For Quick Alerts
ALLOW NOTIFICATIONS  
For Daily Alerts
 

ಸಚಿನ್, ದ್ರಾವಿಡ್ ದಿಗ್ಗಜರ ಕ್ಲಬ್ ಸೇರಿದ ಎಂಎಸ್ ಧೋನಿ

By Mahesh

ಆಕ್ಲೆಂಡ್, ಮಾ.14: ಟೀಂ ಇಂಡಿಯಾ ಎಂಎಸ್ ಧೋನಿ ವಿಶ್ವಕಪ್ 2015 ಟೂರ್ನಿಯಲ್ಲಿ ಮತ್ತೊಂದು ವೈಯಕ್ತಿಕ ಮೈಲಿಗಲ್ಲು ದಾಟಿದ್ದಾರೆ. ಸಚಿನ್, ದ್ರಾವಿಡ್, ಅಜರ್ ಇರುವ ವಿಶಿಷ್ಟ ಸಾಧಕರ ಪಟ್ಟಿಗೆ ಧೋನಿ ಕೂಡಾ ಸೇರಿದ್ದಾರೆ.

2004ರಲ್ಲಿ ಬಾಂಗ್ಲಾದೇಶ ವಿರುದ್ಧ ಡಿ.23ರ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಧೋನಿ ಟೀಂ ಇಂಡಿಯಾ ಸೇರಿದರು. ಅಲ್ಲಿಂದ ಇಲ್ಲಿ ತನಕ ಧೋನಿ 400 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ. ಆಕ್ಲೆಂಡ್ ನಲ್ಲಿ ವಿಶ್ವಕಪ್ ನ ಕೊನೆ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ತಂಡವನ್ನು ಮುನ್ನಡೆಸಿರುವ ಧೋನಿ ಅವರು ಹೊಸ ದಾಖಲೆ ಬರೆದಿದ್ದಾರೆ.[ಧೋನಿ ದಾಖಲೆಗಳ ಸಮಗ್ರ ಪಟ್ಟಿ]

ಭಾರತದ ಪರ ಅತಿ ಹೆಚ್ಚು ಕ್ರಿಕೆಟ್ ಪಂದ್ಯವಾಡಿರುವ ದಿಗ್ಗಜರ ಸಾಲಿನಲ್ಲಿ 6ನೇ ಆಟಗಾರನಾಗಿ ಧೋನಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 33 ವರ್ಷ ವಯಸ್ಸಿನ ಧೋನಿ ಅವರು ಈಗಾಗಲೇ ಒಂದು ದಶಕಗಳ ಕಾಲ ಕ್ರಿಕೆಟ್ ಜೀವನ ಪೂರೈಸಿದ್ದು, ಭಾರತದ ಅತ್ಯಂತ ಯಶಸ್ವಿ ನಾಯಕ ಎನಿಸಿದ್ದಾರೆ.

MS Dhoni joins elite company with another milestone

ಐಸಿಸಿ ಆಯೋಜನೆಯ ಎಲ್ಲಾ ಮೂರು ಚಾಂಪಿಯನ್ ಶಿಪ್(2007ರಲ್ಲಿ ವಿಶ್ವಟಿ20, 2011ರಲ್ಲಿ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ) ಗೆದ್ದ ಸಾಧನೆ ಧೋನಿ ಹೆಸರಿನಲ್ಲಿದೆ. [ಕಪಿಲ್ ರೆಕಾರ್ಡ್ ಮುರಿದ ಕ್ಯಾಪ್ಟನ್ ಧೋನಿ]

ಮಾ.14, ಶನಿವಾರದ ಧೋನಿ ಅವರ ಅಂಕಿ ಅಂಶ ಗಮನಿಸಿದರೆ ಏಕದಿನ ಕ್ರಿಕೆಟ್ ನಲ್ಲಿ 260 ಪಂದ್ಯ, ಟೆಸ್ಟ್ ನಲ್ಲಿ 90 ಹಾಗೂ 50 ಟ್ವೆಂಟಿ 20 ಪಂದ್ಯಗಳನ್ನಾಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದ ಪರ 400ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದವರು:
* ಸಚಿನ್ ತೆಂಡೂಲ್ಕರ್: 664 (200 Tests, 463 ODIs, 1 T20I)

* ರಾಹುಲ್ ದ್ರಾವಿಡ್: (164 Tests, 344 ODIs, 1 T20I)
* ಮಹಮ್ಮದ್ ಅಜರುದ್ದೀನ್ : (99 Tests, 334 ODIs)
* ಸೌರವ್ ಗಂಗೂಲಿ: (113 Tests, 311 ODIs)

* ಅನಿಲ್ ಕುಂಬ್ಳೆ : (132 Tests, 271 ODIs)

* ಎಂಎಸ್ ಧೋನಿ: (90 Tests, 260 ODIs, 50 T20Is)

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+