Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಟ್ನೆಸ್ ಟೆಸ್ಟ್ ಪಾಸಾದ್ರೆ ರೋಹಿತ್ ಆಸ್ಟ್ರೇಲಿಯಾದಲ್ಲಿರಬೇಕು: ಸಚಿನ್

If Rohit Sharma passes fitness test, he should be in Australia, Sachin Tendulkar

ಸಿಡ್ನಿ: ಭಾರತ vs ಆಸ್ಟ್ರೇಲಿಯಾ ನಡುವಿನ ನಿಯಮಿತ ಓವರ್‌ಗಳ ಸರಣಿ ಮುಕ್ತಾಯ ಕಂಡಿದೆ. ಆದರೆ ಎರಡೂ ತಂಡಗಳಿಗೆ ಟೆಸ್ಟ್ ಸರಣಿಯ ರೂಪದಲ್ಲಿ ನಿಜವಾದ ಸವಾಲು ಎದುರಾಗಲಿದೆ. ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾದಿಂದ ಸ್ಟೀವ್ ಸ್ಮಿತ್ ಆಡುತ್ತಿದ್ದರೆ, ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಮಾತ್ರ ಆಡಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ ನಡುವಿನ ಕುತೂಹಲಕಾರಿ ಟೆಸ್ಟ್ ಸರಣಿಯ ಬಗ್ಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮಾತನಾಡಿದ್ದಾರೆ. ಎಎನ್‌ಐ ಜೊತೆ ಮಾತನಾಡಿರುವ ಸಚಿನ್, ವಿರಾಟ್ ಕೊಹ್ಲಿ ಅನುಪಸ್ಥಿತಿ ಇರುವುದರಿಂದ ರೋಹಿತ್ ಶರ್ಮಾ ಆದಷ್ಟು ಶ್ರೀಘ್ರ ತಂಡ ಸೇರಿಕೊಳ್ಳಬೇಕು ಎಂದಿದ್ದಾರೆ.

'ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ರೋಹಿತ್ ಎಲ್ಲಾ ಫಿಟ್ನೆಸ್ ಪರೀಕ್ಷೆಗಳನ್ನು ಪಾಸ್ ಮಾಡಿದ್ದರೆ ರೋಹಿತ್ ಅವರಂತ ಆಟಗಾರರು ಆಸ್ಟ್ರೇಲಿಯಾದಂತ ಎದುರಾಳಿ ವಿರುದ್ಧ ಆಡಲೇಬೇಕಾಗುತ್ತದೆ. ಎಲ್ಲಾ ಮಾನದಂಡಗಳನ್ನು ರೋಹಿತ್ ಪೂರೈಸಿದರೆ ಅವರು ಶೀಘ್ರ ಆಸ್ಟ್ರೇಲಿಯಾದಲ್ಲಿರಬೇಕು,' ಎಂದು ಸಚಿನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಸೋಲನುಭವಿಸಿದೆ. ಇನ್ನು ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 2-1ರ ಜಯ ಗಳಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಡಿಸೆಂಬರ್ 11ಕ್ಕೆ ಅಭ್ಯಾಸ ಪಂದ್ಯ ನಡೆಯಲಿದೆ.

Story first published: Wednesday, December 9, 2020, 17:54 [IST]
Other articles published on Dec 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+