Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AFG 1st ODI: ಗಿಲ್ ಭರ್ಜರಿ ಬ್ಯಾಟಿಂಗ್, ಪದಾರ್ಪಣಾ ಪಂದ್ಯದಲ್ಲಿ ಮಿಂಚಿದ ಯಂಗ್ ಸ್ಟರ್ಸ್‌

ಧರ್ಮಶಾಲಾ: ನಾಯಕ ಶುಭಮನ್‌ ಗಿಲ್ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಪದಾರ್ಪಣೆ ಪಂದ್ಯದಲ್ಲಿ ಹರ್ಷ್ ದುಬೆ, ಗುರ್ನೂರ್ ಬ್ರಾರ್ ನೀಡಿದ ಅಮೋಘ ಬೌಲಿಂಗ್ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ತಂಡವನ್ನು ಮಣಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಮಳೆಯಿಂದಾಗಿ ಬಾಧಿತ ಪಂದ್ಯದಲ್ಲಿ ಓವರ್‌ಗಳಿಗೆ ಕತ್ತರಿ ಬಿದ್ದಿತು. 50 ಓವರ್‌ಗಳ ಪಂದ್ಯ 25 ಓವರ್‌ಗಳಿಗೆ ಇಳಿಸಲಾಯಿತು. ಟಾಸ್‌ ಗೆದ್ದು ಮೊದಲು ಬೌಲಿಂಗ್ ಮಾಡಿದ ಟೀಮ್ ಇಂಡಿಯಾ, ಪ್ರವಾಸಿ ಅಫ್ಘಾನಿಸ್ತಾನ ತಂಡವನ್ನು 194 ರನ್‌ಗಳಿಗೆ ಕಟ್ಟಿ ಹಾಕಿತು. 25 ಓವರ್‌ಗಳಲ್ಲಿ 195 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ಗೆ 46 ರನ್‌ ಸೇರಿಸಿತು. ಈ ಹಂತದಲ್ಲಿ ರೋಹಿತ್ ಶರ್ಮಾ 16 ರನ್‌ಗಳಿಗೆ ಔಟ್ ಆದರು.

IND vs AFG 1st ODI

ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಇಶಾನ್‌ ಕಿಶನ್‌ ನಾಯಕ ಶುಭಮನ್ ಗಿಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ 43 ಎಸೆತಗಳಲ್ಲಿ 70 ರನ್‌ ಸೇರಿಸಿತು. ಈ ವೇಳೆ ಇಶಾನ್‌ ಕಿಶನ್‌ 3 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 34 ರನ್ ಬಾರಿಸಿ ರಶೀದ್ ಖಾನ್ ತೋಡಿದ ಖೆಡ್ಡಾಗೆ ಬಲಿಯಾದರು. ಉಪನಾಯಕ ಶ್ರೇಯಸ್ ಅಯ್ಯರ್ (12) ಒತ್ತಡವನ್ನು ಮೆಟ್ಟಿನಿಲ್ಲಲಿಲ್ಲ.

ಒತ್ತಡ ಮೆಟ್ಟಿನಿಂತ ಶುಭಮನ್‌ ಗಿಲ್

ನಾಲ್ಕನೇ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ಶುಭಮನ್‌ ಗಿಲ್ ಜೋಡಿ ಸಹ ಅಜೇಯ 53 ರನ್‌ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡಕ್ಕೆ ದಾಟಿಸಿದರು. ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ 19 ಎಸೆತಗಳಲ್ಲಿ ಅಜೇಯ 39 ರನ್‌ ಸಿಡಿಸಿದರು. ನಾಯಕ ಶುಭಮನ್‌ ಗಿಲ್ 66 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 84 ರನ್‌ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು. ಭಾರತ 22.5 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಅಗತ್ಯ ರನ್‌ ಕಲೆ ಹಾಕಿ ಮಿಂಚಿತು.

IND vs AFG 1st ODI

ಗುರ್ಬಾಜ್ ಶತಕ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ರಹಮಾನುಲ್ಲಾ ಗುರ್ಬಾಜ್ ಅಬ್ಬರಿಸಿದರು. ಇವರು ಮೊದಲ ಏಕದಿನ ಪಂದ್ಯದಲ್ಲಿ ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಭಾರತದ ವಿರುದ್ಧ ವೇಗದ ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಪಾಕಿಸ್ತಾನದ ಶಾಹೀದ್ ಅಫ್ರಿದಿ ಕಾನ್ಪೂರ್‌ದಲ್ಲಿ 2005ರಲ್ಲಿ 45 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಹಶ್ಮತುಲ್ಲಾ ಶಾಹಿದಿ 27, ಅಜ್ಮತುಲ್ಲಾ ಒಮರ್ಜಾಯ್ 26 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲಿಲ್ಲ. ಪರಿಣಾಮ ಅಫ್ಘಾನಿಸ್ತಾನ 24.5 ಓವರ್‌ಗಳಲ್ಲಿ 194 ರನ್‌ ಸೇರಿಸಿತು

Story first published: Saturday, June 13, 2026, 22:51 [IST]
Other articles published on Jun 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+