Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AFG 1st ODI: ಗೆಲುವಿನ ಕನಸಿನಲ್ಲಿ ಟೀಮ್ ಇಂಡಿಯಾ; ರೋಹಿತ್ ಶರ್ಮಾ, ರಶೀದ್ ಖಾನ್ ಆಕರ್ಷಣೆ

ಧರ್ಮಶಾಲಾ: ತವರಿನಲ್ಲಿ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಈಗಾಗಲೇ ಜಯ ಸಾಧಿಸಿರುವ ಟೀಮ್ ಇಂಡಿಯಾ, ಶನಿವಾರದಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಣಕ್ಕೆ ಇಳಿಯಲಿದ್ದು ಎಲ್ಲರ ಚಿತ್ತ ಇವರ ಮೇಲೆ ನೆಟ್ಟಿದೆ.

ಈಗಾಗಲೇ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ 9 ಏಕದಿನ ಪಂದ್ಯಗಳು ನಡೆದಿವೆ. ಈ ವೇಳೆ ಮೊದಲ ಬ್ಯಾಟಿಂಗ್ ಮಾಡಿದ ತಂಡ 4 ಬಾರಿ, ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಬಾರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್‌ ಮಹತ್ವದ ಪಾತ್ರವನ್ನು ವಹಿಸಲಿದೆ.

IND vs AFG 1st ODI

ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ಹೊರ ನಡೆದಿದ್ದಾರೆ. ಹೀಗಾಗಿ ಅನುಭವಿ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಯಾರು ಎಂಬ ಪ್ರಶ್ನೆ ಸಹ ಉದ್ಭವಿಸಿದೆ. ಇದಕ್ಕೆ ಉತ್ತರ ಶನಿವಾರವೇ ಸಿಗಲಿದೆ.

ರೋಹಿತ್ ಆಕರ್ಷಣೆ

ಆರಂಭಿಕರಾಗಿ ಶುಭಮನ್‌ ಗಿಲ್ ಹಾಗೂ ರೋಹಿತ್ ಶರ್ಮಾ ಕಣಕ್ಕೆ ಇಳಿಯಲಿದ್ದಾರೆ. 6 ತಿಂಗಳ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಅಂಗಳ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಇವರ ಮೇಲೆ ನೆಟ್ಟಿದೆ. ಇನ್ನು ವಿರಾಟ್‌ ಕೊಹ್ಲಿ ಅವರ ಸ್ಥಾನವನ್ನು ತುಂಬಲು ಇಶಾನ್‌ ಕಿಶನ್ ತಯಾರಾಗಿದ್ದಾರೆ. ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತದಾ ಎಂಬ ಪ್ರಶ್ನೆ ಉದ್ಭವಿಸಿದೆ. ಇನ್ನು ಉಪನಾಯಕ ಶ್ರೇಯಸ್‌ ಅಯ್ಯರ್‌ ನಾಲ್ಕನೇ ಸ್ಥಾನದಲ್ಲಿ ಕಣಕ್ಕೆ ಇಳಿಯ ಬಹುದಾಗಿದೆ.

37 ವರ್ಷಗಳ ಹಳೆಯ ದಾಖಲೆ ಅಳಿಸುವ ಕನಸಿನಲ್ಲಿ ರೋಹಿತ್‌ ಶರ್ಮಾ

37 ವರ್ಷಗಳ ಹಳೆಯ ದಾಖಲೆ ಅಳಿಸುವ ಕನಸಿನಲ್ಲಿ ರೋಹಿತ್‌ ಶರ್ಮಾ

ಕನ್ನಡಿಗ ಕೆಎಲ್ ರಾಹುಲ್‌ ವಿಕೆಟ್‌ ಕೀಪರ್ ಬ್ಯಾಟರ್‌ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇವರು ಏಕದಿನ ಫಾರ್ಮೆಟ್‌ನಲ್ಲಿ ಐದು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ರನ್‌ ಕಲೆ ಹಾಕುವ ಕ್ಷಮತೆಯನ್ನು ಹೊಂದಿದ್ದಾರೆ. ಆಲ್‌ರೌಂಡರ್ ಸ್ಥಾನದಲ್ಲಿ ವಾಷಿಂಗ್ಟನ್‌ ಸುಂದರ್ ಹಾಗೂ ನಿತೀಶ್‌ ಕುಮಾರ್ ರೆಡ್ಡಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಹುದು.

Rohit Sharma: ಗಂಗೂಲಿ, ದ್ರಾವಿಡ್‌ ದಾಖಲೆಯ ಮೇಲೆ ಹಿಟ್‌ಮ್ಯಾನ್‌ ಕಣ್ಣು

Rohit Sharma: ಗಂಗೂಲಿ, ದ್ರಾವಿಡ್‌ ದಾಖಲೆಯ ಮೇಲೆ ಹಿಟ್‌ಮ್ಯಾನ್‌ ಕಣ್ಣು

ವೇಗದ ಬೌಲರ್‌ ಆಗಿ ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಅಂಗಳ ಪ್ರವೇಶಿಸಲಿದ್ದಾರೆ. ಇವರು ಆರಂಭದಲ್ಲಿ ಬಿಗುವಿನ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡವನ್ನು ಹೇರುವ ಅವಶ್ಯಕತೆ ಇದೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕುಲ್‌ದೀಪ್ ಯಾದವ್ ಹಾಗೂ ಹರ್ಷ್ ದುಬೆ ಕಮಾಲ್ ಮಾಡುವ ಕನಸು ಹೊಂದಿದ್ದಾರೆ. ಮೊಹಮ್ಮದ್‌ ಸಿರಾಜ್‌ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

IND vs AFG 1st ODI

ರಶೀದ್ ಖಾನ್‌ ಮೇಲೆ ಒತ್ತಡ

ಅಫ್ಘಾನಿಸ್ತಾನ ತಂಡ ಅನುಭವಿ ಬ್ಯಾಟರ್ ಹಷ್ಮತುಲ್ಲಾ ಶಾಹಿದಿ ನಾಯಕತ್ವದಲ್ಲಿ ಕಣಕ್ಕಿಳಿಯಿಲಿದೆ. ಭಾರತದ ನೆಲದಲ್ಲೇ ಆತಿಥೇಯರಿಗೆ ಶಾಕ್ ನೀಡುವ ತಂತ್ರ ರೂಪಿಸಿಕೊಂಡಿದೆ. ತಂಡದ ಸ್ಟಾರ್ ಓಪನರ್ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ದೊಡ್ಡ ಇನಿಂಗ್ಸ್‌ ಕಟ್ಟುವ ಅನಿವಾರ್ಯತೆ ಇದೆ. ವಿಶ್ವದ ಅತ್ಯುತ್ತಮ ಸ್ಪಿನ್ನರ್ ರಶೀದ್ ಖಾನ್ ನೇತೃತ್ವದ ಸ್ಪಿನ್ ವಿಭಾಗವು ಆತಿಥೇಯ ಬ್ಯಾಟರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ. ಧರ್ಮಶಾಲಾದ ವೇಗದ ಪಿಚ್‌ ಲಾಭ ಪಡೆಯಲು ಮೊಹಮ್ಮದ್ ನಬಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Story first published: Friday, June 12, 2026, 17:11 [IST]
Other articles published on Jun 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+