Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲೆಲ್ಲಾ '150' ವಾಡಿಕೆಯ ಚೆಂಡಿನ ವೇಗವಾಗಿತ್ತು: ಇಯಾನ್ ಬಿಷಪ್‌ಗೆ ಮಾತಿನಲ್ಲೇ ತಿವಿದ ರಶೀದ್ ಲತೀಫ್

 In Past 150 Is Routine Ball Speed: Rashid Latif Reacts To Ian Bishop Tweet

ಐಪಿಎಲ್ 13ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ವೇಗವಾಗಿ ಬೌಲಿಂಗ್ ಮಾಡಿದ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಕ್ ನೊರ್ಕಿಯಾ ವೇಗವನ್ನು ಕಂಡು ಹೊಗಳಿದ್ದ ವಿಂಡೀಸ್ ಮಾಜಿ ಆಟಗಾರ ಇಯಾನ್‌ ಬಿಷಪ್‌ ಟ್ವಿಟ್ಟರ್‌ನಲ್ಲಿ ಖಾರವಾದ ಪ್ರತಿಕ್ರಿಯೆಯನ್ನು ಎದುರಿಸಿದ್ದಾರೆ.

2020 ರ ಲೀಗ್‌ಗೆ ಮುಂಚಿತವಾಗಿ ಇಂಗ್ಲಿಷ್ ಆಲ್‌ರೌಂಡರ್ ಕ್ರಿಸ್ ವೋಕ್ಸ್‌ಗೆ ಬದಲಿಯಾಗಿ ಐಪಿಎಲ್ ಫ್ರ್ಯಾಂಚೈಸ್ ದೆಹಲಿ ಕ್ಯಾಪಿಟಲ್ಸ್‌ ನೊರ್ಕಿಯಾ ಅವರನ್ನು ಆಯ್ಕೆ ಮಾಡಲಾಯಿತು. 26 ರ ಹರೆಯದ ಅನ್ರಿಕ್ 8 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದು, 7.34 ಎಕಾನಮಿ ದರದಲ್ಲಿ ಬೌಲಿಂಗ್ ಮಾಡುವ ಮೂಲಕ ಮಿಂಚಿದ್ದಾರೆ.

ಅಕ್ಟೋಬರ್ 14 ರಂದು (ಬುಧವಾರ) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅನ್ರಿಕ್ ಐಪಿಎಲ್ 2020 ರ ವೇಗದ ಎಸೆತವನ್ನು 156.22 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದರು. ಈತನ ಬೌಲಿಂಗ್ ಸಾಮರ್ಥ್ಯದಿಂದ ಪ್ರಭಾವಿತರಾದ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಇಯಾನ್ ಬಿಷಪ್ ನೊರ್ಕಿಯಾರನ್ನು ಟ್ವಿಟರ್ ಮೂಲಕ ಹೊಗಳಿದ್ದರು.

ಆರ್ಆರ್ ಓಪನಿಂಗ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು 150 ಕಿ.ಮೀ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡುವ ಮೂಲಕ ನೊರ್ಕಿಯಾ ಔಟ್ಟ್ ಮಾಡಿದ ನಂತರ ಅವರು ತಮ್ಮ ಟ್ವೀಟ್ ಮಾಡಿದ್ದಾರೆ. "ಅನ್ರಿಕ್ ನೊರ್ಕಿಯಾ ಬಟ್ಲರ್‌ನನ್ನು 155 ಕಿಲೋಮೀಟರ್ ಚೆಂಡಿನ ರಾಕೆಟ್‌ನಿಂದ ಹೊಡೆದರು." ಎಂದು ಹೇಳಿದ್ದರು.

ಬಿಷಪ್ ಅವರ ಟ್ವೀಟ್ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಅವರಿಗೆ ಸರಿ ಎನಿಸಿಲ್ಲ. ಏಕೆಂದರೆ ಇದರಲ್ಲಿ ವಿಶೇಷ ಏನು ಇಲ್ಲ ಎಂಬುದು ಅವರ ವಾದವಾಗಿದೆ. ವಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದು ಈ ಹಿಂದಿನ ವಾಡಿಕೆಯ ಚೆಂಡಿನ ವೇಗ ಎಂದು ರಶೀದ್ ನಂಬಿದ್ದಾರೆ ಮತ್ತು ಈ ಹಿಂದೆ ಅನೇಕರು ಇದನ್ನು ಸಾಧಿಸಿದ್ದಾರೆ.

ಬೌಲಿಂಗ್ ದಂತಕಥೆಗಳಾದ ಕರ್ಟ್ಲಿ ಆಂಬ್ರೋಸ್, ಬ್ರೆಟ್ ಲೀ, ಶೋಯೆಬ್ ಅಖ್ತರ್, ವಾಕರ್ ಯೂನಿಸ್, ಮತ್ತು ಶೇನ್ ಬಾಂಡ್ ಅವರನ್ನು ಟ್ಯಾಗ್ ಮಾಡಿ, ಲತೀಫ್ ಹೀಗೆ ಬರೆದಿದ್ದಾರೆ, "ಕಳೆದ ವಾಡಿಕೆಯ ಬಾಲ್ ಸ್ಪೀಡ್ 150 ಆಗಿದೆ. ಸರ್ ಕರ್ಟ್ಲಿ ಆಂಬ್ರೋಸ್, ವಾಲ್ಷ್, ಆಂಥೋನಿ, ಬ್ರೆಟ್ ಲೀ, ವಾಕರ್, ಬಾಂಡ್, ಶೋಯಿಬ್, ಸಾಮಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಸತತವಾಗಿ ವೇಗವಾಗಿ ಬೌಲಿಂಗ್ ಮಾಡಿದರು. " ಎಂದು ಉತ್ತರಿಸಿದ್ದಾರೆ.

Story first published: Saturday, October 17, 2020, 10:46 [IST]
Other articles published on Oct 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+