ವಿಶ್ವಕಪ್-ಭಾರತ vs ಪಾಕ್ ಕದನ: ಭಾರತದ ಮೇಲೆಯೇ ಹೆಚ್ಚಿನ ಒತ್ತಡ!

ನವದೆಹಲಿ, ಜೂನ್ 3: ವಿಶ್ವಕಪ್ ಮುಖಾಮುಖಿಯಲ್ಲಿ ಪಾಕಿಸ್ತಾನ ವಿರುದ್ಧ ಶೇ. 100 ಪಂದ್ಯ ಗೆಲುವಿನ ದಾಖಲೆಯನ್ನು ಭಾರತ ಹೊಂದಿದೆ. ಭಾರತದ ಈ ಗೆಲುವಿನ ಸಂಭ್ರಮ ಈ ಬಾರಿಯೂ ಮುಂದುವರೆಯಲಿದೆ ಎಂದು ಮಾಜಿ ಆಟಗಾರ, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
'ಪಾಕಿಸ್ತಾ ತಂಡದ ಸದ್ಯದ ಫರ್ಮ್ ಅಷ್ಟೇನೂ ಚೆನ್ನಾಗಿಲ್ಲ. ಅವರಿಗೆ ವಿಶ್ವಕಪ್‌ನಲ್ಲಿ ಹೆಚ್ಚಿನ ಅನುಭವವೂ ಇಲ್ಲ. ಹಿಂದಿನ ಪಾಕಿಸ್ತಾನ ತಂಡವನ್ನು ತೆಗೆದುಕೊಳ್ಳೋದಾದ್ರೆ ಅದನ್ನು ಸೋಲಿಸೋದು ಸುಲಭವಿರಲಿಲ್ಲ. ಆದರೆ ಈಗಿನ ತಂಡವನ್ನು 10 ಪಂದ್ಯಗಳಲ್ಲಿ 9ರಲ್ಲಿ ಸೋಲಿಸಬಹುದು' ಎಂದು ಭಜ್ಜಿ ಅಭಿಪ್ರಾಯಿಸಿದ್ದಾರೆ.
ಪಾಕಿಸ್ತಾನ-ಭಾರತ ಪಂದ್ಯಗಳ ಫಲಿತಾಂಶಗಳ ಪರಿಣಾಮ ಹೇಗಿರುತ್ತದೆ ಎಂದುದನ್ನು ಭಜ್ಜಿ ವಿವರಿಸಿದ್ದಾರೆ.

ಪಾಕ್ ಗೆಲ್ಲೋದು ಸಾಧ್ಯಾನೇ ಇಲ್ಲ
'ಭಾರತ ವಿರುದ್ಧ ಪಾಕ್ ಗೆಲ್ಲೋದು ಸಾಧ್ಯವೇ ಇಲ್ಲ. ಈ ಹಿಂದೆ ಬಲಿಷ್ಠ ತಂಡವಿದ್ದಾಗಲೂ ವಿಶ್ವಕಪ್‌ನಲ್ಲಿ ಪಾಕ್‌ಗೆ ಭಾರತವನ್ನು ಸೋಲಿಸಲಾಗಿಲ್ಲ. ಈಗ ಸೋಲಿಸೋದು ಹೇಗೆ ಸಾಧ್ಯ?' ಎಂದು ಹರ್ಭಜನ್ ಪ್ರಶ್ನಿಸಿದ್ದಾರೆ. ಉಪ ಖಂಡಗಳ ನಡುವಣ ಜಿದ್ದಾಜಿದ್ದಿ ಪಂದ್ಯವೆಂದರೆ ಅದು ಇಂಗ್ಲೆಂಡ್-ಭಾರತ ನಡುವಿನ ಪಂದ್ಯ ಎಂದು ಸಿಂಗ್ ತಿಳಿಸಿದ್ದಾರೆ.

ಭಾರತಕ್ಕೆ ಒತ್ತಡ ಹೆಚ್ಚು
ಇತ್ತಂಡಗಳ ನಡುವಿನ ಕದನದ ಬಗ್ಗೆ ಮಾತು ಮುಂದುವರೆಸಿದ ಭಜ್ಜಿ, 'ಪಂದ್ಯದ ವೇಳೆ ಭಾರತದ ಮೇಲೆ ಗೆಲುವಿನ ಒತ್ತಡ ಸಹಜವಾಗೇ ಹೆಚ್ಚಿರುತ್ತದೆ. ಎರಡು ತಂಡಗಳ ಕದನವೆಂದರೆ ಅಲ್ಲಿ ಪ್ರತೀಸಾರಿ ಗೆಲ್ಲುವ ತಂಡಕ್ಕೆ ಸೋಲಿನ ಭಯ ಹೆಚ್ಚಿರುತ್ತೆ. ಪಾಕಿಸ್ತಾನ ವಿರುದ್ಧ ಪಂದ್ಯ ಸೋತರೆ ಅದರ ಪರಿಣಾಮ ಭಾರತದಲ್ಲಿ ಹೇಗಿರುತ್ತೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ' ಎಂದರು.

ಜನ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ
'ಬೇರೆ ಪಂದ್ಯಗಳಲ್ಲಿ ಭಾರತದ ಫಲಿತಾಂಶ ಏನು ಅನ್ನೋದನ್ನು ಜನ ನೆನಪಿಸಿಕೊಳ್ಳಲಾರರು. ಆದರೆ ನಾವು ಪಾಕಿಸ್ತಾನ ವಿರುದ್ಧ ಆಡುವಾಗ ಜನ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ. ಪ್ರತೀಸಾರಿ ಪಾಕ್ ಸೋಲುತ್ತಿದ್ದರಿಂದ ಈ ಬಾರಿಯೂ ಸೋತರೆ ಪಾಕ್ ಅಂಥದ್ದೇನನ್ನೂ ಕಳೆದುಕೊಳ್ಳಲಾರದು. ಅದೇ ಗೆದ್ದರೆ ಪಾಕ್‌ಗೆ ಬೋನಸ್ ಆಗಲಿದೆ. ಆದರೆ ನಮ್ಮ ಪಾಲಿಗೆ ಆ ಸೋಲು ಅತ್ಯಂತ ಕೆಟ್ಟ ಸೋಲಾಗಲಿದೆ' ಎಂದು ಹರ್ಭಜನ್ ಹೇಳಿದ್ದಾರೆ.

ಪಾಕ್‌ಗೆ ಹೀನಾಯ ಸೋಲು
ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೇ 31ರಂದು ಮೊದಲ ಪಂದ್ಯವನ್ನಾಡಿತ್ತು. ಈ ವೇಳೆ ಆರಂಭಿಕ ಇನ್ನಿಂಗ್ಸ್ ಆಡಿದ್ದ ಪಾಕ್ ಕೇವಲ 105 ರನ್ನಿಗೆ ಆಲ್ ಔಟ್ ಆಗಿತ್ತು. ಅಲ್ಲದೆ 7 ವಿಕೆಟ್‌ಗಳ ಹೀನಾಯ ಸೋಲನುಭವಿಸಿತು ಕೂಡ. ಕೆರಿಬಿಯನ್ನರು 13.4 ಓವರ್‌ನಲ್ಲಿ 108 ರನ್ ಬಾರಿಸಿ ಸರ್ಫರಾಜ್ ಅಹ್ಮದ್ ಬಳಗಕ್ಕೆ ಮುಖಭಂಗ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications