World Cup 2023: ಈ ದಾಖಲೆಯ ಸಮೀಪ ಯಾರಿಗೂ ಇದುವರೆಗೆ ಸುಳಿಯಲು ಸಾಧ್ಯವಾಗಿಲ್ಲ
ವಿಶ್ವಕಪ್ ನಲ್ಲಿ ಆಡಬೇಕು ಹಾಗೂ ಸ್ಥಿರ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಬೇಕು ಎಂಬುದು ಪ್ರತಿಯೊಬ್ಬ ಆಟಗಾರನ ಆಸೆ. ಈ ನಿಟ್ಟಿನಲ್ಲಿ ಹಲವು ವರ್ಷಗಳ ಕಾಲ ಮೈದಾನದಲ್ಲಿ ಆಟಗಾರ ಬೆವರು ಹರಿಸುತ್ತಾನೆ. ಅದರ ಫಲವಾಗಿಯೇ, ಆತನಿಗೆ ಮೆಗಾ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುವ ಸುವರ್ಣ ಅವಕಾಶ ಲಭಿಸುತ್ತದೆ.
ಈ ಅವಕಾಶವನ್ನು ಬಳಸಿಕೊಂಡು ದೇಶಕ್ಕೆ ಕೀರ್ತಿ ತರುತ್ತಾನೆ. ಇನ್ನು ಹಲವು ಸ್ಟಾರ್ ಆಟಗಾರರು ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಹಲವು ದಾಖಲೆಗಳನ್ನು ನಿರ್ಮಿಸುತ್ತಾರೆ. ಇಂತಹ ಹಲವು ದಾಖಲೆಗಳು ವಿಶ್ವಕಪ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ ಪಡೆದಿವೆ. ಈ ದಾಖಲೆಗಳ ಸಮೀಪವೂ ಯಾವೊಬ್ಬ ಆಟಗಾರನೂ ಸುಳಿದಿಲ್ಲ. ಭಾರತದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ನಲ್ಲೂ ಈ ದಾಖಲೆಗಳನ್ನು ಅಳಿಸುವುದು ಕಷ್ಟ.

1. ಸಚಿನ್ ಗರಿಷ್ಠ ರನ್
ಟೀಮ್ ಇಂಡಿಯಾದ ಸ್ಟಾರ್ ಅಟಗಾರ ಸಚಿನ್ ತೆಂಡೂಲ್ಕರ್ ವಿಶ್ವಕಪ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸಚಿನ್ 2003ರಲ್ಲಿ ಸಿಡಿಸಿದ ರನ್ ಗಳ ದಾಖಲೆಯನ್ನು ಈ ವರೆಗೂ ಯಾವೊಬ್ಬ ಬ್ಯಾಟರ್ ಅಳಿಸಲು ಸಾಧ್ಯವಾಗಿಲ್ಲ. ಸಚಿನ್ ಈ ವಿಶ್ವಕಪ್ ನಲ್ಲಿ ಆಡಿದ 11 ಪಂದ್ಯಗಳಲ್ಲಿ 673 ರನ್ ಸಿಡಿಸಿದ್ದಾರೆ.
ಇದರಲ್ಲಿ 1 ಶತಕ, 6 ಅರ್ಧಶತಕಗಳು ಸೇರಿವೆ. ಈ ವೇಳೆ ಇವರ ಸರಾಸರಿ 61.18 ಆಗಿದೆ. ಇದು ಒಂದೇ ವಿಶ್ವಕಪ್ ನಲ್ಲಿ ಬ್ಯಾಟರ್ ಒಬ್ಬ ಗಳಿಸಿದ ಗರಿಷ್ಠ ರನ್. ಎರಡನೇ ಸ್ಥಾನದಲ್ಲಿ ಆಸೀಸ್ ನ ಮ್ಯಾಧ್ಯೂ ವೇಡ್ ಇದ್ದು ಇವರು 659 ರನ್ ಸಿಡಿಸಿದ್ದಾರೆ.
2. 71 ವಿಕೆಟ್ ಪಡೆದಿರುವ ಆಸೀಸ್ ಪೇಸರ್
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಅಗ್ರಸ್ಥಾನದಲ್ಲಿದ್ದಾರೆ. ಗ್ಲೆನ್ ಮೆಕ್‌ಗ್ರಾತ್ ವಿಶ್ವಕಪ್‌ನಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಕ್ರಮವಾಗಿ ಮುತ್ತಯ್ಯ ಮುರಳೀಧರನ್ (68), ಲಸಿತ್ ಮಲಿಂಗ್ (56), ವಾಸಿಂ ಅಕ್ರಮ್ (55) ಕಾಣಿಸಿಕೊಳ್ಳುತ್ತಾರೆ.
3. ಆಸೀಸ್ ಹೆಸರಲ್ಲಿದೆ ಗೆಲುವಿನ ದಾಖಲೆ
ಆಸ್ಟ್ರೇಲಿಯಾ ದಾಖಲೆಯ ಬಾರಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. 2003ರಲ್ಲಿ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆದ್ದಿತ್ತು. ಈ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ 11 ಪಂದ್ಯಗಳನ್ನು ಆಡಿತ್ತು. ರಿಕಿ ಪಾಂಟಿಂಗ್ ನೇತೃತ್ವದ ತಂಡ ಎಲ್ಲಾ 11 ಪಂದ್ಯಗಳನ್ನು ಗೆದ್ದಿತ್ತು. ಈ ಮೂಲಕ ಆಸ್ಟ್ರೇಲಿಯಾ ಯಾವುದೇ ಪಂದ್ಯವನ್ನು ಸೋಲದೆ ವಿಶ್ವಕಪ್ ಗೆದ್ದುಕೊಂಡಿತು.
4. ಗವಾಸ್ಕರ್ ಹೆಸರಲ್ಲೂ ವಿಶಿಷ್ಟ ದಾಖಲೆ
ಮೊದಲ ODI ವಿಶ್ವಕಪ್ 1975 ರಲ್ಲಿ ನಡೆಯಿತು. ಈ ವಿಶ್ವಕಪ್‌ನಲ್ಲಿ ಸುನಿಲ್ ಗವಾಸ್ಕರ್ ಇಂಗ್ಲೆಂಡ್ ವಿರುದ್ಧ 174 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ನಿಧಾನಗತಿಯ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಈ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಆರಂಭಿಕರಾಗಿ ಬಂದು 60 ಓವರ್‌ಗಳ ವರೆಗೂ ಬ್ಯಾಟ್ ಮಾಡಿ ಅಜೇಯರಾಗಿ ಮರಳಿದರು. ಆದರೆ ಅವರು 36 ರನ್ ಗಳಿಸಲಷ್ಟೇ ಶಕ್ತರಾದರು.
5. ಸಿಕ್ಸರ್ ದಾಖಲೆ
ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಕ್ರಿಸ್ ಗೇಲ್ ವಿಶ್ವಕಪ್ ಪಂದ್ಯಗಳಲ್ಲಿ ಗರಿಷ್ಠ 49 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅದೇ ಸಮಯದಲ್ಲಿ, ಈ ಪಟ್ಟಿಯಲ್ಲಿ, ಎಬಿ ಡಿವಿಲಿಯರ್ಸ್, ರಿಕಿ ಪಾಂಟಿಂಗ್ ಮತ್ತು ಬ್ರೆಂಡನ್ ಮೆಕಲಮ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications