"ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಸರಣಿ ಡ್ರಾ ಮಾಡಿಕೊಂಡರು ಗೆಲುವಿಗೆ ಸಮ"

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದ್ದರೆ ಅತ್ತ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿ ಆತ್ಮವಿಶ್ವಾಸದಿಂದ ಬೀಗುತ್ತಿದೆ.
ಈ ಸರಣಿಯ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದ್ದು, ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸರಣಿಯಲ್ಲಿ ಸಮಬಲಗೊಳಿಸಿ ಡ್ರಾ ಮಾಡಿಕೊಂಡರೂ ಅದು ಗೆಲುವಿಗೆ ಸಮ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬುಧವಾರದಿಂದ ಟೆಸ್ಟ್ ಸರಣಿ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ.
ಟೆಸ್ಟ್ ಪಂದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಇಂಗ್ಲೆಂಡ್ ವಾತಾವರಣ ತುಂಬಾ ಕಠಿಣ. ನನಗೆ ನಮ್ಮ ತಂಡದ ಬಗ್ಗೆ ತುಂಬಾ ದೊಡ್ಡ ನಿರೀಕ್ಷೆಯಿದೆ. ಸರಣಿಯನ್ನು ಅವರು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೂ ಅದು ಗೆಲುವಿಗೆ ಸಮನಾಗಿರುತ್ತದೆ ಎಂದು ಅಪ್ರಿದಿ ಕ್ರಿಕೆಟ್ ಪಾಕಿಸ್ತಾನ.ಕಾಮ್.ಪಿಕೆ. ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್‌ನ ಮುಖ್ಯ ಕೋಚ್ ಹಾಗೂ ಮುಖ್ಯ ಆಯ್ಕೆಗಾರ ಮಿಸ್ಬಾ ಉಲ್ ಹಕ್, ಬ್ಯಾಟಿಂಗ್ ಕೋಚ್ ಯೂನಿಸ್ ಖಾನ್ ಬವಲಿಂಗ್ ಕೋಚ್ ವಾಕರ್ ಯೂನಿಸ್ ಮತ್ತು ಸ್ಪಿನ್ ಕೋಚ್ ಆಗಿ ಸಕ್ಲೇನ್ ಮುಷ್ತಾಕ್ ತಂಡದಲ್ಲಿದ್ದಾರೆ. ಇವರೆಲ್ಲರೂ ಇಂಗ್ಲೆಂಡ್‌ನಲ್ಲಿ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದು ಇದು ತಂಡಕ್ಕೆ ದೊಡ್ಡ ನೆರವಾಗಲಿದೆ ಎಂದು ಅಫ್ರಿದಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ಅನುಭವಿಗಳೇ ಇರುವುದು ನಮ್ಮ ತಂಡಕ್ಕೆ ಒಂದು ದೊಡ್ಡ ಪ್ಲಸ್ ಎಂದು ನಾನು ಭಾವಿಸುತ್ತೇನೆ ಮತ್ತು ಈ ಮಾಜಿ ಪ್ರಮುಖ ಆಟಗಾರರು ಟೆಸ್ಟ್‌ನಲ್ಲಿ ಸೆಶನ್‌ನಿಂದ ಸೆಶನ್‌ಗೆ ಆಟಗಾರರಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಶಾಹಿದ್ ಅಫ್ರಿದಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications