ವಿಶ್ವಕಪ್: ಅಫ್ಘಾನ್ ಎದುರು ಗೆದ್ದರೆ ದಾಖಲೆ ಬರೆಯಲಿದೆ ವಿರಾಟ್ ಕೊಹ್ಲಿ ಪಡೆ

ಸೌತಾಂಪ್ಟನ್, ಜೂನ್ 22: ಐಸಿಸಿ ವಿಶ್ವಕಪ್ 2019ರ ಗ್ರೂಪ್ ಹಂತದ ಪಂದ್ಯದಲ್ಲಿ ಶನಿವಾರ (ಜೂನ್ 22) ಭಾರತ ತಂಡ ಅಫ್ಘಾನಿಸ್ತಾನವನ್ನು ಸೋಲಿಸಿದರೆ ಅಪರೂಪದ ದಾಖಲೆಗೆ ಕಾರಣವಾಗಲಿದೆ. ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಏಷ್ಯನ್ ಎದುರಾಳಿ ಅಫ್ಘಾನಿಸ್ತಾನ ವಿರುದ್ಧ ಭಾರತ ಗೆದ್ದರೆ, ಏಕದಿನ ವಿಶ್ವಕಪ್‌ನಲ್ಲಿ 50 ಗೆಲುವುಗಳ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಲಿದೆ. ಈವರೆಗೆ ಭಾರತ ವಿಶ್ವಕಪ್‌ನಲ್ಲಿ ಒಟ್ಟು 49 ಗೆಲುವುಗಳನ್ನು ಕಂಡಿದೆ. ಅಪರೂಪದ ಮೈಲಿಗಲ್ಲು ಸ್ಥಾಪಿಸಲು ಬ್ಲೂ ಬಾಯ್ಸ್ ಬಳಗಕ್ಕೆ ಇನ್ನೊಂದೇ ಗೆಲುವು ಬೇಕು.
ಭಾರತ vs ಅಫ್ಘಾನಿಸ್ತಾನ, ಜೂನ್ 22, Live ಸ್ಕೋರ್‌ಕಾರ್ಡ್
ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ ತಂಡವಾಗಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಗುರುತಿಸಿಕೊಂಡಿದೆ. ಒಟ್ಟು 90 ಪಂದ್ಯಗಳಲ್ಲಿ 67 ಗೆಲುವು, 21 ಸೋಲು ಮತ್ತು 1 ಟೈ ದಾಖಲೆ ಆಸೀಸ್ ಹೆಸರಿನಲ್ಲಿದೆ. ಈ ಯಾದಲ್ಲಿ ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್ 83ರಲ್ಲಿ 52 ಗೆಲುವು, 30 ಸೋಲುಗಳನ್ನು ಕಂಡಿದೆ.
ವಿಶ್ವಕಪ್ ಅತ್ಯಧಿಕ ದಾಖಲೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ 78 ಪಂದ್ಯಗಳಲ್ಲಿ 49 ಜಯ, 27 ಪರಾಜಯ ಮತ್ತು 1 ಪಂದ್ಯ ಟೈ ಮಾಡಿಕೊಂಡಿದೆ. ಇನ್ನು ಇಂಗ್ಲೆಂಡ್ 78ರಲ್ಲಿ 45 ಜಯ, 31 ಸೋಲು, 1 ಟೈ, ವೆಸ್ಟ್ ಇಂಡೀಸ್ 76ರಲ್ಲಿ 42 ಗೆಲುವು, 32 ಸೋಲು ದಾಖಲಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications