Imran Khan: ವಿಶ್ವಕಪ್ ವಿಜೇತ ನಾಯಕನಿಗೆ 14 ವರ್ಷ ಜೈಲು ಶಿಕ್ಷೆ
ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಇಮ್ರಾನ್ ಖಾನ್‌ರ ಪತ್ನಿ ಬುಶ್ರಾ ಬೀಬಿ ಸಹ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಇವರಿಗೆ ಏಳು ವರ್ಷ ಶಿಕ್ಷೆ ವಿಧಿಸಿದೆ. ಇನ್ನು ಇಮ್ರಾನ್ ಖಾನ್‌ಗೆ 10 ಲಕ್ಷ ಹಾಗೂ ಪತ್ನಿ ಬುಶ್ರಾ ಬೀಬಿ ಅವರಿಗೆ 5 ಲಕ್ಷ ದಂಡ ವಿಧಿಸಿದೆ. ಒಂದು ವೇಳೆ ಈ ದಂಡವನ್ನು ತುಂಬುವಲ್ಲಿ ವಿಫಲರಾದಲ್ಲಿ ಇಮ್ರಾನ್ ಖಾನ್‌ರಿಗೆ 6 ತಿಂಗಳು, ಪತ್ನಿಗೆ 3 ತಿಂಗಳು ಜೈಲು ಶಿಕ್ಷೆ ವಿಸ್ತರಿಸಲಾಗುವುದು.
ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಪ್ರಧಾನಿ ಆಗಿದ್ದಾಗ, ಪಾಕ್ ಸರ್ಕಾರದ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಬುಶ್ರಾ ಬೀಬಿಯ ಅಲ್ ಖಾದಿರ್ ಟ್ರಸ್ಟ್‌ಗೆ ಭಾರೀ ಕಡಿಮೆ ಬೆಲೆಯಲ್ಲಿ ನೀಡಿದ್ದಾರೆ. ಈ ಪ್ರಕರಣದಡಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಯಿತು. ಈ ಬಂಧನವನ್ನು ಖಂಡಿಸಿ ಖಾನ್ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಇಮ್ರಾನ್ ಖಾನ್ ವಿರುದ್ಧ ಏನು ಆರೋಪ
ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿಯರ ವಿರುದ್ಧ ಪಾಕಿಸ್ತಾನದ ಎನ್‌ಐಬಿ 2023ರ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣ ದಾಖಲಾಗುವ ಮುನ್ನವೇ ಇಮ್ರಾನ್ ತೋಶಖಾನಾ ಪ್ರಕರಣದಲ್ಲಿ ಜೈಲಿನಲ್ಲಿದ್ದರು. ಇನ್ನು ಟ್ರಸ್ಟ್ ಪ್ರಕರಣದ ತೀರ್ಪನ್ನು ಘೋಷಿಸಲು ಶನಿವಾರ ಜೈಲಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಭ್ರಷ್ಟಾಚಾರ ವಿರೋಧಿ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಈ ನಿರ್ಧಾರವನ್ನು ನೀಡಿದ್ದಾರೆ.
ಇಸ್ಲಾಮಾಬಾದ್ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಡಿಸೆಂಬರ್ 18 ರಂದು ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದರು. ಅಲ್ಲದೆ ಈ ಪ್ರಕರಣವನ್ನು ಮೂರು ಬಾರಿ ಮುಂದೂಡಿದ್ದರು. ಪ್ರಕರಣದ ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್ ಹಾಲ್‌ನಲ್ಲೇ ಇದ್ದ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಯನ್ನು ಪೊಲೀಸರು ವಶಕ್ಕೆ ಪಡೆದರು. ಇಮ್ರಾನ್ ಖಾನ್ ಅಧಿಕಾರ ದುರುಪಯೋಗದ ಆರೋಪ ಹಾಗೂ ಪತ್ನಿ ಕಾನೂನು ಬಾಹೀರ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಸಾಬೀತಾಗಿದೆ.

ತೀರ್ಪಿನಲ್ಲಿ ಇಮ್ರಾನ್ ಖಾನ್ ಪತ್ನಿ ಹೊಂದಿದ್ದ ಟ್ರಸ್ಟ್‌ನ್ನು ಸರ್ಕಾರಕ್ಕೆ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಸದ್ಯ ಇಮ್ರಾನ್ ಖಾನ್ ಬಂಧಿಯಾಗಿರುವ ಅಡಿಯಾಲ ಜೈಲಿನ ಸುತ್ತ ಬಂದೋಬಸ್ತ ಹೆಚ್ಚಿಸಲಾಗಿದೆ. ತೀರ್ಪು ಹೊರ ಬೀಳುತ್ತಿದ್ದಂತೆ ಇಮ್ರಾನ್ ಖಾನ್, ಈ ತೀರ್ಪು ನ್ಯಾಯಾಂಗದ ಖ್ಯಾತಿಗೆ ಕಳಂಕ ತಂದಿದೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ನನಗೆ ಯಾವುದೇ ಲಾಭವಾಗಲಿಲ್ಲ ಅಥವಾ ಸರ್ಕಾರಕ್ಕೆ ಯಾವುದೇ ನಷ್ಟವೂ ಆಗಲಿಲ್ಲ ಎಂದು ತಿಳಿಸಿದ್ದಾರೆ.
ಏನಿದು ಟ್ರಸ್ಟ್?
ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಅವರ ಪತ್ನಿ ಬುಶ್ರಾ ಹಲವು ರಾಜಕೀಯ ನಾಯಕರೊಂದಿಗೆ ಸೇರಿಕೊಂಡು ಅಲ್ ಖಾದಿರ್ ವಿಶ್ವವಿದ್ಯಾಲಯ ಯೋಜನಾ ಟ್ರಸ್ಟ್ ರಚಿಸಿದರು ಎಂಬ ಆರೋಪವಿದೆ. ಪಂಜಾಬ್ ಪ್ರಾಂತ್ಯದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವುದು ಟ್ರಸ್ಟ್‌ನ ಗುರಿಯಾಗಿತ್ತು. ಈ ವಿಶ್ವವಿದ್ಯಾಲಯಕ್ಕಾಗಿ ಇಮ್ರಾನ್ ಹಾಗೂ ಪತ್ನಿ ವಸತಿ ಸಂಕೀರ್ಣದ ಭೂಮಿಯನ್ನು ಅಕ್ರಮವಾಗಿ ಬಳಸಿದ್ದಾರೆ ಎಂಬ ಆರೋಪವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications