Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೂತನ ಏಕದಿನ ರ್‍ಯಾಂಕಿಂಗ್: ಕೊಹ್ಲಿಯನ್ನು ಹಿಂದಿಕ್ಕಿದ ಇಮಾಮ್ ಉಲ್ ಹಕ್; ರೋಹಿತ್ ಎಷ್ಟನೇ ಸ್ಥಾನ?

Imam Ul Haq overtakes Virat Kohli in latest ICC ODI rankings and Kohli slips to 3rd position

ಪಾಕಿಸ್ತಾನದ ಕ್ರಿಕೆಟಿಗರು ಇದೇ ಮೊದಲ ಬಾರಿಗೆ ಐಸಿಸಿ ಏಕದಿನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 2 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೌದು, ನೂತನ ಐಸಿಸಿ ಶ್ರೇಯಾಂಕ ಪಟ್ಟಿ ಬಿಡುಗಡೆಗೊಂಡಿದ್ದು, ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಅಗ್ರಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಇಮಮ್ ಉಲ್ ಹಿಕ್ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ನಡುವೆ ನಡೆದಿದ್ದ ಏಕದಿನ ಸರಣಿಯಲ್ಲಿ ಪಾಕಿಸ್ತಾನದ ಇಮಾಮ್ ಉಲ್ ಹಕ್ ಮೂರು ಅರ್ಧಶತಕಗಳನ್ನು ಬಾರಿಸಿ ಮಿಂಚಿ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು ಹಾಗೂ ಇಮಾಮ್ ಉಲ್ ಹಕ್ ಅವರ ಈ ಪ್ರದರ್ಶನವೇ ಈ ಅವರಿಗೆ ಇದೀಗ ಎಂಆರ್‌ಎಫ್ ನೂತನ ಏಕದಿನ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಲು ಸಹಕಾರಿಯಾಗಿದೆ.

26 ವರ್ಷದ ಇಮಾಮ್ ಉಲ್ ಹಕ್ 20 ಅಂಕಗಳನ್ನು ಸಂಪಾದಿಸುವುದರ ಮೂಲಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದು, ಒಟ್ಟಾರೆ 815 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ವೃತ್ತಿ ಜೀವನದಲ್ಲೇ ಅತಿಹೆಚ್ಚು ಅಂಕಗಳನ್ನು ಸಂಪಾದಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಬಾಬರ್ ಅಜಮ್ ಅಗ್ರಸ್ಥಾನದಲ್ಲಿಯೇ ಮುಂದುವರೆದಿದ್ದು, ಟಾಪ್ 10 ಪಟ್ಟಿಯಲ್ಲಿ ಕೆಲ ಬದಲಾವಣೆಗಳಾಗಿವೆ. ಹೀಗೆ ನೂತನವಾಗಿ ಪ್ರಕಟಗೊಂಡಿರುವ ಐಸಿಸಿ ಶ್ರೇಯಾಂಕ ಪಟ್ಟಿ ಹೇಗಿದೆ ಹಾಗೂ ಯಾವ ವ್ಯತ್ಯಾಸಗಳಾಗಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಟಾಪ್ 10 ಪಟ್ಟಿ

ಟಾಪ್ 10 ಪಟ್ಟಿ

ನೂತನ ಏಕದಿನ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿ ಈ ಕೆಳಕಂಡಂತಿದೆ..

1. ಬಾಬರ್ ಅಜಮ್ - ಪಾಕಿಸ್ತಾನ - 892 ಅಂಕಗಳು

2. ಉಮಾಮ್ ಉಲ್ ಹಕ್ - ಪಾಕಿಸ್ತಾನ - 815 ಅಂಕಗಳು

3. ವಿರಾಟ್ ಕೊಹ್ಲಿ - ಭಾರತ - 811 ಅಂಕಗಳು

4. ರೋಹಿತ್ ಶರ್ಮಾ - ಭಾರತ - 791 ಅಂಕಗಳು

5. ಕ್ವಿಂಟನ್ ಡಿ ಕಾಕ್ - ದಕ್ಷಿಣ ಆಫ್ರಿಕಾ - 789 ಅಂಕಗಳು

6. ರಾಸ್ ಟೇಲರ್ - ನ್ಯೂಜಿಲೆಂಡ್ - 775 ಅಂಕಗಳು

7. ರಸ್ಸಿ ವಾನ್‌ಡರ್ ಡಸೆನ್ - ದಕ್ಷಿಣ ಆಫ್ರಿಕಾ - 769 ಅಂಕಗಳು

8. ಜಾನಿ ಬೇರ್‌ಸ್ಟೋ - ಇಂಗ್ಲೆಂಡ್ - 746 ಅಂಕಗಳು

9. ಆರನ್ ಫಿಂಚ್ - ಆಸ್ಟ್ರೇಲಿಯಾ - 745 ಅಂಕಗಳು

10. ಡೇವಿಡ್ ವಾರ್ನರ್ - 737 ಅಂಕಗಳು

ಮೂರನೇ ಸ್ಥಾನಕ್ಕೆ ಕುಸಿದ ಕೊಹ್ಲಿ

ಮೂರನೇ ಸ್ಥಾನಕ್ಕೆ ಕುಸಿದ ಕೊಹ್ಲಿ

ಇನ್ನು ಈ ನೂತನ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಹಾಗೂ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಐರ್ಲೆಂಡ್ ವಿರುದ್ಧದ ಸರಣಿಗೆ VVS ಲಕ್ಷ್ಮಣ್ ಕೋಚ್:ಹಾಗಾದ್ರೆ ದ್ರಾವಿಡ್ ಕಥೆ??? | *Cricket | Oneindia Kannada
ಐದನೇ ಸ್ಥಾನಕ್ಕೆ ಏರಿಕೆ ಕಂಡ ಬುಮ್ರಾ

ಐದನೇ ಸ್ಥಾನಕ್ಕೆ ಏರಿಕೆ ಕಂಡ ಬುಮ್ರಾ

ಇನ್ನು ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ 679 ಅಂಕಗಳನ್ನು ಪಡೆದುಕೊಂಡಿದ್ದು ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. 726 ಅಂಕಗಳನ್ನು ಪಡೆದುಕೊಂಡಿರುವ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದಾರೆ.

Story first published: Wednesday, June 15, 2022, 17:44 [IST]
Other articles published on Jun 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+