಕಪ್ ಮೊದಲ ಪಂದ್ಯಕ್ಕೆ ಭಾರತ ತಂಡದ ಆಡುವ 11ರ ಬಳಗವನ್ನು ಆಯ್ಕೆ ಮಾಡಿದ್ದಾರೆ.
"ಯಾವುದೇ ಕ್ರಿಕೆಟ್ ತಂಡದಲ್ಲಿ ಅಗ್ರ-ಮೂರು ಬ್ಯಾಟರ್‌ಗಳು ಬಹಳ ಮುಖ್ಯ. ಆರಂಭಿಕರಿಂದ ಉತ್ತಮ ಆರಂಭ ಬಂದರೆ, ಅದನ್ನು ಅನುಸರಿಸುವ ಮುಂದಿನ ಆಟಗಾರರಿಗೆ ಮುಕ್ತವಾಗಿ ಆಡಲು ಸಹಾಯವಾಗುತ್ತದೆ. ಆರಂಭಿಕ ಜೋಡಿಯ ಕೊಡುಗೆ ನಿರ್ಣಾಯಕವಾಗಿದೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
"ತಂಡದಲ್ಲಿ ಈ ಮೂವರು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಬಹುದು ಎಂದು ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ," ಅವರ ಹೆಸರನ್ನು ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸೂಚಿಸಿದರು.
"ಭಾರತ ತಂಡ ಈಗಾಗಲೇ ಹಾರ್ದಿಕ್ ಪಾಂಡ್ಯರನ್ನು ಹೊಂದಿರುವುದರಿಂದ, ಅವರು ಇಬ್ಬರು ವೇಗಿಗಳೊಂದಿಗೆ ಹೋಗಲು ಬಯಸಿದರೆ, ಹೆಚ್ಚುವರಿ ಸ್ಪಿನ್ನರ್‌ನನ್ನು ಸೇರಿಸಿಕೊಳ್ಳಬಹುದು. ಆಗ ಆಡುವ ಹನ್ನೊಂದರಲ್ಲಿ ರವಿಚಂದ್ರನ್ ಅಶ್ವಿನ್ ಹೊಂದಬಹುದು," ಎಂದು ಭಾರತದ ಲೆಜೆಂಡ್ ಕ್ರಿಕೆಟ್ ತಿಳಿಸಿದರು.
ಸುನಿಲ್ ಗವಾಸ್ಕರ್ ಅವರ ಸಂಭಾವ್ಯ ಭಾರತದ ಆಡುವ 11ರ ಬಳಗದಲ್ಲಿ ಸ್ಥಾನ ಕಳೆದುಕೊಂಡವರು ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್.
ಮತ್ತೊಂದೆಡೆ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಭಾರತ ತಂಡ ಐದು ಸರಿಯಾದ ಬೌಲರ್‌ಗಳೊಂದಿಗೆ ಹೋಗಬೇಕು ಎಂದು ಹೇಳಿದರು.
"ನಾನು ಅಗ್ರ ಏಳು ಆಟಗಾರರನ್ನು ಒಪ್ಪುತ್ತೇನೆ. ಇದೇ ವೇಳೆ, ಭಾರತ ತಂಡವು ಸರಿಯಾದ ಐದು ಬೌಲರ್‌ಗಳೊಂದಿಗೆ ಹೋಗಬೇಕೆಂದು ನಾನು ಬಯಸುತ್ತೇನೆ. ನಿಮಗೆ ಹಾರ್ದಿಕ್ ಪಾಂಡ್ಯ ಆರನೇ ಬೌಲರ್. ಆದರೆ ನೀವು ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಬೌಲರ್‌ಗಳೊಂದಿಗೆ ಹೋಗಬೇಕು. ಈಗ ನಿಮಗೆ ಸಿಗುವ ಪಿಚ್‌ಗಳು, ಅಲ್ಲಿ ಇಬ್ಬನಿ ಬೀಳುವ ಸಾಧ್ಯತೆಯಿರುವುದರಿಂದ, ವಿಶ್ವಕಪ್‌ನುದ್ದಕ್ಕೂ ಸದೃಢವಾದ ಬೌಲಿಂಗ್ ಆಯ್ಕೆ ಮಾಡಬೇಕಾಗಿದೆ," ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟರು.
"ಹೀಗಾಗಿ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಒಳಗೊಂಡಿರುವ ಮೂರು ಮುಖ್ಯ ವೇಗದ ಬೌಲರ್‌ಗಳೊಂದಿಗೆ ಹೋಗಿ. ಕುಲದೀಪ್ ಯಾದವ್ ಅವರೊಂದಿಗೆ ಯಾರಾದರೂ ತಂಡವನ್ನು ಸೇರಿಸಲು ನೀವು ಬಯಸಿದರೆ, ಅದು ಟರ್ನಿಂಗ್ ಟ್ರ್ಯಾಕ್‌ನಲ್ಲಿದ್ದರೆ ರವೀಂದ್ರ ಜಡೇಜಾ ಅವರಲ್ಲಿ ಸರಿಯಾದ ಬೌಲರ್ ನೋಡಿ," ಎಂದರು.
"ವಿಕೆಟ್‌ಗಳ ಬಗ್ಗೆ ಮಾತ್ರ ಯೋಚಿಸುವ ಸರಿಯಾದ ಬೌಲರ್‌ಗಳನ್ನು ಆಯ್ಕೆ ಮಾಡಿ. ಮತ್ತು ನಿಮ್ಮ ಅಗ್ರ 7 ಬ್ಯಾಟ್ಸ್‌ಮನ್‌ಗಳು ರನ್‌ಗಳನ್ನು ನೋಡಿಕೊಳ್ಳಬಹುದು," ಎಂದು ಎಡಗೈ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದರು.
ಭಾರತೀಯ ಕ್ರಿಕೆಟ್ ತಂಡವು ಗುರುವಾರ, ಸೆಪ್ಟೆಂಬರ್ 30ರಂದು ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯಕ್ಕಾಗಿ ಗುವಾಹಟಿ ತಲುಪಿದೆ.
ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.