ವಿಶ್ವಕಪ್: ಡಿ ಕಾಕ್ ಆಟದ ಸೊಬಗು, ಅಫ್ಘಾನ್ ಮಣಿಸಿದ ದಕ್ಷಿಣ ಆಫ್ರಿಕಾ

ಕಾರ್ಡಿಫ್, ಜೂನ್ 16: ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ನಲ್ಲಿ ಶನಿವಾರ (ಜೂನ್ 15) ನಡೆದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಗಳಿಸಿದೆ. ಈ ಸೋಲಿನ ಬಳಿಕ ಅಫ್ಘಾನ್ ಸೆಮಿಫೈನಲ್ ಪ್ರವೇಶ ದೂರದ ಮಾತೆಂಬಂತಾಗಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ ಉತ್ತಮ ಬ್ಯಾಟಿಂಗ್ ತೋರಿಸದೆ ಸೋಲಿನೆಡೆಗೆ ವಾಲಿತು. ಹಝರತುಲ್ಲ ಝಝಾಯಿ 22, ನೂರ್ ಅಲಿ ಝದ್ರನ್ 32, ರಶೀದ್ ಖಾನ್ 35 ರನ್ ಗಳಿಸಿದ್ದೇ ಹೆಚ್ಚೆನಿಸಿತು. ಅಫ್ಘಾನ್ 34.1 ಓವರ್‌ಗೆ ಸರ್ವ ಪತನ ಕಂಡು 125 ರನ್ ಬಾರಿಸಿತು.
ಸುಲಭ ರನ್ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ಆರಂಭಿ ಬ್ಯಾಟ್ಸ್ಮನ್‌ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ಹಾಶಿಮ್ ಆಮ್ಲಾ ಅವರ ಭರ್ಜರಿ ಜೊತೆಯಾಟದ ಬೆಂಬಲ ದೊರೆಯಿತು. ಆಮ್ಲಾ 41, ಡಿ ಕಾಕ್ 68 ರನ್ ಸೇರಿಸಿ ತಂಡವನ್ನು ಗೆಲುವಿನ ದಡಕ್ಕೆ ತಂಡರು. ಆಫ್ರಿಕಾ 28.4 ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತು.
ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ಪರ ಇಮ್ರಾನ್ ತಾಹಿರ್ 4, ಕ್ರಿಸ್ ಮೋರಿಸ್ 3, ಆಂಡಿಲೆ ಫೆಹ್ಲುಕ್ವಾಯೊ ವಿಕೆಟ್ ಪಡೆದು ಮಿಂಚಿದರು. ಇಮ್ರಾನ್ ತಾಹಿರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಈ ಪಂದ್ಯದ ಬಳಿಕ ಅಫ್ಘಾನ್ 4ರಲ್ಲಿ ನಾಲ್ಕೂ ಪಂದ್ಯ ಸೋತಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications