'ನಾನು ಹೆಮ್ಮೆಯ ಭಾರತೀಯ ಮುಸ್ಲಿಂ...'; ಪಾಕಿಸ್ತಾನ ಟ್ರೋಲರ್‌ಗಳ ಬೆವರಿಳಿಸಿದ ಮೊಹಮ್ಮದ್ ಶಮಿ!
2023ರ ಐಸಿಸಿ ಏಕದಿನ ವಿಶ್ವಕಪ್‌ನ ಪಂದ್ಯವೊಂದರಲ್ಲಿ ಭಾರತ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರನ್ನು ಟ್ರೋಲ್ ಮಾಡಲಾಯಿತು. ಏಕೆಂದರೆ, ಬೌಲಿಂಗ್ ಮಾಡಿ ದಣಿದಿದ್ದ ಶಮಿ ವಿಕೆಟ್ ಪಡೆದ ತಕ್ಷಣ ನೆಲದ ಮೇಲೆ ಮಂಡಿಯೂರಿದರು.
ಆದರೆ, ಇದನ್ನೇ ಪಾಕಿಸ್ತಾನದ ಟ್ರೋಲ್ ಪೇಜ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷವನ್ನು ಹರಡಲು ಬಳಸಿಕೊಂಡವು. ಮೈದಾನದಲ್ಲಿ ಮೊಹಮ್ಮದ್ ಶಮಿ ಅವರ ಚಿತ್ರವನ್ನು ಬಳಸಿದವು ಮತ್ತು ಮುಸ್ಲಿಂ ಸಂಜಾತ ಭಾರತೀಯ ಕ್ರಿಕೆಟಿಗನಿಗೆ ಬೌಲಿಂಗ್ ದಾಖಲೆ ನಿರ್ಮಿಸಿದ ನಂತರ, 'ಸಜ್ದಾ' ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಬರೆದುಕೊಂಡವು.

'ಸಜ್ದಾ' ಎಂಬುದು ಸಾಷ್ಟಾಂಗ ಎಂಬ ಉರ್ದು ಪದವಾಗಿದೆ. ಇದು ಅಲ್ಲಾಹನಿಗೆ ಧನ್ಯವಾದ ಸಲ್ಲಿಸುವ ಮುಸ್ಲಿಂ ಸಮುದಾಯದ ಸೂಚಕವಾಗಿದೆ.
ಇದೀಗ ಮೊಹಮ್ಮದ್ ಶಮಿ ಅವರು ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ. ಮೈದಾನದಲ್ಲಿ ಏನಾಯಿತು ಮತ್ತು ವಿಕೆಟ್ ಪಡೆದ ನಂತರ, ತಾವು ನಿಜವಾಗಿಯೂ 'ಸಜ್ದಾ' ಮಾಡಲು ಬಯಸಿದ್ದರಾ ಎಂದು ವಿವರಿಸಿದ್ದಾರೆ.

ಮೊಹಮ್ಮದ್ ಶಮಿ ಪಾಕಿಸ್ತಾನದ ಟ್ರೋಲ್‌ಗಳನ್ನು ಟೀಕಿಸಿದರು ಮತ್ತು ತಾನು ಸಜ್ದಾ ಮಾಡಲು ಬಯಸಿದರೆ, ಭಾರತದಲ್ಲಿ ಅದನ್ನು ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ತನ್ನ ಧರ್ಮವನ್ನು ಅನುಸರಿಸುವುದನ್ನು ಯಾರಾದರೂ ತಡೆದರೆ, ನಾನು ಭಾರತದಲ್ಲಿ ವಾಸಿಸುವುದಿಲ್ಲ ಎಂದು ಉತ್ತರಿಸಿದರು.
ಆಜ್ ತಕ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೊಹಮ್ಮದ್ ಶಮಿ, ಮೈದಾನದಲ್ಲಿ ಬಾಡಿ ಲಾಂಗ್ವೇಜ್‌ಗಾಗಿ ಪಾಕಿಸ್ತಾನಿ ಟ್ರೋಲ್‌ಗಳು ತನ್ನ ಮೇಲೆ ದಾಳಿ ಮಾಡಿದ ನಂತರ ಶಮಿಗೆ ಏನನಿಸಿತು ಎಂಬ ಪ್ರಶ್ನೆ ಕೇಳಲಾಯಿತು.
"ಯಾರಾದರೂ ಸಜ್ದಾ ಮಾಡಲು ಬಯಸಿದರೆ, ಯಾರು ತಡೆಯುತ್ತಾರೆ? ನಾನು ಯಾರನ್ನೂ ನಿಮ್ಮ ಧರ್ಮದಿಂದ ತಡೆಯುವುದಿಲ್ಲ. ನೀವು ಯಾರನ್ನೂ ನನ್ನ ಧರ್ಮದಿಂದ ತಡೆಯುವುದಿಲ್ಲ. ನಾನು ಸಜ್ದಾ ಮಾಡಬೇಕೆನಿಸಿದರೆ, ನಾನು ಅದನ್ನು ಮಾಡುತ್ತೇನೆ. ಏನು ಸಮಸ್ಯೆ? ನಾನು ಮುಸ್ಲಿಂ ಎಂದು ಹೆಮ್ಮೆಯಿಂದ ಹೇಳುತ್ತೇನೆ, ನಾನು ಭಾರತೀಯ, ನಾನು ಭಾರತೀಯ ಮುಸ್ಲಿಂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ," ಎಂದು ಪ್ರತಿಕ್ರಿಯಿಸಿದರು.
ಅನೇಕ ಪಾಕಿಸ್ತಾನಿ ಕ್ರಿಕೆಟಿಗರು ಅಥವಾ ಇತರ ಮುಸ್ಲಿಂ ಕ್ರಿಕೆಟಿಗರು ಮಾಡುವಂತಹ 'ಸಜ್ದಾ'ವನ್ನು ವಿಕೆಟ್ ಪಡೆದ ನಂತರ, ತಾನು ಎಂದಿಗೂ ಕ್ರಿಕೆಟ್ ಮೈದಾನದಲ್ಲಿ ಮಾಡುವುದಿಲ್ಲ ಎಂದು ಮೊಹಮ್ಮದ್ ಶಮಿ ಹೇಳಿದರು.
ಪಶ್ಚಿಮ ಬಂಗಾಳದ ಅಮ್ರೋಹಾ ಮೂಲದ ವೇಗಿ ಶಮಿ ಅವರು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಗೊಂದಲವನ್ನು ಸೃಷ್ಟಿಸುವ ಏಕೈಕ ಉದ್ದೇಶವನ್ನು ಹೊಂದಿರುವ ಜನರಿದ್ದಾರೆ ಎಂದು ಟೀಕಿಸಿದರು.
ವಿಶ್ವಕಪ್ ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ಮಂಡಿಯೂರಿದ್ದು ಏಕೆ ಎಂದು ವಿವರಿಸಿದ ಮೊಹಮ್ಮದ್ ಶಮಿ, "ನಾನು ನನ್ನ ಪ್ರಯತ್ನವನ್ನು ಮೀರಿ ಬೌಲಿಂಗ್ ಮಾಡುತ್ತಿರುವುದರಿಂದ, ನಾನು ಮಂಡಿಯೂರಿ ಕೆಳಗೆ ಬಿದ್ದೆ, ನಾನು ಸುಸ್ತಾಗಿದ್ದೆ. ಜನರು ವಿಭಿನ್ನ ರೀತಿಯಲ್ಲಿ ಗೆಸ್ಚರ್ ತೆಗೆದುಕೊಂಡರು," ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications