Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಕ್ಕಿ ಗರ್ಲ್ ಜೊತೆ ರವೀಂದ್ರ ಜಡೇಜ ನಿಶ್ಚಿತಾರ್ಥ

ನವದೆಹಲಿ, ಫೆ. 05: ಟೀಂ ಇಂಡಿಯಾ ಆಟಗಾರರ ಮದುವೆ ಪರ್ವಕ್ಕೆ ಮತ್ತೆ ಮುನ್ನುಡಿ ಬರೆಯಲಾಗಿದೆ. ಆಲ್ ರೌಂಡರ್ ರವೀಂದ್ರ ಜಡೇಜ ಅವರ ಮದುವೆ ನಿಶ್ಚಿತಾರ್ಥ ಕಾರ್ಯ ಶುಕ್ರವಾರ ಸಂಭ್ರಮದಿಂದ ನೆರವೇರಿದೆ.

27ರ ಹರೆಯದ ಜಡೇಜ ಅವರು ತಮ್ಮ ಬಾಲ್ಯದ ಗೆಳತಿ ರೀವಾ ಸೋಲಂಕಿ ಜತೆಗೆ ರಾಜ್ ಕೋಟ್ ನ ತಮ್ಮ ಮನೆಯಲ್ಲಿ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ನಂತರ ಮಾತನಾಡಿದ ರವೀಂದ್ರ ಜಡೇಜ, ರೀವಾ ನನ್ನ ಪಾಲಿನ ಅದೃಷ್ಟ ದೇವತೆ. ಆಕೆ ನನ್ನ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ಸ್ಪೂರ್ತಿ ಎಂದು ಜಡೇಜ ಕೊಂಡಾಡಿದ್ದಾರೆ.[ಮದ್ವೆ ಡೇಟ್ ಫಿಕ್ಸ್ ಮಾಡಿಕೊಡಿ ಎಂದ ಯುವರಾಜ್]

ವರುಣ್ ಅರೋನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್(ನಿಶ್ಚಿತಾರ್ಥ ಘೋಷಣೆ), ಸುರೇಶ್ ರೈನಾ, ಮೋಹಿತ್ ಶರ್ಮ(ನಿಶ್ಚಿತಾರ್ಥ ಘೋಷಣೆ), ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಜಡೇಜ ಅವರ ಮದುವೆನಿ ನಿಶ್ಚಿತಾರ್ಥದ ಆಯೋಜನೆ ಹೊಣೆ ಹೊತ್ತಿದ್ದ ಜಡೇಜ ಅವರ ಸೋದರಿ ನೈನಾ ಅವರು ಎಲ್ಲವೂ ಸಾಂಗವಾಗಿ ನೆರವೇರಿದ ಖುಷಿಯಲ್ಲಿದ್ದಾರೆ. ಮದುವೆ ದಿನಾಂಕದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಜಡೇಜ-ರೀವಾ ಜೋಡಿಯ ಚಿತ್ರಗಳು ಸಿಕ್ಕಿವೆ ನೋಡಿ...

ಬ್ಯಾಚುಲರ್ ಲೈಫಿಗೆ ಗುಡ್ ಬೈ ಹೇಳಿದ ಜಡೇಜ

ಬ್ಯಾಚುಲರ್ ಲೈಫಿಗೆ ಗುಡ್ ಬೈ ಹೇಳಿದ ಜಡೇಜ

ವರುಣ್ ಅರೋನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್(ನಿಶ್ಚಿತಾರ್ಥ ಘೋಷಣೆ), ಸುರೇಶ್ ರೈನಾ, ಮೋಹಿತ್ ಶರ್ಮ(ನಿಶ್ಚಿತಾರ್ಥ ಘೋಷಣೆ), ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ರಾಜಕೋಟ್​ನವರಾದ ರೀನಾ ಸೋಲಂಕಿ

ರಾಜಕೋಟ್​ನವರಾದ ರೀನಾ ಸೋಲಂಕಿ

ರೀನಾ ಕೂಡ ಮೂಲತಃ ರಾಜಕೋಟ್​ನವರಾಗಿದ್ದು, ಅವರ ತಂದೆ ಹರ್ದೆವ್ ಸಿಂಗ್ ಸೋಲಂಕಿ ಗುತ್ತಿಗೆದಾರರಾಗಿದ್ದಾರೆ. ಆತ್ಮಿಯ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ರೀನಾ ಅವರು ಈಗ ದೆಹಲಿಯಲ್ಲಿ ನಾಗರಿಕ ಸೇವಾ ಪರೀಕ್ಷೆ(ಯುಪಿಎಸ್ ಸಿ)ಗೆ ತಯಾರಿ ನಡೆಸುತ್ತಿದ್ದಾರೆ.

ರೀವಾ ನನ್ನ ಅದೃಷ್ಟ ದೇವತೆ

ರೀವಾ ನನ್ನ ಅದೃಷ್ಟ ದೇವತೆ

ರೀವಾ ನನ್ನ ಅದೃಷ್ಟ ದೇವತೆ, ಮುಂದಿನ ನನ್ನ ಕ್ರಿಕೆಟ್ ಜೀವನಕ್ಕೆ ಆದೃಷ್ಟ ಮುಂದುವರೆಯಲಿದೆ ಎಂಬ ನಂಬಿಕೆ ಇದೆ. ಈ ವರ್ಷಾರಂಭದಲ್ಲಿ ಉತ್ತಮ ಕ್ರಿಕೆಟ್ ಆಡಿದ್ದೇನೆ ಎಂದು ಜಡೇಜ ಹೇಳಿದರು. ರಾಅಜ್ ಕೋಟ್ ನ ಕಲಾವಾಡ್ ರಸ್ತೆಯಲ್ಲಿರುವ ಜಡ್ಡುಸ್ ಫುಡ್ ಫೀಲ್ಡ್ ರೆಸ್ಟೋರೆಂಟ್ ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಿತು.

ಭಾರತ ಕ್ರಿಕೆಟ್​ನಲ್ಲಿ ವಿವಾಹ ಸಂಭ್ರಮ ಮನೆ

ಭಾರತ ಕ್ರಿಕೆಟ್​ನಲ್ಲಿ ವಿವಾಹ ಸಂಭ್ರಮ ಮನೆ

ಈಗಾಗಲೇ ರೋಹಿತ್ ಶರ್ಮಾ, ಸುರೇಶ್ ರೈನಾ, ಹರ್ಭಜನ್ ಸಿಂಗ್, ವರುಣ ಆರೋನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಯುವರಾಜ್ ಸಿಂಗ್ ಹಾಗೂ ಮೋಹಿತ್ ಶರ್ಮಾ ತಮ್ಮ ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಜಡೇಜ ಕೂಡ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಭಾರತ ಕ್ರಿಕೆಟ್​ನಲ್ಲಿ ವಿವಾಹ ಸಂಭ್ರಮ ಮನೆ ಮಾಡಿದೆ.ಚಿತ್ರಕೃಪೆ: ಮಾಯಾಂಕ್ ಪಾಂಡೆ

ನಿಶ್ಚಿತಾರ್ಥದ ಉಂಗುರ ತೊಡಿಸಿದ ಜಡೇಜ

ನಿಶ್ಚಿತಾರ್ಥದ ಉಂಗುರ ತೊಡಿಸಿದ ಜಡೇಜ, ಎಲ್ಲೆಡೆಯಿಂದ ಶುಭಹಾರೈಕೆಗಳ ಮಹಾಪೂರ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+