ಕ್ರಿಕೆಟ್ ವಿಶ್ವಕಪ್ 2019: 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ ವಿಶ್ವದಾಖಲೆ!

ಸೌತಾಂಪ್ಟನ್, ಜೂನ್ 6: ಐಸಿಸಿ ವಿಶ್ವಕಪ್ 10ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 122 ರನ್ ಬಾರಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇದೇ ಪಂದ್ಯದಲ್ಲಿ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ ಕೂಡ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಬುಧವಾರ (ಜೂನ್ 6) ಸೌತಾಂಪ್ಟನ್ ನ ರೋಸ್ ಬೌಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಆಕರ್ಷಕ ಶತಕ, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಬೆಂಬಲದಿಂದ ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿತ್ತು.
ಪಂದ್ಯದಲ್ಲಿ ಒಂದು ಸ್ಟಂಪ್ಟ್ ಮತ್ತು 34 ರನ್ ಸೇರಿಸಿದ್ದ ಧೋನಿ ಅಪರೂಪದ ದಾಖಲೆಗಳಿಗೆ ಕಾರಣರಾಗಿದ್ದಾರೆ.

ಭಾರತ ಶುಭಾರಂಭ
ರೋಹಿತ್ ಶರ್ಮಾ ಅವರ ಅಜೇಯ 122 ರನ್, ಯುಜುವೇಂದ್ರ ಚಾಹಲ್ 4, ಜಸ್‌ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ 2 ವಿಕೆಟ್ ಸಾಧನೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ವಿಶ್ವಕಪ್ ಪಂದ್ಯದಲ್ಲೇ ಭಾರತ 6 ವಿಕೆಟ್ ಜಯದೊಂದಿಗೆ ಶುಭಾರಂಭ ಕಂಡಿತ್ತು. ಅದರೆ ದಕ್ಷಿಣ ಆಫ್ರಿಕಾ ತಂಡ ಈ ಪಂದ್ಯದ ಸೋಲಿನೊಂದಿಗೆ ಸತತ 3 ಸೋಲಿನ ಮುಖಭಂಗಕ್ಕೀಡಾಗಿತ್ತು.

ಧೋನಿ ವಿಶ್ವದಾಖಲೆ
ಬುಧವಾರದ ಪಂದ್ಯದೊಂದಿಗೆ ಧೋನಿ ವಿಶ್ವ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ. ಅಂತಾರಾಷ್ಟ್ರೀಯ 600 ಇನ್ನಿಂಗ್ಸ್‌ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಹೆಗ್ಗಳಿಕೆ ಧೋನಿ ಪಾಲಾಗಿದೆ. ಇದೇ ಸಾಧನೆಗಾಗಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ (596), ಶ್ರೀಲಂಕಾದ ಕುಮಾರ ಸಂಗಕ್ಕಾರ (499), ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್ (485) ದೋನಿಯ ನಂತರದ ಸ್ಥಾನಗಳಲ್ಲಿದ್ದಾರೆ.

ರೋಹಿತ್‌ಗೆ ಸಾಥ್
ಸೌತಾಂಪ್ಟನ್ ಪಂದ್ಯದಲ್ಲಿ ನಂ.5 ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಧೋನಿ ಗಮನಾರ್ಹ 34 ರನ್ ಕೊಡುಗೆ ನೀಡಿದ್ದರು. ಅಲ್ಲದೆ ಮ್ಯಾನ್ ಆಫ್ ದ ಮ್ಯಾಚ್ ರೋಹಿತ್ ಶರ್ಮಾಗೂ ಸಾಥ್ ನೀಡಿದ್ದ ಧೋನಿ ಜೊತೆಯಾಟದಲ್ಲಿ 74 ರನ್ ಗಳಿಸಿದ್ದರು. 46.1ನೇ ಓವರ್‌ನಲ್ಲಿ ಧೋನಿ, ಎದುರಾಳಿ ಬೌಲರ್ ಕ್ರಿಸ್ ಮೋರಿಸ್‌ಗೆ ವಿಕೆಟ್ ನೀಡಿದ್ದರಿಂದ ರೋಹಿತ್-ಧೋನಿ ಜೊತೆಯಾಟ 74 ರನ್‌ನಲ್ಲೇ ಕೊನೆಗೊಂಡಿತ್ತು.

ಮತ್ತೊಂದು ದಾಖಲೆ
ಇದೇ ಪಂದ್ಯದಲ್ಲಿ ಎಂಎಸ್‌ಡಿ ಇನ್ನೊಂದು ದಾಖಲೆಗೂ ಕಾರಣರಾಗಿದ್ದಾರೆ. ಅಂದರೆ ವಿಶ್ವಕಪ್‌ನಲ್ಲಿ ವಿಕೆಟ್ ಕೀಪರ್ ಆಗಿ ಹೆಚ್ಚು ಔಟ್‌ಗೆ ಕಾರಣರಾದವರಲ್ಲಿ ಧೋನಿ 3ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಧೋನಿ ಒಟ್ಟಿಗೆ 33 ವಿಕೆಟ್ ಮುರಿಯಲು ಕೈ ಜೋಡಿಸಿದ್ದಾರೆ. ಈ ಯಾದಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ (54), ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್ (52), ಧೋನಿ (33), ನ್ಯೂಜಿಲ್ಯಾಂಡ್‌ನ ಬ್ರೆಂಡನ್ ಮೆಕಲಮ್ (32), ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ (31) ಇದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ, ಆ್ಯಡಿಲೆ ಫೆಹ್ಲುಕ್ವೇವೊ ಅವರನ್ನು ಸ್ಟಂಪ್ಟ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications