In Pics: ಸಚಿನ್, ವಾರ್ನ್ ಕನಸಿನ ಟೂರ್ನಿ ಆಟಗಾರರು
ನ್ಯೂಯಾರ್ಕ್, ನವೆಂಬರ್.06: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿ 'ಆಲ್ ಸ್ಟಾರ್ ಕ್ರಿಕೆಟ್ ಲೀಗ್' ನವೆಂಬರ್ 7ರಂದು ಆರಂಭಗೊಳ್ಳಲಿದೆ. ಅಮೆರಿಕದಲ್ಲಿ ಕ್ರಿಕೆಟ್ ಹುಚ್ಚು ಹಬ್ಬಿಸಲು ಸಚಿನ್ ಹಾಗೂ ವಾರ್ನ್ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಛಾಪು ತೋರಿಸಿದ್ದ ಕ್ರಿಕರಟಿಗರು ಸೇರಿಕೊಂಡಿದ್ದಾರೆ.[ಆಲ್ ಸ್ಟಾರ್ ಲೀಗ್ ನಲ್ಲಿ ಯಾರ್ಯಾರಿದ್ದಾರೆ?]
ನವೆಂಬರ್ 7ರಿಂದ ಆರಂಭವಾಗಲಿರುವ ಸಚಿನ್ ಬ್ಲಾಸ್ಟರ್ಸ್ ಹಾಗೂ ವಾರ್ನೆ ವಾರಿಯರ್ಸ್ ನಡುವಿನ ಮೂರು ಪಂದ್ಯಗಳಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸಹ ಪ್ರೋತ್ಸಾಹ ನೀಡಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರನ್ನು ಒಂದೆಡೆ ಕೂಡಿಸಿರುವ ಲೀಗ್ ಯಾ ಬಗೆಯಲ್ಲಿ ಜಗತ್ತಿಗೆ ಮನರಂಜನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು. ವಾರ್ನ್ ಮತ್ತು ಸಚಿನ್ ತಮ್ಮ ತಂಡಗಳೊಂದಿಗೆ ಫೋಸ್ ನೀಡಿದ್ದನ್ನು ನೋಡಿಕೊಂಡು ಬರೋಣ,,,(ಪಿಟಿಐ ಚಿತ್ರಗಳು)

ಬ್ರಿಯಾನ್ ಲಾರಾ-ಸಚಿನ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಟೆಸ್ಟ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಒಂದೇ ಕಡೆ ಕಾಣಿಸಿಕೊಂಡಿದ್ದು ಹೀಗೆ.

ಉಭಯ ಕುಶಲೋಪರಿ
ರಿಕಿ ಪಾಂಟಿಂಗ್, ಶೊಯೇಬ್ ಅಕ್ತರ್ ಮತ್ತು ದಿಗ್ಗಜ ಸಚಿನ್ ತೆಂಡೂಲ್ಕರ್ ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡಾಗ ಕಾಣಿಸಿಕೊಂಡಿದ್ದು ಹೀಗೆ.

ಸಚಿನ್ ತಂಡ
ಮಹೇಲಾ ಜಯವರ್ಧನೆ, ವಿರೇಂದ್ರ ಸೆಹ್ವಾಗ್ ಅವರನ್ನು ಒಳಗೊಂಡ ಸಚಿನ್ ತೆಂಡೂಲ್ಕರ್ ತಂಡ.

ಸ್ಪಿನ್ ಮಾಂತ್ರಿಕ-ಬ್ಯಾಟಿಂಗ್ ದಿಗ್ಗಜ
ಎರಡು ತಂಡದ ನಾಯಕರಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮತ್ತು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಟ್ಟಿಗೆ ಕಾಣಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications