For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಆತುರಪಟ್ಟು ಎಡವಟ್ಟು ಮಾಡಿಕೊಂಡ ಆರ್‌ಸಿಬಿ: ಕಾಲೆಳೆದ ಅಭಿಮಾನಿಗಳು!

Ind sv WI: Fans trolls RCB for congratulates Shubman Gill for century

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಏಕದಿನ ಸರಣಿಯನ್ನು ವೈಟ್‌ವಾಶ್ ಮೂಲಕ ವಶಕ್ಕೆ ಪಡೆದುಕೊಂಡಿದೆ. ಇದು ಕೆರಿಬಿಯನ್ ನಾಡಿನಲ್ಲಿ ಭಾರತ ವೈಟ್‌ವಾಶ್ ಮೂಲಕ ಸರಣಿಯನ್ನು ವಶಕ್ಕೆ ಪಡೆದ ಮೊದಲ ದೃಷ್ಟಾಂತ ಎಂಬುದು ಗಮನಾರ್ಹ ಅಂಶ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್‌ನಲ್ಲಿ ಆರಂಭಿಕರಿಬ್ಬರು ಕೂಡ ಅಮೋಘ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಶುಬ್ಮನ್ ಗಿಲ್ ಅದ್ಭುತ ಆಟವಾಡುತ್ತಾ ಶತಕವನ್ನು ಗಳಿಸುವ ಸನಿಹಕ್ಕೆ ತಲುಪಿದ್ದರು. ಆದರೆ ಮಳೆಯಿಂದಾಗಿ ಶುಬ್ಮನ್ ಗಿಲ್ ಅವರ ಚೊಚ್ಚಲ ಕನಸು ಭಗ್ನವಾಯಿತು. ಗಿಲ್ 98 ರನ್‌ಗಳಿಸಿದ ಸಂದರ್ಭದಲ್ಲಿ ಮಳೆ ಸುರಿದ ಪರಿಣಾಮವಾಗಿ ಭಾರತದ ಇನ್ನಿಂಗ್ಸ್‌ಅನ್ನು ಮೊಟಕುಗೊಳಿಸಲಾಯಿತು. ಈ ಸಂದರ್ಭದಲ್ಲಿ ಆರ್‌ಸಿಬಿ ಎಡವಟ್ಟೊಂದನ್ನು ಮಾಡುವ ಮೂಲಕ ಸುದ್ದಿಯಾಗಿದೆ.

ಶತಕಗಳಿಸುವ ಅವಕಾಶ ಕಳೆದುಕೊಂಡ ಗಿಲ್

ಶತಕಗಳಿಸುವ ಅವಕಾಶ ಕಳೆದುಕೊಂಡ ಗಿಲ್

ಈ ಪಂದ್ಯದಲ್ಲಿ ಭಾರತದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಶತಕಗಳಿಸುವ ಅದ್ಭುತ ಅವಕಾಶವನ್ನು ಕಳೆದುಕೊಂಡಿದ್ದಾರೆ. ಭಾರತದ ಇನ್ನಿಂಗ್ಸ್ ಮಳೆಯಿಂದಾಗಿ ಮೊಟಕುಗೊಳ್ಳುವ ಮುನ್ನ ಶುಬ್ಮನ್ ಗಿಲ್ 98 ಎಸೆತಗಳಲ್ಲಿ 98 ರನ್‌ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. ಇನ್ನು ನಾಯಕ ಶಿಖರ್ ಧವನ್ 58 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದರೆ ಶ್ರೇಯಸ್ ಐಯ್ಯರ್ 44 ರನ್‌ಗಳಿಸಿ ಔಟಾದರು. ಭಾರತ 36 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 225 ರನ್‌ಗಳಿಸಿದ ಸಂದರ್ಭದಲ್ಲಿ ಮಳೆ ಸುರಿದ ಕಾರಣ ಭಾರತದ ಇನ್ನಿಂಗ್ಸ್ ಅಂತ್ಯಗೊಳಿಸಲಾಯಿತು.

ಶತಕಕ್ಕೆ ಅಭಿನಂದನೆ ಸಲ್ಲಿಸಿದ ಆರ್‌ಸಿಬಿ

ಶತಕಕ್ಕೆ ಅಭಿನಂದನೆ ಸಲ್ಲಿಸಿದ ಆರ್‌ಸಿಬಿ

ಶುಬ್ಮನ್ ಗಿಲ್ 90 ರನ್‌ಗಳಿಸಿದ ಬಳಿಕ ಎಚ್ಚರಿಕೆಯ ಆಟವಾಡುತ್ತಾ ಮುನ್ನಡೆಯುತ್ತಿದ್ದು ಶತಕದ ಮೇಲೆ ಕಣ್ಣಿಟ್ಟಿದ್ದರು. ಆದರೆ ಗಿಲ್ 98 ರನ್‌ಗಳಿಸಿದ್ದಾಲೇ ಶುಬ್ಮನ್ ಗಿಲ್‌ಗೆ ಶತಕದ ಶುಭಾಶಯವನ್ನು ಕೋರಿತ್ತು. ಟ್ವೀಟ್‌ನಲ್ಲಿ "ಶುಬ್ಮನ್ ಗಿಲ್ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಗಳಿಸಿದ್ದಾರೆ. ಈ ಶತಕಕ್ಕೆ ಇದಕ್ಕಿಂತ ಉತ್ತಮವಾದ ಸಮಯವಿರಲಿಲ್ಲ. ಅಭಿನಂದನೆಗಳು ಚಾಂಪ್" ಎಂದು ಆರ್‌ಸಿಬಿ ಪೋಸ್ಟ್ ಮಾಡಿತ್ತು.

ಆರ್‌ಸಿಬಿ ಕಾಲೆಳೆದ ಅಭಿಮಾನಿಗಳು

ಇನ್ನು ಭಾರತದ ಯುವ ಆಟಗಾರ ಶುಬ್ಮನ್ ಗಿಲ್ ಶತಕಗಳಿಸುವ ಮುನ್ನವೇ ಅಭಿನಂದನೆಯ ಪೋಸ್ಟ್ ಮಾಡಿದ್ದ ಆರ್‌ಸಿಬಿಯನ್ನು ಅಭಿಮಾನಿಗಳು ಕಾಲೆಳೆದಿದ್ದಾರೆ. ಬಳಿಕ ವಾಸ್ತವ ಅರ್ಥ ಮಾಡಿಕೊಂಡ ಆರ್‌ಸಿಬಿ ಟ್ವೀಟ್ ಡಿಲೀಟ್ ಮಾಡಿದೆ. ಆದರೆ ಸ್ಕ್ರೀನ್‌ಶಾಟ್ ಹಂಚಿಕೊಂಡು ಆರ್‌ಸಿಬಿ ಫ್ರಾಂಚೈಸಿ ಮಾಡಿದ ಎಡವಟ್ಟನ್ನು ಅಭಿಮಾನಿಗಳು ತಮಾಷೆ ಮಾಡುತ್ತಿದ್ದಾರೆ.

ಐತಿಹಾಸಿಕ ಗೆಲುವು ಸಾಧಿಸಿದ ಭಾರತ

ಐತಿಹಾಸಿಕ ಗೆಲುವು ಸಾಧಿಸಿದ ಭಾರತ

ಇನ್ನು ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿದ್ದು ಸರಣಿಯನ್ನು ವೈಟ್‌ವಾಶ್ ಮಾಡುವ ಮೂಲಕ ವಶಕ್ಕೆ ಪಡೆದುಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರೀ ಪೈಪೋಟಿ ನೀಡಿದ್ದ ವೆಸ್ಟ್ ಇಂಡೀಸ್ ಅಂತಿಮ ಪಂದ್ಯದಲ್ಲಿ ಯಾವುದೇ ಪ್ರತಿರೋಧವೊಡ್ಡದೆ ಶರಣಾಗಿದೆ. ಮಳೆಯಿಂದಾಗಿ ಅಡ್ಡಿಯಾದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 36 ಓವರ್‌ಗಳಲ್ಲಿ 263 ರನ್‌ಗಳಿಸುವ ಕಠಿಣ ಸವಾಲು ಪಡೆದುಕೊಂಡಿತ್ತು. ಆದರೆ ಕೇವಲ 137 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವೆಸ್ಟ್ ಇಂಡೀಸ್ 119 ರನ್‌ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿದೆ.

Story first published: Thursday, July 28, 2022, 14:23 [IST]
Other articles published on Jul 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+