IML 2025: ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಮಾಸ್ಟರ್ಸ್ ತಂಡ ಪ್ರಕಟ
ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್ (ಐಎಂಎಲ್) 2025ರ ಟೂರ್ನಿಯೂ ಫೆಬ್ರವರಿ 22 ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ವಿಶ್ವ ಕ್ರಿಕೆಟ್‌ನ ಮಾಜಿ ದಿಗ್ಗಜ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಮತ್ತೊಮ್ಮೆ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಮೈದಾನದಲ್ಲಿ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ನೇತೃತ್ವದಲ್ಲಿ 15 ಸದಸ್ಯರ ಇಂಡಿಯಾ ಮಾಸ್ಟರ್ಸ್ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಮಾಜಿ ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ಅಂಬಟಿ ರಾಯುಡು ಅವರಂತಹ ದೊಡ್ಡ ಹೆಸರುಗಳು ಸೇರಿವೆ.
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನಕ್ಕೆ ಮರಳುವುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ಕಾಲದಲ್ಲಿ ಸಚಿನ್ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಸಚಿನ್ ಮುನ್ನಡೆಸಲಿರುವ ಇಂಡಿಯಾ ಮಾಸ್ಟರ್ಸ್ ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ.

2007 ಟಿ20 ಮತ್ತು 2011 ಏಕದಿನ ವಿಶ್ವಕಪ್ ವಿಜೇತ ತಂಡಗಳ ಆಟಗಾರರು ಕೂಟ ಇಂಡಿಯಾ ಮಾಸ್ಟರ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಯುವರಾಜ್ ಸಿಂಗ್ ಅವರೊಂದಿಗೆ ಸುರೇಶ್ ರೈನಾ ಮತ್ತು ಅಂಬಟಿ ರಾಯುಡು ಬ್ಯಾಟಿಂಗ್ ಮಾಡಲಿದ್ದಾರೆ. ಪಠಾಣ್ ಸಹೋದರರಾದ ಇರ್ಫಾನ್ ಮತ್ತು ಯೂಸುಫ್ ತಮ್ಮ ಸ್ಫೋಟಕ ಆಲ್‌ರೌಂಡರ್ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ನಮನ್ ಓಜಾ ಸ್ಟಂಪ್‌ಗಳ ಹಿಂದೆ ವಿಕೆಟ್‌ಕೀಪರ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ವಿನಯ್ ಕುಮಾರ್ ಮತ್ತು ಧವಲ್ ಕುಲಕರ್ಣಿ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿದ್ದಾರೆ. ಸ್ಟುವರ್ಟ್ ಬಿನ್ನಿ, ಶಹಬಾಜ್ ನದೀಮ್, ರಾಹುಲ್ ಶರ್ಮಾ, ಪವನ್ ನೇಗಿ, ಗುರುಕೀರತ್ ಸಿಂಗ್ ಮಾನ್ ಮತ್ತು ಅಭಿಮನ್ಯು ಮಿಥುನ್ ಅವರಂತಹ ಅನುಭವಿ ಆಟಗಾರರು ಇಂಡಿಯಾ ಮಾಸ್ಟರ್ಸ್‌ನನ್ನು ಉತ್ತಮ ತಂಡವನ್ನಾಗಿ ಮಾಡಿದ್ದಾರೆ.
ಭಾರತ, ಶ್ರೀಲಂಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ದಿಗ್ಗಜರು ಮತ್ತೊಮ್ಮೆ ಮೈದಾನಕ್ಕೆ ಇಳಿಯುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.
ಇಂಡಿಯಾ ಮಾಸ್ಟರ್ಸ್
ಸಚಿನ್ ತೆಂಡೂಲ್ಕರ್ (ನಾಯಕ), ಯುವರಾಜ್ ಸಿಂಗ್, ಸುರೇಶ್ ರೈನಾ, ಅಂಬಟಿ ರಾಯುಡು, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಧವಲ್ ಕುಲಕರ್ಣಿ, ವಿನಯ್ ಕುಮಾರ್, ಶಹಬಾಜ್ ನದೀಮ್, ರಾಹುಲ್ ಶರ್ಮಾ, ನಮನ್ ಓಜಾ, ಪವನ್ ನೇಗಿ, ಗುರುಕೀರತ್ ಸಿಂಗ್ ಮಾನ್, ಅಭಿಮನ್ಯು ಮಿಥುನ್.
ಶ್ರೀಲಂಕಾ ಮಾಸ್ಟರ್ಸ್
ಕುಮಾರ್ ಸಂಗಕ್ಕಾರ (ನಾಯಕ), ರೋಮೇಶ್ ಕಲುವಿತರಣಾ, ಅಶಾನ್ ಪ್ರಿಯಂಜನ್, ಉಪುಲ್ ತರಂಗ, ನುವಾನ್ ಪ್ರದೀಪ್, ಲಹಿರು ತಿರಿಮನ್ನೆ, ಚಿಂತಕ ಜಯಸಿಂಘೆ, ಸೀಕುಗೆ ಪ್ರಸನ್ನ, ಜೀವನ್ ಮೆಂಡಿಸ್, ಇಸುರು ಉದಾನ, ಧಮ್ಮಿಕಾ ಪ್ರಸಾದ್, ಸುರಂಗ ಲಕ್ಮಲ್, ದಿಲ್ರುವಾನ್ ಪೆರೆರಾ, ಅಸೇಲಾ ಗುಣರತ್ನೆ, ಚತುರಂಗ ಡಿ ಸಿಲ್ವಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications