ರಾಜ್ ಕೋಟ್, ಮೇ 08: ಇತ್ತೀಚೆಗೆ ಮದುವೆಯಾಗಿರುವ ರವೀಂದ್ರ ಜಡೇಜ ಸರಿಯಾಗಿ ಮಧುಚಂದ್ರಕ್ಕೂ ಹೋಗದೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಬಂದಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ಜಡೇಜ ದಂಪತಿ ಮುದ್ದಾದ ಮಗುವನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ಇಂಡಿಯನ್ ಪ್ರೀಮಿಯರ್ ಲೀಗ್ 9 ರಲ್ಲಿ ಹೊಚ್ಚ ಹೊಸ ತಂಡ ಗುಜರಾತ್ ಲಯನ್ಸ್ ಪರ ಎಡಗೈ ಆಲ್ ರೌಂಡರ್ ಜಡೇಜ ಅವರು ಆಡುತ್ತಿದ್ದಾರೆ. [ಚಿತ್ರಗಳು : ಲಕ್ಕಿ ಗರ್ಲ್ ರಿವಾಬ ಜತೆ ಜಡೇಜ ಮದ್ವೆ]

ಒಂದು ಕಾಲದಲ್ಲಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗದೆ ಕಳಪೆ ಪ್ರದರ್ಶನದ ಕಾರಣಕ್ಕೆ ತಂಡದಿಂದ ಹೊರಹಾಕಲ್ಪಟ್ಟಾಗ ಜತೆಗಿದ್ದ ಸಾಥಿಯ ಜತೆ ಜಡೇಜ ಇರುತ್ತಿದ್ದಾರೆ.
ಕ್ರಿಕೆಟ್ ಬಿಟ್ಟರೆ ನೆಚ್ಚಿನ ಸಾಥಿ ಕುದುರೆ ಜತೆ ಹೆಚ್ಚು ಕಾಲ ಕಳೆಯುವ ಜಡೇಜ ಅವರ ಖುಷಿಯಲ್ಲಿ ಪತ್ನಿ ರೀವಾ ಸೋಲಂಕಿ ಕೂಡಾ ಭಾಗಿಯಾಗಿದ್ದಾರೆ.