Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ಕಳಪೆ ಬ್ಯಾಟಿಂಗ್‌ನಿಂದ ಕಿವೀಸ್‌ಗೆ ಶರಣಾದ ಅಫ್ಘಾನ್

ICC World Cup: Afghanistan vs New Zealand, Match 13 - Live Score

ಟೌನ್ಟನ್, ಜೂನ್ 8: ಟೌನ್ಟನ್ ನ ಕೂಪರ್ ಅಸೋಸಿಯೇಟ್ಸ್ ಗ್ರೌಂಡ್‌ನಲ್ಲಿ ಭಾನುವಾರ (ಜೂನ್ 8) ನಡೆದ ವಿಶ್ವಕಪ್ 13ನೇ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್‌, ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್ ಜಯ ಗಳಿಸಿದೆ. ಬ್ಯಾಟಿಂಗ್‌ ವೈಫಲ್ಯ ತೋರಿಸಿದ ಅಫ್ಘಾನಿಸ್ತಾನ ತಂಡ ಸತತ ಮೂರನೇ ಬಾರಿಗೆ ಸೋಲಿನ ಬೆಲೆ ತೆರಬೇಕಾಯ್ತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನ್ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಹಝರತುಲ್ಲಾ ಜಾಝಾಯಿ 34, ನೂರ್ ಅಲಿ ಝದ್ರನ್ 31, ರಹ್ಮಾತ್ ಷಾ 0, ಹಶ್ಮತುಲ್ಲಾ ಶಾಹಿದ್ದಿ 59, ಮೊಹಮ್ಮದ್ ನಬಿ 9, ಗುಲ್ಬಾದಿನ್ ನಾಯಿಬ್ (ಸಿ) 4 , ನಜಿಬುಲ್ಲಾ ಝದ್ರನ್ 4, ಇಕ್ರಮ್ ಅಲಿಖಿಲ್ 2, ರಶೀದ್ ಖಾನ್ 0 ರನ್‌ಗೆ ನಿರ್ಗಮಿಸಿದರು.

ಅಫ್ಘಾನಿಸ್ತಾನ vs ನ್ಯೂಜಿಲ್ಯಾಂಡ್, ಸ್ಕೋರ್‌ಕಾರ್ಡ್

1
43656

ಅಫ್ಘಾನಿಸ್ತಾನ ತಂಡ 41.1 ಓವರ್‌ ಮುಕ್ತಾಯಕ್ಕೆ ಸರ್ವ ಪತನ ಕಂಡು 172 ರನ್ ಬಾರಿಸಿತು. ಅಫ್ಘಾನ್ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್‌ನ ಜೇಮ್ಸ್ ನೀಶಮ್ 31 ರನ್‌ಗೆ 5, ಲಾಕಿ ಫಾರ್ಗುಸನ್ 37 ರನ್‌ಗೆ 4 ವಿಕೆಟ್ ಪಡೆದು ಪಾರಮ್ಯ ಮೆರೆದರು.

ಗುರಿ ಬೆಂಬತ್ತಿದ ಕಿವೀಸ್, ಕಾಲಿನ್ ಮುನ್ರೋ 22, ಕೇನ್ ವಿಲಿಯಮ್ಸನ್ 79, ರಾಟ್ ಟೇಲರ್ 48 ರನ್‌ನೊಂದಿಗೆ 32.1 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 173 ರನ್ ಮಾಡಿತು. ಮಾರಕ ಬೌಲಿಂಗ್ ಪ್ರದರ್ಶಿದ ಜೇಮ್ಸ್ ನೀಶಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲ್ಯಾಥಮ್ (ವಿಕೆ), ಜೇಮ್ಸ್ ನೀಶಾಂ, ಕಾಲಿನ್ ಡೆ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕೀ ಫರ್ಗುಸನ್, ಟ್ರೆಂಟ್ ಬೌಲ್ಟ್.

ಅಫ್ಘಾನಿಸ್ತಾನ: ಹಝರತುಲ್ಲಾ ಜಾಝಾಯಿ, ನೂರ್ ಅಲಿ ಝದ್ರನ್, ರಹ್ಮಾತ್ ಷಾ, ಹಶ್ಮತುಲ್ಲಾ ಶಾಹಿದ್ದಿ, ಮೊಹಮ್ಮದ್ ನಬಿ, ಗುಲ್ಬಾದಿನ್ ನಾಯಿಬ್ (ಸಿ), ನಜಿಬುಲ್ಲಾ ಝದ್ರನ್, ಇಕ್ರಮ್ ಅಲಿಖಿಲ್ (ವಿಕೆ), ರಶೀದ್ ಖಾನ್, ಅಫ್ತಾಬ್ ಅಲಮ್, ಹಮೀದ್ ಹಸನ್.

{headtohead_cricket_95_4}

Story first published: Sunday, June 9, 2019, 9:26 [IST]
Other articles published on Jun 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+