ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ಹರ್ಷ ದುಬೆ, ಗುರ್ನೂರ್ ಬ್ರಾರ್ ಪದಾರ್ಪಣೆ
ಧರ್ಮಶಾಲಾ: ಕೆಲವು ಗಂಟೆಗಳ ಕಾಲ ಮಳೆಯಿಂದಾಗಿ ತಡವಾಗಿದ್ದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ ಸಂಜೆ 5.15ಕ್ಕೆ ಆರಂಭವಾಗಿದೆ. 1 ಗಂಟೆಗೆ ನಡೆಯಬೇಕಿದ್ದ ಟಾಸ್ ತಡವಾಗಿ ಆರಂಭವಾಯಿತು. ಟಾಸ್ ಗೆದ್ದ ಭಾರತ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಮೊದಲ ಪಂದ್ಯದಲ್ಲಿ ಇಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.
ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯದಲ್ಲಿ ಓವರ್‌ಗಳಿಗೆ ಕತ್ತರಿ ಬಿದ್ದಿದೆ. 50 ಓವರ್‌ಗಳ ಪಂದ್ಯವನ್ನು 25 ಓವರ್‌ಗಳಿಗೆ ಇಳಿಸಲಾಗಿದೆ. ಇನ್ನು ಟಾಸ್ ಗೆದ್ದ ಭಾರತ ಮೊದಲು ಪ್ರವಾಸಿ ಅಫ್ಘಾನಿಸ್ತಾನ ತಂಡಕ್ಕೆ ಬ್ಯಾಟಿಂಗ್ ಮಾಡಲು ಆಮಂತ್ರಿಸಿದೆ. ಮೊದಲ ಪಂದ್ಯದಲ್ಲಿ ಭಾರತದ ಪರ ಯುವ ಆಟಗಾರ ಹರ್ಷ ದುಬೆ, ಗುರ್ನೂರ್ ಬ್ರಾರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಹರ್ಷ ದುಬೆ ಯಾರು?
ಇತ್ತೀಚೆಗೆ ನಡೆದ ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ಆಟಗಾರ ಹರ್ಷ ದುಬೆ. 23 ವರ್ಷದ ಎಡಗೈ ಸ್ಪಿನ್ ಬೌಲರ್ ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ತಂಡದ ಪರ ಆಡುತ್ತಾರೆ. ಇವರು ಈಗಾಗಲೇ 27 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 133 ವಿಕೆಟ್ ಪಡೆದಿದ್ದು, 30 ಲಿಸ್ಟ್ ಎ ಪಂದ್ಯದಲ್ಲಿ 31 ವಿಕೆಟ್ ಉರುಳಿಸಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ 11 ಪಂದ್ಯಗಳಲ್ಲಿ ಇವರು 13 ವಿಕೆಟ್ ಪಡೆದಿದ್ದಾರೆ. ಇವರಿಗೆ ಕನ್ನಡಿಗ ಕೆಎಲ್ ರಾಹುಲ್ ಕ್ಯಾಪ್ ನೀಡಿ ತಂಡಕ್ಕೆ ಸ್ವಾಗತಿಸಿದ್ದಾರೆ.
ಗುರ್ನೂರ್ ಬ್ರಾರ್ ಯಾರು?
26 ವರ್ಷದ ಪಂಜಾಬ್‌ನ ವೇಗದ ಬೌಲರ್ ಗುರ್ನೂರ್ ಬ್ರಾರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18 ಪಂದ್ಯ ಆಡಿದ್ದು, 52 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಲಿಸ್ಟ್ ಎ 9 ಪಂದ್ಯದಲ್ಲಿ 12 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಒಂದು ಬಾರಿ ಕಣಕ್ಕೆ ಇಳಿಯುವ ಅವಕಾಶ ಸಿಕ್ಕಿದೆ.
ಭಾರತ ತಂಡ: ಶುಭಮನ್ ಗಿಲ್, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ ದುಬೆ, ಗುರ್ನೂರ್ ಬ್ರಾರ್, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಜದ್ರಾನ್, ರಹಮಾನುಲ್ಲಾ ಗುರ್ಬಾಜ್, ಸೆದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಮೊಹಮ್ಮದ್ ಸಲೀಮ್, ಎಎಮ್ ಗಜನ್ಫರ್, ಜಿಯಾವುರ್ ರೆಹಮಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications