Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಆರಂಭಿಕ ಹಂತದಲ್ಲಿ ಪಂದ್ಯ ಸೋತರೆ ಈ ನಾಯಕನ ತಲೆದಂಡ ನಿಶ್ಚಿತ

ಇಂಡಿಯನ್ ಪ್ರೀಮಿಯರ್ ಲೀಗ್ ನ ಹದಿನಾಲ್ಕನೇ ಆವೃತ್ತಿಗೆ ಚಾಲನೆ ಸಿಕ್ಕಿದ್ದು, ಪ್ರೇಕ್ಷಕರಿಲ್ಲದೇ ಪಂದ್ಯ ನಡೆಯುತ್ತಿರುವುದು ಒಂದೆಡೆಯಾದರೆ, ಒಟ್ಟಾರೆಯಾಗಿ ಈ ಪಂದ್ಯವನ್ನು ವೀಕ್ಷಿಸುತ್ತಿರುವವರ ಸಂಖ್ಯೆಯಲ್ಲಿ ದಾಖಲೆಯನ್ನು ಬರೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯಾವಳಿಯ ಎರಡನೇ ಮ್ಯಾಚ್ ಅನ್ನು ಮಂಗಳವಾರ ಆಡುತ್ತಿದ್ದು, ಕೋಲ್ಕತ್ತ ನೈಟ್ ರೈಡರ್ಸ್ ತನ್ನ ಮೊದಲ ಪಂದ್ಯವನ್ನು ಬುಧವಾರ, ಮುಂಬೈ ಇಂಡಿಯನ್ಸ್ ಜೊತೆಗೆ ಅಬುಧಾಬಿಯಲ್ಲಿ ಆಡಲಿದೆ.

ಗೌತಂ ಗಂಭೀರ್ ನಾಯಕನಾಗಿದ್ದ ವೇಳೆ, ಉತ್ತಮ ಲಯದಲ್ಲಿದ್ದ ಕೆಕೆಆರ್ ತಂಡ, ಆ ನಂತರ ತನ್ನ ಫಾರಂ ಅನ್ನು ಮರಳಿ ತರುವಲ್ಲಿ ವಿಫಲವಾಗುತ್ತಾ ಬಂದಿದೆ. ಕಳೆದ ಐಪಿಎಲ್ ನಲ್ಲಿ ಕೆಕೆಆರ್ ಐದನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಇದುವರೆಗೆ ಎರಡು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ತಂಡವನ್ನು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ದಿನೇಶ್ ಕಾರ್ತಿಕ್ ಮುನ್ನಡೆಸುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಪಂದ್ಯ ಸೋತರೆ ಈ ನಾಯಕನ ತಲೆದಂಡ ನಿಶ್ಚಿತ.. ಮುಂದೆ ಓದಿ..

ಆಲ್ರೌಂಡರ್ ಆಟಕ್ಕೆ ಹೆಸರಾಗಿರುವ ಆಂಡ್ರ್ಯೂ ರಸೆಲ್

ಆಲ್ರೌಂಡರ್ ಆಟಕ್ಕೆ ಹೆಸರಾಗಿರುವ ಆಂಡ್ರ್ಯೂ ರಸೆಲ್

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೆಕೆಆರ್ ಬಲಾಢ್ಯವಾಗಿ ಕಾಣಿಸುತ್ತಿದೆ. ಆಲ್ರೌಂಡರ್ ಆಟಕ್ಕೆ ಹೆಸರಾಗಿರುವ ಆಂಡ್ರ್ಯೂ ರಸೆಲ್ ತಂಡಕ್ಕೆ ಹೆಚ್ಚಿನ ಆಸರೆಯಾಗಿರುವುದು ಒಂದೆಡೆಯಾದರೆ, ಉಪನಾಯಕರಾಗಿ ಇಯಾನ್ ಮಾರ್ಗನ್ ಇರುವುದು ತಂಡಕ್ಕೆ ಪ್ಲಸ್ ಪಾಯಿಂಟ್.

ಆರಂಭಿಕ ಹಂತದಲ್ಲಿ ಪಂದ್ಯ ಸೋತರೆ ಈ ನಾಯಕನ ತಲೆದಂಡ ನಿಶ್ಚಿತ

ಆರಂಭಿಕ ಹಂತದಲ್ಲಿ ಪಂದ್ಯ ಸೋತರೆ ಈ ನಾಯಕನ ತಲೆದಂಡ ನಿಶ್ಚಿತ

ಆದರೆ, ಆರಂಭಿಕ ಹಂತದ ಪಂದ್ಯಗಳಲ್ಲಿ ಕೆಕೆಆರ್ ಸೋತರೆ, ಆ ತಂಡದ ಮಾಲಕರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೇ, ದಿನೇಶ್ ಕಾರ್ತಿಕ ಅವರನ್ನು ಕೆಳಗಿಳಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾಗಿ, ಮೊದಲ ಪಂದ್ಯದಿಂದಲೇ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ದಿನೇಶ್ ಕಾರ್ತಿಕ್ ಮೇಲಿದೆ.

ಮ್ಯಾಚ್ ಫಿನಿಷರ್ ಎಂದೇ ಹೆಸರು ಪಡೆದಿರುವ ಇಯಾನ್ ಮಾರ್ಗನ್

ಮ್ಯಾಚ್ ಫಿನಿಷರ್ ಎಂದೇ ಹೆಸರು ಪಡೆದಿರುವ ಇಯಾನ್ ಮಾರ್ಗನ್

ಇಂಗ್ಲೆಂಡಿನ ಎಡಗೈ ಬ್ಯಾಟ್ಸ್ ಮ್ಯಾನ್ ಮತ್ತು ಮ್ಯಾಚ್ ಫಿನಿಷರ್ ಎಂದೇ ಹೆಸರು ಪಡೆದಿರುವ ಇಯಾನ್ ಮಾರ್ಗನ್, ಕೆಕೆಆರ್ ತಂಡದ ಉಪನಾಯಕರೂ ಕೂಡಾ. ಒಂದು ವೇಳೆ, ದಿನೇಶ್ ಕಾರ್ತಿಕ್ ತಂಡವನ್ನು ಮುನ್ನಡೆಸಲು ವಿಫಲರಾದರೆ, ಮಾರ್ಗನ್ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಮಾರ್ಗನ್ ಮೇಲೆ ಭಾರೀ ಭರವಸೆಯನ್ನು ಇಟ್ಟಿರುವ ಕೆಕೆಆರ್

ಮಾರ್ಗನ್ ಮೇಲೆ ಭಾರೀ ಭರವಸೆಯನ್ನು ಇಟ್ಟಿರುವ ಕೆಕೆಆರ್

ಈ ಬಾರಿಯ ಐಪಿಎಲ್ ಬಿಡ್ ನಲ್ಲಿ ಅತಿಹೆಚ್ಚು ಮೊತ್ತ ನೀಡಿ ಕೆಕೆಆರ್, ಮಾರ್ಗನ್ ಅವರನ್ನು ಖರೀದಿಸಿತ್ತು. ಮಾರ್ಗನ್ ಮೇಲೆ ಭಾರೀ ಭರವಸೆಯನ್ನು ಇಟ್ಟಿರುವ ಕೆಕೆಆರ್, ಕಾರ್ತಿಕ ವಿಫಲಗೊಂಡರೆ, ಅವರನ್ನು ನಾಯಕನನ್ನಾಗಿ ನೇಮಿಸುವುದು ನಿಶ್ಚಿತ.

Story first published: Wednesday, September 23, 2020, 10:26 [IST]
Other articles published on Sep 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+