For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಹಿಟ್‌ಮ್ಯಾನ್‌ ಬ್ಯಾಟಿಂಗ್‌ಗೆ ತೆಂಡೂಲ್ಕರ್ ವಿಶ್ವದಾಖಲೆ ಧೂಳೀಪಟ!

ICC World Cup 2019 : ಕ್ರಿಕೆಟ್ ದೇವರ ದಾಖಲೆ ಮುರಿದ ರೋಹಿತ್ ಶರ್ಮಾ..? | Oneindia Kannada
ICC World Cup Rohit Sharma breaks Sachin Tendulkar’s World Record

ಲಂಡನ್, ಜೂನ್ 9: ಲಂಡನ್‌ನ ಓವಲ್‌ನಲ್ಲಿನ ಭಾರತ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್, 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರು ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಯೊಂದನ್ನು ಮುರಿದಿದ್ದಾರೆ. ಏಕದಿನದಲ್ಲಿ ಆರಂಭಿಕರಾಗಿ ಆಸ್ಟ್ರೇಲಿಯಾ ವಿರುದ್ಧ ವೇಗದ 2000 ರನ್ ಬಾರಿಸಿದ ಭಾರತದ ಮುಂಚೂಣಿ ಬ್ಯಾಟ್ಸ್ಮನ್ ಆಗಿ ರೋಹಿತ್ ಗುರುತಿಸಿಕೊಂಡಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ರೋಹಿತ್ ಶರ್ಮಾ ಈ ಸಾಧನೆಗಾಗಿ ಒಟ್ಟು 37 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ. ಇದರೊಂದಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಬದಿಗೆ ಸರಿದಿದೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2000 ರನ್ ದಾಖಲಿಸಲು 51 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು.

ಭಾರತ vs ಆಸ್ಟ್ರೇಲಿಯಾ ಪಂದ್ಯ, ಜೂನ್ 9, Live ಸ್ಕೋರ್‌ಕಾರ್ಡ್

1
43657

ಆಸ್ಟ್ರೇಲಿಯಾ ವಿರುದ್ಧ 2000 ರನ್ ಪೂರೈಸಲು ಶರ್ಮಾಗೆ ಕೇವಲ 20 ರನ್‌ಗಳ ಅವಶ್ಯಕತೆಯಿತ್ತು. ಭಾನುವಾರ (ಜೂನ್ 9) ನಡೆದ ಭಾರತ vs ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತಕ್ಕೆ ಬೌಂಡರಿ ಬಾರಿಸುವ ಮೂಲಕ ರೋಹಿತ್ ಹೊಸ ಮೈಲುಗಲ್ಲು ಸ್ಥಾಪಿಸಿದರು. ಪಂದ್ಯದಲ್ಲಿ ಶರ್ಮಾ 57 ರನ್ ಗಳಿಸಿದ್ದರು.

ಆಸೀಸ್ ವಿರುದ್ಧ 37 ಏಕದಿನ ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿ, ರೋಹಿತ್ ಈ ಸಾಧನೆ ಯಾದಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ವಿಂಡೀಸ್‌ನ ಸರ್ ವಿವಿಯನ್ ರಿಚರ್ಡ್ಸನ್ (45 ಇನ್ನಿಂಗ್ಸ್), ಸಚಿನ್ ತೆಂಡೂಲ್ಕರ್ (51 ಇನ್ನಿಂಗ್ಸ್), ವೆಸ್ಟ್ ಇಂಡೀಸ್‌ನ ಡೆಸ್ಮಂಡ್ ಹೇನ್ಸ್ (59) ಅನಂತರದ ಸ್ಥಾನಗಳಲ್ಲಿದ್ದಾರೆ.

Story first published: Sunday, June 9, 2019, 17:47 [IST]
Other articles published on Jun 9, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+