ಆಸ್ಟ್ರೇಲಿಯಾ ಸತತ ಗೆಲುವಿನ ನಂತರ WTC 21-23 ಅಂಕಪಟ್ಟಿಯಲ್ಲಿ ಕುಸಿದ ಭಾರತ, ಪಾಕ್

ಇದೇ ವರ್ಷ ಇಂಗ್ಲೆಂಡ್ ನೆಲದಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ವಿರುದ್ಧ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಜಯ ಸಾಧಿಸುವುದರ ಮೂಲಕ ತನ್ನ ಚೊಚ್ಚಲ ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು. ಹೀಗೆ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ದ್ವಿತೀಯ ಆವೃತ್ತಿ ಆರಂಭವಾಗಿದ್ದು ಸದ್ಯ ಅಂಕಪಟ್ಟಿಯಲ್ಲಿ ಸಾಕಷ್ಟು ಏರಿಳಿತಗಳು ಆಗುತ್ತಿವೆ.
ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಗೆದ್ದು ಬೀಗಿದ ಶ್ರೀಲಂಕಾ ಈ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಇದಾದ ಬಳಿಕ ಅನೇಕ ಟೆಸ್ಟ್ ಪಂದ್ಯಗಳು ನಡೆದರೂ ಸಹ ಯಾವುದೇ ಸರಣಿಯ ಫಲಿತಾಂಶಗಳು ಶ್ರೀಲಂಕಾದ ಅಗ್ರ ಸ್ಥಾನವನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. 24 ಅಂಕಗಳನ್ನು ಪಡೆದಿರುವ ಶ್ರೀಲಂಕಾ 100ರ ಗೆಲುವಿನ ಶೇಕಡಾಂಶದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇದೀಗ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜಯ ಗಳಿಸಿದ್ದು ಶ್ರೀಲಂಕಾ ರೀತಿಯೇ 24 ಅಂಕಗಳನ್ನು ಪಡೆದಿದ್ದು 100ರ ಗೆಲುವಿನ ಶೇಕಡಾಂಶದೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ. ಈ ಮೂಲಕ ಈ ಹಿಂದೆ ದ್ವಿತೀಯ ಸ್ಥಾನದಲ್ಲಿದ್ದ ಪಾಕಿಸ್ತಾನ ತೃತೀಯ ಸ್ಥಾನಕ್ಕೆ ಕುಸಿದಿದ್ದು, ತೃತೀಯ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಹೀಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಮುಗಿದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23ರ ಅಂಕ ಪಟ್ಟಿ ಈ ಕೆಳಕಂಡಂತಿದೆ..

ಡಿಸೆಂಬರ್ 20ರಂದು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿ
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಮುಗಿದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23ರ ಅಂಕಪಟ್ಟಿಯಲ್ಲಿ ವಿವಿಧ ತಂಡಗಳು ಪಡೆದುಕೊಂಡಿರುವ ಸ್ಥಾನ ಈ ಕೆಳಕಂಡಂತಿದೆ..
ಇದುವರೆಗೂ ಒಟ್ಟು 1 ಸರಣಿಯನ್ನು ಆಡಿರುವ ಶ್ರೀಲಂಕಾ ಆ ಸರಣಿಯ ಎಲ್ಲಾ 2 ಪಂದ್ಯಗಳಲ್ಲಿಯೂ ಜಯ ಗಳಿಸುವುದರ ಮೂಲಕ 24 ಅಂಕ ಮತ್ತು ಗೆಲುವಿನ ಶೇಕಡಾಂಶ 100ನ್ನು ಪಡೆದುಕೊಂಡಿದೆ. ಈ ಮೂಲಕ ಯಾವುದೇ ಡ್ರಾ, ಸೋಲು ಮತ್ತು ಪೆನಾಲ್ಟಿಗೆ ಒಳಗಾಗದೇ ಇರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
5 ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿಯ ಪೈಕಿ ಇಲ್ಲಿಯ ತನಕ ಕೇವಲ 2 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆಸ್ಟ್ರೇಲಿಯಾ ಈ ಎರಡೂ ಪಂದ್ಯಗಳಲ್ಲಿಯೂ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಈ ಮೂಲಕ 24 ಅಂಕಗಳನ್ನು ಪಡೆದುಕೊಂಡಿರುವ ಆಸ್ಟ್ರೇಲಿಯಾ 100ರ ಗೆಲುವಿನ ಶೇಕಡಾಂಶದೊಂದಿದೆ ದ್ವಿತೀಯ ಸ್ಥಾನಕ್ಕೇರಿದೆ.
ಇದುವರೆಗೂ ಒಟ್ಟು 2 ಸರಣಿಗಳನ್ನು ಆಡಿರುವ ಪಾಕಿಸ್ತಾನ ಆ ಸರಣಿಗಳ ಪೈಕಿ 2 ಪಂದ್ಯಗಳಲ್ಲಿ ಗೆದ್ದು, 1 ಪಂದ್ಯದಲ್ಲಿ ಸೋತು, 24 ಅಂಕಗಳನ್ನು ಪಡೆದುಕೊಂಡು, 66.6 ಗೆಲುವಿನ ಶೇಕಡಾಂಶದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನು ಇದುವರೆಗೂ ಒಟ್ಟು 2 ಟೆಸ್ಟ್ ಸರಣಿಗಳಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ 3 ಪಂದ್ಯಗಳಲ್ಲಿ ಗೆದ್ದು, 1 ಪಂದ್ಯದಲ್ಲಿ ಸೋತು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡು, 42 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಹೀಗೆ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿಗಿಂತ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡರೂ ಸಹ ಟೀಮ್ ಇಂಡಿಯಾ ನಾಲ್ಕನೇ ಸ್ಥಾನ ಪಡೆದುಕೊಳ್ಳುವುದಕ್ಕೆ ಕಾರಣ ಗೆಲುವಿನ ಶೇಕಡಾಂಶ ಮತ್ತು ಪೆನಾಲ್ಟಿ. ಹೌದು, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳಿಗಿಂತ ಟೀಮ್ ಇಂಡಿಯಾ ಹೆಚ್ಚು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ ಹಾಗೂ ಪಂದ್ಯವೊಂದರಲ್ಲಿ ಸೋತಿದೆ ಕೂಡ. ಹೀಗಾಗಿಯೇ ಟೀಮ್ ಇಂಡಿಯಾದ ಗೆಲುವಿನ ಶೇಕಡಾಂಶ ಕೇವಲ 58.33 ಇದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಹಾಗೂ ನಿಧಾನಗತಿಯ ಬೌಲಿಂಗ್ ಕಾರಣದಿಂದಾಗಿ ಓವರ್ ಪೆನಾಲ್ಟಿಗೆ ಟೀಮ್ ಇಂಡಿಯಾ ಒಳಗಾಗಿದ್ದು ಕೂಡ ಅಂಕಪಟ್ಟಿಯಲ್ಲಿನ ಕುಸಿತಕ್ಕೆ ಮತ್ತೊಂದು ಕಾರಣ ಎನ್ನಬಹುದು.

ಗೆಲುವಿನ ಶೇಕಡಾಂಶದ ಮೇಲೆ ಅಂಕಪಟ್ಟಿ ಲೆಕ್ಕಾಚಾರ
ಸದ್ಯ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ತಂಡಗಳಿಗಿಂತಲೂ ಹೆಚ್ಚಿನ ಪಂದ್ಯಗಳಲ್ಲಿ ಜಯ ಸಾಧಿಸಿದೆ ಮತ್ತು ಹೆಚ್ಚಿನ ಅಂಕಗಳನ್ನೂ ಕೂಡ ಪಡೆದುಕೊಂಡಿದೆ. ಆದರೂ ಸಹ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಿಲ್ಲ, ಇದಕ್ಕೆ ಕಾರಣ ಗೆಲುವಿನ ಶೇಕಡಾಂಶ. ಸದ್ಯ ಪ್ರಥಮ ಸ್ಥಾನದಲ್ಲಿರುವ ಶ್ರೀಲಂಕಾ ಯಾವುದೇ ಪಂದ್ಯಗಳಲ್ಲಿಯೂ ಸೋತಿಲ್ಲ ಹಾಗೂ ಡ್ರಾ ಮಾಡಿಕೊಂಡಿಲ್ಲ ಹಾಗೂ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕೂಡ ಇದೇ ರೀತಿ ಇದೆ. ಆದರೆ ಟೀಮ್ ಇಂಡಿಯಾ 1 ಪಂದ್ಯದಲ್ಲಿ ಸೋತಿದೆ ಮತ್ತು 2 ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ. ಹೀಗಾಗಿಯೇ ಟೀಮ್ ಇಂಡಿಯಾದ ಗೆಲುವಿನ ಶೇಕಡಾಂಶ ಕಡಿಮೆಯಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳಬೇಕೆಂದರೆ ಪಂದ್ಯಗಳಲ್ಲಿ ಸೋಲುವುದು ಮತ್ತು ಡ್ರಾ ಮಾಡಿಕೊಳ್ಳುವುದನ್ನು ಆದಷ್ಟು ತಡೆಯಲೇಬೇಕಾಗಿದೆ.

ಆ್ಯಶಸ್ ಮುಗಿಯುವಷ್ಟರಲ್ಲಿ ಅಗ್ರಸ್ಥಾನಕ್ಕೇರಲಿದೆ ಆಸ್ಟ್ರೇಲಿಯಾ
ಸದ್ಯ ಎರಡೇ ಎರಡ ಟೆಸ್ಟ್ ಪಂದ್ಯಗಳ ನಂತರ ಏಕಾಏಕಿ ದ್ವಿತೀಯ ಸ್ಥಾನಕ್ಕೆ ಕಾಲಿಟ್ಟು ಪ್ರಥಮ ಸ್ಥಾನದಲ್ಲಿರುವ ಶ್ರೀಲಂಕಾದಷ್ಟೇ ಅಂಕಗಳು ಹಾಗೂ ಗೆಲುವಿನ ಶೇಕಡಾಂಶವನ್ನು ಸಂಪಾದಿಸಿರುವ ಆಸ್ಟ್ರೇಲಿಯಾ ಇನ್ನುಳಿದ 3 ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಭರವಸೆ ಹುಟ್ಟಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಮುಂದಿನ 3 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಾದರೂ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದು ಒಳ್ಳೆಯ ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ತಲುಪಲಿದ್ದು ಒಂದಷ್ಟು ದಿನಗಳ ಕಾಲ ಆಸ್ಟ್ರೇಲಿಯಾದಿಂದ ಅಗ್ರ ಸ್ಥಾನವನ್ನು ಕಸಿದುಕೊಳ್ಳಲು ಇತರ ತಂಡಗಳಿಗೆ ಭಾರಿ ಕಷ್ಟ ಎದುರಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications