For Quick Alerts
ALLOW NOTIFICATIONS  
For Daily Alerts
 

10-11 ಎಸೆತಗಳಲ್ಲಿ ಆತ 5 or 6 ಸಿಕ್ಸ್ ಚಚ್ಚಿದ್ದ: ದಿನೇಶ್ ಕಾರ್ತಿಕ್

In a span of 10-11 balls, he hit about 5 or 6 sixes: Dinesh Karthik on Andre Russell

ಕೋಲ್ಕತ್ತಾ: ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿಕೊಂಡಿದ್ದು 2014ರಲ್ಲಿ. 2015ರಿಂದ 2018ರ ವರೆಗೆ ರಸೆಲ್ ಕೆಕೆಆರ್‌ ಪರ ಉತ್ತಮ ಪ್ರದರ್ಶನ ನೀಡಿದ್ದರು. ಪ್ರತೀ ಸೀಸನ್‌ನಲ್ಲಿ ತಂಡದ ಪರ 300+ ರನ್ ಬಾರಿಸಿದ್ದರು.

ಆ್ಯಂಡ್ರೆ ರಸೆಲ್ ಹೆಚ್ಚು ಮಿನುಗಿದ್ದು 2019ರ ಸೀಸನ್‌ನಲ್ಲಿ. ಆ ಸೀಸನ್‌ನಲ್ಲಿ ರಸೆಲ್ 14 ಪಂದ್ಯಗಳಲ್ಲಿ 56.66ರ ಸರಾಸರಿಯಂತೆ, 204.8 ಸ್ಟ್ರೈಕ್ ರೇಟ್‌ನಂತೆ 510 ರನ್ ಚಚ್ಚಿದ್ದರು. ಆ ವರ್ಷ ರಸೆಲ್ ಒಟ್ಟು 4 ಅರ್ಧ ಶತಕಗಳನ್ನು ಬಾರಿಸಿ ತಂಡಕ್ಕೆ ಬಲ ತುಂಬಿದ್ದರು. ಆದರೆ ಆ ವರ್ಷ ರಸೆಲ್ ಹೆಚ್ಚು ನೆನಪಾಗಿ ಉಳಿದಿದ್ದು 18 ಎಸೆತಗಳಲ್ಲಿ 53 ರನ್ ಚಚ್ಚಿದ್ದ ಕಾರಣಕ್ಕೆ.

ಆವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಸೆಲ್ ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮೊಹಮ್ಮದ್ ಸಿರಾಜ್ ಅವರ ಮೊದಲ ಮೂರು ಎಸೆತಗಳಾಗಿ ಆ ಬಳಿಕದ ಒಂದು ನೋ ಬಾಲ್‌ಗೆ ರಸೆಲ್ ಸಿಕ್ಸ್ ಚಚ್ಚಿದ್ದರು. ಆ ಬಳಿಕ ಗಾಯಗೊಂಡ ಸಿರಾಜ್ ಬದಲಿಗೆ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಬೌಲಿಂಗ್‌ಗೆ ಬಂದಿದ್ದರು. ಅವರ ಮೂರು ಎಸೆತಗಳಲ್ಲಿ ಎರಡಕ್ಕೆ ರಸೆಲ್ ಸಿಕ್ಸ್ ಬಾರಿಸಿದ್ದರು.

'ರಸೆಲ್ ಅವರ ಅಂದಿನ ಅಬ್ಬರದ ಆಟವನ್ನು ಮಾಜಿ ನಾಯಕ ದಿನೇಶ್ ಕಾರ್ತಿಕ್ ಸ್ಮರಿಸಿಕೊಂಡಿದ್ದಾರೆ. 'ಆವತ್ತಿನ ಪಂದ್ಯದಲ್ಲಿ ಎರಡು ಓವರ್‌ಗಳಲ್ಲಿ 10-11 ಎಸೆತಗಳಲ್ಲಿ 5-6 ಎಸೆತಗಳಿಗೆ ರಸೆಲ್ ಸಿಕ್ಸ್ ಬಾರಿಸಿದ್ದರು. ಅಂದು ರಸೆಲ್ ಆಟವನ್ನು ಸಂಪೂರ್ಣ ಬದಲಿಸಿದ್ದರು,' ಎಂದು ದಿನೇಶ್ ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಹೇಳಿಕೊಂಡಿದ್ದಾರೆ.

Story first published: Friday, April 2, 2021, 21:51 [IST]
Other articles published on Apr 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+