IND sv SL: ಏಕದಿನ ವಿಶ್ವಕಪ್ ಪವರ್ ಪ್ಲೇನಲ್ಲಿ ಅತ್ಯಂತ ಕೆಟ್ಟ ದಾಖಲೆ ನಿರ್ಮಿಸಿದ 3ನೇ ತಂಡ ಶ್ರೀಲಂಕಾ
ಗುರುವಾರ, ನವೆಂಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು 302 ರನ್‌ಗಳ ಬೃಹತ್ ಅಂತರದಿಂದ ಬಗ್ಗುಬಡಿಯಿತು.
ಈ ಮೂಲಕ ರನ್‌ಗಳ ಅಂತರದಲ್ಲಿ ಭಾರತ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿತು. ಅಲ್ಲದೆ, ವಿಶ್ವಕಪ್ ಇತಿಹಾಸದಲ್ಲಿ ಒಟ್ಟಾರೆ ಎರಡನೇ ಅತಿ ದೊಡ್ಡ ಗೆಲುವು ತನ್ನದಾಗಿಸಿಕೊಂಡಿತು.

ಭಾರತ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಇತಿಹಾಸದ ಮೊದಲ ಪವರ್‌ಪ್ಲೇನಲ್ಲಿ ಮೂರನೇ ಅತಿ ಕಡಿಮೆ ರನ್ ದಾಖಲಿಸಿತು.
ಭಾರತ ತಂಡದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ವಿಧ್ವಂಸಕ ದಾಳಿಗೆ ಸಿಕ್ಕಿ ನಲುಗಿದ ಶ್ರೀಲಂಕಾ ತಂಡವು ಮೊದಲ 10 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 14 ರನ್ ಗಳಿಸಲಷ್ಟೇ ಶಕ್ತವಾಯಿತು.
ಶ್ರೀಲಂಕಾ ತನ್ನ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಪಾಥುಮ್ ನಿಸ್ಸಾಂಕಾ ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಜಸ್ಪ್ರೀತ್ ಬುಮ್ರಾ ಎಸೆದ ಚೆಂಡನ್ನು ಎದುರಿಸುವಲ್ಲಿ ವಿಫಲರಾದ ಅವರು ಲೆಗ್-ಬಿಫೋರ್ ಬಲೆಗೆ ಬಿದ್ದರು.

ನಂತರದ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಬಿರುಗಾಳಿ ಬೌಲಿಂಗ್ ದಾಳಿ ನಡೆಸಿ ದಿಮುತ್ ಕರುಣರತ್ನೆ ಮತ್ತು ಸದೀರ ಸಮರವಿಕ್ರಮ ಅವರನ್ನು ಔಟ್ ಮಾಡಿ ಶ್ರೀಲಂಕಾ ತಂಡವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದರು.
ಬಳಿಕ ನಾಲ್ಕನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರು ನಾಯಕ ಕುಸಾಲ್ ಮೆಂಡಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕೇವಲ ಮೂರು ರನ್‌ಗಳಿಗೆ ಶ್ರೀಲಂಕಾ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಳ್ಳುವಂತೆ ಮಾಡಿದರು.
ಚರಿತ್ ಅಸಲಂಕಾ ಮತ್ತು ಏಂಜೆಲೊ ಮ್ಯಾಥ್ಯೂಸ್ ಆರು ಓವರ್‌ಗಳವರೆಗೆ ಭಾರತದ ವೇಗಿಗಳನ್ನು ಎದುರಿಸಿದರು. ಈ ವೇಳೆ ದಾಳಿಗಿಳಿದ ತೂಫಾನ್ ಮೊಹಮ್ಮದ್ ಶಮಿ 10ನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಚರಿತ್ ಅಸಲಂಕಾ ಮತ್ತು ದುಶನ್ ಹೇಮಂತ ಅವರನ್ನು ಮರಳಿ ಪೆವಿಲಿಯನ್‌ಗೆ ಕಳುಹಿಸಿದರು.
ಏಕದಿನ ವಿಶ್ವಕಪ್‌ನಲ್ಲಿ ಪವರ್‌ಪ್ಲೇನಲ್ಲಿ ಕಡಿಮೆ ರನ್
ಕೆನಡಾ - 2011ರಲ್ಲಿ ಜಿಂಬಾಬ್ವೆ ವಿರುದ್ಧ 14/3 - ನಾಗ್ಪುರ
ಪಾಕಿಸ್ತಾನ - 2015ರಲ್ಲಿ ಜಿಂಬಾಬ್ವೆ ವಿರುದ್ಧ 14/2 - ಬ್ರಿಸ್ಬೇನ್
ಶ್ರೀಲಂಕಾ - 2023ರಲ್ಲಿ ಭಾರತ ವಿರುದ್ಧ 14/6 - ಮುಂಬೈ
ಕುತೂಹಲಕಾರಿಯಾಗಿ, ಗುರುವಾರ ಶ್ರೀಲಂಕಾ ವಿರುದ್ಧದ ಗೆಲುವು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ನಾಲ್ಕನೇ ಅತಿ ದೊಡ್ಡ ಗೆಲುವು ಎನಿಸಿತು. ಈ ವರ್ಷದ ಜನವರಿಯಲ್ಲಿ ತಿರುವನಂತಪುರಂನಲ್ಲಿ ಇದೇ ಶ್ರೀಲಂಕಾ ವಿರುದ್ಧ ಭಾರತ 317 ರನ್‌ಗಳ ಗೆಲುವು ಸಾಧಿಸಿದ್ದು, ಅತಿ ದೊಡ್ಡ ಏಕದಿನ ಗೆಲುವಿನ ದಾಖಲೆಯಾಗಿದೆ.
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಅತಿದೊಡ್ಡ ಗೆಲುವು
2023ರಲ್ಲಿ ಶ್ರೀಲಂಕಾ ತಂಡವನ್ನು 302 ರನ್‌ಗಳಿಂದ ಸೋಲಿಸಿತು - ಮುಂಬೈ
2007ರಲ್ಲಿ ಬರ್ಮುಡಾ ತಂಡವನ್ನು 257 ರನ್‌ಗಳಿಂದ ಸೋಲಿಸಿತ್ತು - ಪೋರ್ಟ್ ಆಫ್ ಸ್ಪೇನ್
2003ರಲ್ಲಿ ಶ್ರೀಲಂಕಾ ತಂಡವನ್ನು 183 ರನ್‌ಗಳಿಂದ ಸೋಲಿಸಿತ್ತು - ಜೋಹಾನ್ಸ್‌ಬರ್ಗ್
2003ರಲ್ಲಿ ನಮೀಬಿಯಾವನ್ನು 181 ರನ್‌ಗಳಿಂದ ಸೋಲಿಸಿತ್ತು - ಪೀಟರ್‌ಮರಿಟ್ಜ್‌ಬರ್ಗ್
1999ರಲ್ಲಿ ಶ್ರೀಲಂಕಾ ತಂಡವನ್ನು 157 ರನ್‌ಗಳಿಂದ ಸೋಲಿಸಿತ್ತು - ಟೌಂಟನ್
ಒಟ್ಟಾರೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಅಂತರದ ಗೆಲುವು
2023ರಲ್ಲಿ ಆಸ್ಟ್ರೇಲಿಯಾ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು 309 ರನ್‌ಗಳಿಂದ ಸೋಲಿಸಿತು - ನವದೆಹಲಿ
2023ರಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು 302 ರನ್‌ಗಳಿಂದ ಸೋಲಿಸಿತು - ಮುಂಬೈ
2015ರಲ್ಲಿ ಆಸ್ಟ್ರೇಲಿಯ ತಂಡ ಅಫ್ಘಾನಿಸ್ತಾನ ತಂಡವನ್ನು 275 ರನ್‌ಗಳಿಂದ ಸೋಲಿಸಿತ್ತು - ಪರ್ತ್
2007ರಲ್ಲಿ ಭಾರತ ತಂಡವು ಬರ್ಮುಡಾ ತಂಡವನ್ನು 257 ರನ್‌ಗಳಿಂದ ಸೋಲಿಸಿತು - ಪೋರ್ಟ್ ಆಫ್ ಸ್ಪೇನ್
2015ರಲ್ಲಿ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ತಂಡವನ್ನು 257 ರನ್‌ಗಳಿಂದ ಸೋಲಿಸಿತು - ಸಿಡ್ನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications