IND vs AFG 3rd ODI: ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತ; ಮಿಂಚಿದ ಪ್ರಸಿದ್ಧ್, ಯಶಸ್ವಿ
ಚೆನ್ನೈ: ಕರ್ನಾಟಕದ ಸ್ಟಾರ್ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರ ಮೊನಚಾದ ದಾಳಿ ಹಾಗೂ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಅಮೋಘ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ ಮೂರನೇ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ತಂಡವನ್ನು ಮಣಿಸಿ, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಮೊದಲ ಹಾಗೂ ಎರಡನೇ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ರೋಹಿತ್ ಶರ್ಮಾ ಮೂರನೇ ಪಂದ್ಯದಲ್ಲಿ ಕ್ಲಾಸ್ ಬ್ಯಾಟಿಂಗ್ ಪ್ರದರ್ಶಿಸಿ ಅಬ್ಬರಿಸಿದರು.

ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 22.5 ಓವರ್‌ಗಳಲ್ಲಿ 170 ರನ್ ಸೇರಿಸಿತು. ಈ ವೇಳೆ ರೋಹಿತ್ ಶರ್ಮಾ (79 ರನ್, 9 ಬೌಂಡರಿ, 3 ಸಿಕ್ಸರ್) ಬಿಗ್ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾದರು.
ಯಶಸ್ವಿ ಅಬ್ಬರ
ಭರವಸೆಯ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 86 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 110 ರನ್ ಸಿಡಿಸಿ ಜಯದಲ್ಲಿ ಮಿಂಚಿದರು. ಶ್ರೇಯಸ್ ಅಯ್ಯರ್ ಅಜೇಯ 20 ರನ್ ಬಾರಿಸಿದರು. ಅಂತಿಮವಾಗಿ ಭಾರತ 28.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 224 ರನ್ ಸೇರಿಸಿತು.
ಜವಾಬ್ದಾರಿಯುತ ಆಟವಾಡಿದ ನಾಯಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ಭಾರತದ ಕರಾರುವಾಕ್ ಬೌಲಿಂಗ್ ದಾಳಿಗೆ ಉತ್ತರಿಸುವಲ್ಲಿ ಪ್ರವಾಸಿ ತಂಡ ವಿಫಲವಾಗಿ 44.2 ಓವರ್‌ಗಳಲ್ಲಿ 218 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ (5) ಮತ್ತು ಇಬ್ರಾಹಿಂ ಜದ್ರಾನ್ (11) ಬೇಗನೆ ವಿಕೆಟ್ ಒಪ್ಪಿಸಿದರು.

ನಾಯಕ ಹಶ್ಮತುಲ್ಲಾ ಶಾಹಿದಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ, 131 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಭರ್ಜರಿ ಶತಕ (102 ರನ್) ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅವರಿಗೆ ಉತ್ತಮ ಸಾಥ್ ನೀಡಿದ ಅಜ್ಮತುಲ್ಲಾ ಒಮರ್ಜಾಯ್ 50 ರನ್ (56 ಎಸೆತ) ಗಳಿಸಿ ಅರ್ಧಶತಕ ಬಾರಿಸಿದರು. ಮೊಹಮ್ಮದ್ ನಬಿ 21 ರನ್ ಗಳಿಸಿದರು.
ಭಾರತದ ಪರ ವೇಗಿ ಪ್ರಸಿದ್ಧ್ ಕೃಷ್ಣ ಕೇವಲ 23 ರನ್ ನೀಡಿ 5 ವಿಕೆಟ್ ಪಡೆದು ಅಫ್ಘಾನಿಸ್ತಾನ ತಂಡಕ್ಕೆ ಶಾಕ್ ನೀಡಿದರು.
5 ರನ್ ಪೆನಾಲ್ಟಿ
ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ 40 ನೇ ಓವರ್‌ನ ಕೊನೆಯ ಎಸೆತದಲ್ಲಿ, ಹಶ್ಮತುಲ್ಲಾ ಶಾಹಿದಿ ರನ್ ಗಳಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಬಳಿಕ ನಿರಾಕರಿಸಿದರು. ಈ ವೇಳೆ ಅವರು ಪಿಚ್ ಮಧ್ಯದಲ್ಲಿ ಓಡಿದರು ಎಂದು ಆನ್-ಫೀಲ್ಡ್ ಅಂಪೈರ್ ತಕ್ಷಣವೇ ತಮ್ಮ ನಾಯಕನಿಗೆ ಐದು ರನ್‌ಗಳ ಪೆನಾಲ್ಟಿ ವಿಧಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications