Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AFG 1st ODI: ಗುಡ್ ನ್ಯೂಸ್; ಸಂಜೆ 5.15ಕ್ಕೆ ಟಾಸ್, ಓವರ್‌ಗಳ ಕಡಿತ ಸಾಧ್ಯತೆ?

ಧರ್ಮಶಾಲಾ: ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಣ ಮೊದಲ ಏಕದಿನ ಪಂದ್ಯ ಶನಿವಾರ ನಡೆಯುತ್ತಿದೆ. ಇದು ಮೂರು ಏಕದಿನ ಸರಣಿಯ ಭಾಗವಾಗಿದೆ. ಆದರೆ, ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಇನ್ನು ಟಾಸ್‌ ಸಹ ನಡೆದಿಲ್ಲ. ಮಳೆ ಬಿಟ್ಟು ಬಿಡದೇ ಸುರಿಯುತ್ತಿದ್ದು, ಪಂದ್ಯಕ್ಕೆ ಅಡ್ಡಿಯಾಗಿದೆ.

ಮೊದಲ ಏಕದಿನ ಪಂದ್ಯವು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್‌ 1 ಗಂಟೆಗೆ ನಡೆಯಬೇಕಿತ್ತು. ಆದರೆ, ಇನ್ನು ವರೆಗೂ ಮಳೆ ನಿಲ್ಲದ ಕಾರಣ ಟಾಸ್‌ ವಿಳಂಬವಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಶನಿವಾರ ಮಳೆಯಾಗುವ ಸಾಧ್ಯತೆ ಶೇಕಡಾ 65 ರಿಂದ 70ರಷ್ಟಿದ್ದು, ಧರ್ಮಶಾಲಾದಲ್ಲಿ ಪ್ರಸ್ತುತ ಮಳೆಯಾಗುತ್ತಿದೆ.

IND vs AFG 1st ODI

ಈ ಸರಣಿಯಲ್ಲಿ ಎಲ್ಲರ ಕಣ್ಣುಗಳು ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮೇಲೆ ನೆಟ್ಟಿವೆ. ರೋಹಿತ್ ಶರ್ಮಾ 6 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮೈದಾನಕ್ಕೆ ಇಳಿಯಲಿದ್ದು, ಎಲ್ಲರ ಚಿತ್ತ ಕದ್ದಿದೆ. ಇವರು ಐಪಿಎಲ್‌ನಲ್ಲಿ ಮಂಡಿರಜ್ಜು ಗಾಯದಿಂದಾಗಿ ಹಲವು ಪಂದ್ಯಗಳಿಂದ ದೂರ ಉಳಿದಿದ್ದರು. ಇವರ ಫಿಟ್ನೆಸ್‌ ಮೇಲೆ ಪ್ರಶ್ನೆಗಳು ಇದ್ದವು. ಆದರೆ ಅವರು ಫಿಟ್ನೆಸ್‌ ಪರೀಕ್ಷೆಗೆ ಒಳಪಟ್ಟ ಬಳಿಕ ಅವರಿಗೆ ಅಫ್ಘಾನ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಅವಕಾಶ ನೀಡಲಾಗಿದೆ. ರೋಹಿತ್ ಶರ್ಮಾ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣುತ್ತಿದ್ದು, ಇವರಿಗೆ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ.

ಓವರ್‌ಗಳಿಗೆ ಕತ್ತರಿ ಸಾಧ್ಯತೆ

ಧರ್ಮಶಾಲಾದಲ್ಲಿ ಇನ್ನೂ ತುಂತುರು ಮಳೆ ಸುರಿಯುತ್ತಿದೆ. ಅದೃಷ್ಟವಶಾತ್, ಮಳೆ ಸ್ವಲ್ಪ ಕಡಿಮೆಯಾಗಿದೆ. ಭಾರತೀಯ ಆಟಗಾರರು ಡ್ರೆಸ್ಸಿಂಗ್ ಕೋಣೆಯಲ್ಲಿದ್ದಾರೆ. ಓವರ್‌ಗಳನ್ನು ಈಗಾಗಲೇ ಕಡಿಮೆ ಮಾಡಲು ಪ್ರಾರಂಭಿಸಲಾಗಿದೆ. 20 ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯ ಸಂಜೆ 6:32 ಆಗಿದೆ. ಒಂದು ವೇಳೆ ಪಂದ್ಯ 6.30ರ ಒಳಗೆ ಆರಂಭವಾಗದೇ ಇದ್ದಲ್ಲಿ, ಓವರ್‌ಗಳಿಗೆ ಕತ್ತರಿ ಹಾಕಿ 20 ಓವರ್ ಪಂದ್ಯ ನಡೆಸಲಾಗುತ್ತದೆ. ಅಂದಹಾಗೆ ಸಂಜೆ 5 ಗಂಟೆಗೆ ಪಂದ್ಯ ನಡೆದರೆ, ಸಮಯಕ್ಕೆ ತಕ್ಕಂತೆ ಓವರ್‌ಗಳನ್ನು ಕಡಿಮೆ ಮಾಡಲಾಗುತ್ತದೆ.

ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಸಿದ್ ಕೃಷ್ಣ

ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಅಜ್ಮತುಲ್ಲಾ ಉಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗೆಯಾಲಿ

Story first published: Saturday, June 13, 2026, 15:26 [IST]
Other articles published on Jun 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+