ವಿರಾಟ್ ಕೊಹ್ಲಿ ಈ ವಯಸ್ಸಿನವರೆಗೆ ಕ್ರಿಕೆಟ್ ಆಡಿದರೆ, 100 ಶತಕ ದಾಖಲಿಸುತ್ತಾರೆ; ವ್ಯಾನ್ ಡೆರ್ ಮೆರ್ವೆ

ತಮ್ಮ 38ನೇ ವಯಸ್ಸಿನಲ್ಲಿಯೂ ರೋಲೆಫ್ ವ್ಯಾನ್ ಡೆರ್ ಮೆರ್ವೆ ಅವರು ದಕ್ಷಿಣ ಆಫ್ರಿಕಾದ ಪ್ರೀಮಿಯರ್ ಟಿ20 ಲೀಗ್‌ನ SA20 ಉದ್ಘಾಟನಾ ಆವೃತ್ತಿಯಲ್ಲಿ ಬೌಲಿಂಗ್ ಪ್ರದರ್ಶನದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.
ಎಡಗೈ ಸ್ಪಿನ್ನರ್ ವ್ಯಾನ್ ಡೆರ್ ಮೆರ್ವೆ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಪರ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಸಾಧನೆ ಸೇರಿದಂತೆ 6 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಎರಡು ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುವ ಕೆಲವೇ ಆಟಗಾರರಲ್ಲಿ ಒಬ್ಬರಾಗಿರುವ ದಕ್ಷಿಣ ಆಫ್ರಿಕಾ ಮೂಲದ ನೆದರ್‌ಲ್ಯಾಂಡ್ ಆಲ್‌ರೌಂಡರ್ ವ್ಯಾನ್ ಡೆರ್ ಮೆರ್ವೆ, ಆಟದ ಜೊತೆಗೆ ಕ್ರಿಕೆಟ್ ತರಬೇತಿಯನ್ನೂ ನೀಡುತ್ತಾರೆ ಮತ್ತು ಯುವ ಆಟಗಾರರಿಗೆ ಪ್ರೇರೇಪಣೆ ನೀಡುತ್ತಿದ್ದಾರೆ.
SA20 ಲೀಗ್ ಅಭಿಯಾನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರೊಲೆಫ್ ವ್ಯಾನ್ ಡೆರ್ ಮೆರ್ವೆ, ವಿರಾಟ್ ಕೊಹ್ಲಿ ರೀತಿ ಫಿಟ್‌ನೆಸ್ ಹೊದಿರುವ ಯಾರಾದರೂ 40 ವರ್ಷ ವಯಸ್ಸಿನವರೆಗೆ ಕ್ರಿಕೆಟ್ ಆಡುವುದನ್ನು ಮುಂದುವರಿಸಬಹುದು ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಬೆಳವಣಿಗೆಯಲ್ಲಿ ಹಲವು ವರ್ಷಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದೊಡ್ಡ ಪಾತ್ರ ವಹಿಸಿದೆ ಎಂದ ವ್ಯಾನ್ ಡೆರ್ ಮೆರ್ವೆ, ಇದೀಗ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ 100 ಶತಕಗಳ ಸಾಧನೆ ಮುರಿಯುವ ಸಾಮರ್ಥ್ಯ ವಿರಾಟ್ ಕೊಹ್ಲಿಗಿದೆ ಎಂದು ತಿಳಿಸಿದರು.
3 ವರ್ಷಗಳ ಕಾಲ ಶತಕ ರಹಿತ ಕಳಪೆ ಬ್ಯಾಟಿಂಗ್ ಫಾರ್ಮ್ ಸಹಿಸಿಕೊಂಡಿರುವ ವಿರಾಟ್ ಕೊಹ್ಲಿ, ಕಳೆದ 6 ತಿಂಗಳಲ್ಲಿ 4 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸುವ ಮೂಲಕ ಅತ್ಯುತ್ತಮ ಫಾರ್ಮ್‌ಗೆ ತಲುಪಿದ್ದಾರೆ.
16 ಏಕದಿನ ಪಂದ್ಯಗಳು ಮತ್ತು 52 ಟಿ20 ಪಂದ್ಯಗಳನ್ನು ಆಡಿರುವ 38 ವರ್ಷದ ನೆದರ್ಲ್ಯಾಂಡ್ಸ್‌ನ ವ್ಯಾನ್ ಡೆರ್ ಮೆರ್ವೆ ಕ್ರಿಕೆಟ್ ಅನ್ನು ಉನ್ನತ ಮಟ್ಟದಲ್ಲಿ ಮುಂದುವರಿಸಲು ಪ್ರೇರೇಪಿಸುವ ಬಗ್ಗೆ ಮಾತನಾಡಿದರು.
"ನಾನು ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ, ನಾನು ಪಂದ್ಯಗಳನ್ನು ಗೆಲ್ಲಲು ಇಷ್ಟಪಡುತ್ತೇನೆ. ನಾನು ಒಬ್ಬ ಸ್ಪರ್ಧಾತ್ಮಕ ವ್ಯಕ್ತಿ. ಆಟಗಳನ್ನು ಗೆಲ್ಲುವ ಉತ್ಸಾಹವು ನಿಮ್ಮನ್ನು ಮುಂದುವರಿಸುತ್ತದೆ. ನಾನು ಪಂದ್ಯಗಳನ್ನು ಗೆಲ್ಲುವವರೆಗೂ ನಾನು ಮುಂದುವರಿಯುತ್ತೇನೆ. ಅದು ನನ್ನನ್ನು ಪ್ರೇರೇಪಿಸುತ್ತದೆ," ಎಂದು ವ್ಯಾನ್ ಡೆರ್ ಮೆರ್ವೆ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications