Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AFG 3rd ODI: ಕ್ಲೀನ್‌ ಸ್ವೀಪ್‌ ಸಾಧನೆಯತ್ತ ಟೀಮ್ ಇಂಡಿಯಾ ಚಿತ್ತ

ಚೆನ್ನೈ: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಈಗಾಗಲೇ ಸರಣಿಯನ್ನು 2-0ಯಿಂದ ಮುನ್ನಡೆ ಸಾಧಿಸಿರುವ ಭಾರತ, ಮೂರನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಕನಸು ಕಾಣುತ್ತಿದೆ. ಇನ್ನು ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿ ಗೌರವ ಉಳಿಸಿಕೊಳ್ಳುವ ಆಸೆ ಅಫ್ಘಾನ್‌ ತಂಡದ್ದಾಗಿದೆ.

ಧರ್ಮಶಾಲಾದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ, ಲಕ್ನೋದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯವನ್ನು 170 ರನ್‌ಗಳಿಂದ ಗೆದ್ದು ಕೊಂಡಿದ್ದ ಭಾರತ, ಮೂರನೇ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡುವ ಆಸೆ ಹೊಂದಿದೆ.

IND vs AFG 3rd ODI

ಲಕ್ನೋದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಹಾಗೂ ಇಶಾನ್‌ ಕಿಶನ್‌ ಶತಕ ಬಾರಿಸಿ ಅಬ್ಬರಿಸಿದರು. ಅಲ್ಲದೆ ತಂಡ ದಾಖಲೆಯ ಮೊತ್ತವನ್ನು ಕಲೆ ಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ಇಬ್ಬರೂ ಆಟಗಾರರು ಮತ್ತೊಮ್ಮೆ ಬಿಗ್‌ ಇನಿಂಗ್ಸ್ ಕಟ್ಟುವ ವಿಶ್ವಾಸವನ್ನು ಹೊಂದಿದೆ. ಈ ಸರಣಿಯಲ್ಲಿ ಶುಭಮನ್‌ ಗಿಲ್‌ ಅಮೋಘ ಫಾರ್ಮ್‌ನಲ್ಲಿದ್ದು ಎಲ್ಲರ ಚಿತ್ತ ಕದ್ದಿದ್ದಾರೆ.

ರೋಹಿತ್‌ ಮೇಲೆ ಒತ್ತಡ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರಿಗೆ ಮೂರನೇ ಪಂದ್ಯದಲ್ಲಿ ಬಿಗ್ ಇನಿಂಗ್ಸ್‌ ಕಟ್ಟಿ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಸಿಗಲಿದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಕರ್ನಾಟಕದ ಕೆಎಲ್ ರಾಹುಲ್ ಅವರು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದು ಭರವಸೆ ಮೂಡಿಸಿದ್ದಾರೆ.

IND vs AFG 3rd ODI

ಇದೇ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿರುವ ಬೌಲರ್‌ ಗೂರ್ನಾರ್‌ ಬ್ರಾರ್‌ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಿದ್ದಾರೆ. ಹೀಗಾಗಿ ಇವರಿಗೆ ಮೂರನೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಪ್ರಿನ್ಸ್‌ ಯಾದವ್ (2 ವಿಕೆಟ್‌) ಸ್ಥಿರ ಪ್ರದರ್ಶನ ನೀಡಿದ್ದರು. ಅರ್ಷದೀಪ್ ಸಿಂಗ್ ತಮ್ಮ ಅನುಭವ ಬಳಸಿಕೊಂಡು ಬೌಲ್ ಮಾಡಬಲ್ಲರು. ಈ ಸರಣಿಯಲ್ಲಿ ಕುಲ್‌ದೀಪ್ ಯಾದವ್ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಆಲ್‌ರೌಂಡರ್ ವಾಷಿಂಗ್ಟನ್‌ ಸುಂದರ್‌ ಬೌಲಿಂಗ್‌ನಲ್ಲಿ ಕಮಾಲ್‌ ಮಾಡಲು ಸಜ್ಜಾಗಿದ್ದಾರೆ.

ಗೆಲುವಿಗೆ ರಣತಂತ್ರ

ಅಫ್ಘಾನಿಸ್ತಾನ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳಾದ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಸೇದಿಕುಲ್ಲಾ ಅಟಲ್, ರಹಮತ್ ಶಾ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಎರಡನೇ ಏಕದಿನ ಪಂದ್ಯದಲ್ಲಿ ನಂಗೇಲಿಯ ಖರೋಟೆ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಉಳಿದಂತೆ ಗಜನ್ಫರ್, ಮೊಹಮ್ಮದ್ ಸಲೀಂ, ಬಿಲಾಲ್ ಸಾಮಿ, ರಶೀದ್ ಖಾನ್ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಯೋಜನೆ ರೂಪಿಸಿಕೊಂಡಿದ್ದಾರೆ.

ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಣ ಪಂದ್ಯವನ್ನು ನೋಡುವುದು ಎಲ್ಲಿ?

ಭಾರತ ಹಾಗೂ ಅಫ್ಘಾನ್ ನಡುವಣ ಮೂರನೇ ಏಕದಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.

ಮೂರನೇ ಏಕದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗುತ್ತದೆ?

ಭಾರತ ಹಾಗೂ ಅಫ್ಘಾನಿಸ್ತನಾ ನಡುವಣ ಮೂರನೇ ಏಕದಿನ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಅಲ್ಲದೆ ಪಂದ್ಯ ಆರಂಭಕ್ಕೂ ಅರ್ಧಗಂಟೆ ಮುಂಚಿತವಾಗಿ ಟಾಸ್‌ ನಡೆಯಲಿದೆ.

Story first published: Friday, June 19, 2026, 14:07 [IST]
Other articles published on Jun 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+