For Quick Alerts
ALLOW NOTIFICATIONS  
For Daily Alerts
 

IND vs AFG: ರೋಚಕ 2ನೇ ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ ಭಾರತ; ಅಫ್ಘಾನ್ ವಿರುದ್ಧ ಸರಣಿ ಕ್ಲೀನ್‌ಸ್ವೀಪ್

ಬುಧವಾರ, ಜನವರಿ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ರೋಚಕ ಎರಡನೇ ಸೂಪರ್ ಓವರ್‌ನಲ್ಲಿ ಗೆಲುವಿನ ಕೇಕೆ ಹಾಕಿತು.

ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಟೀಮ್ ಇಂಡಿಯಾ 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಎರಡು ಸೂಪರ್ ಓವರ್‌ಗಳ ಆಟವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು.

IND vs AFG 3rd T20: Team India Win in Thrilling 2nd Super Over Against Afghanistan

ಮೊದಲ ಬ್ಯಾಟಿಂಗ್ ಮಾಡಿದ ಭಾರತ ತಂಡ ರೋಹಿತ್ ಶರ್ಮಾ ಅವರ ಭರ್ಜರಿ ಶತಕ ಮತ್ತು ರಿಂಕ್ ಸಿಂಗ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್‌ಗಳನ್ನು ಕಲೆಹಾಕಿತು.

ಭಾರತ ನೀಡಿದ್ದ 213 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 212 ರನ್‌ ಗಳಿಸಿ ಗುರಿ ಸಮಗೊಳಿಸಿದಾಗ ಟೈ ಆಗಿ ಸೂಪರ್ ಓವರ್‌ಗೆ ಪಂದ್ಯ ಮುಂದುವರೆಯಿತು.

ಮೊದಲ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 6 ಎಸೆತಗಳಲ್ಲಿ 16 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಭಾರತ ತಂಡ 6 ಎಸೆತಗಳಲ್ಲಿ 16 ರನ್ ಗಳಿಸಿದಾಗ ಮತ್ತೆ ಟೈನಲ್ಲಿ ಕೊನೆಗೊಂಡಿತು.

ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 5 ಎಸೆತಗಳಲ್ಲಿ 2 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿತು. ಆಗ 12 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ರವಿ ಬಿಷ್ಣೋಯ್ ಅವರ ಮೊದಲ ಎಸೆತದಲ್ಲಿಯೇ ಮೊಹಮ್ಮದ್ ನಬಿ ವಿಕೆಟ್ ಕಳೆದುಕೊಂಡಿತು.

IND vs AFG 3rd T20: Team India Win in Thrilling 2nd Super Over Against Afghanistan

ನಂತರ, ಮೂರನೇ ಎಸೆತದಲ್ಲಿ ರಹಮನುಲ್ಲಾ ಗುರ್ಬಾಜ್ ಕೂಡ ರವಿ ಬಿಷ್ಣೋಯ್ ಎಸೆತದಲ್ಲಿ ರಿಂಕು ಸಿಂಗ್‌ಗೆ ಕ್ಯಾಚ್ ನೀಡಿ ಔಟಾದರು. ಈ ಮೂಲಕ ಅಂತಿಮವಾಗಿ ಭಾರತ ತಂಡವನ್ನು ವಿಜಯಶಾಲಿ ಎಂದು ಘೋಷಿಸಿತು.

ಇದಕ್ಕೂ ಮುನ್ನ ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಲಿಲ್ಲ. ತಂಡದ ಮೊತ್ತ 18 ರನ್‌ಗಳಾಗಿದ್ದಾಗ ಯಶಸ್ವಿ ಜೈಸ್ವಾಲ್ 4 ರನ್ ಗಳಿಸಿ ಔಟಾದರು.

ನಂತರ ಬಂದ ವಿರಾಟ್ ಕೊಹ್ಲಿ ಕೂಡ ಮುಂದಿನ ಎಸೆತದಲ್ಲಿ ಗೋಲ್ಡನ್ ಡಕ್‌ಗೆ ಔಟಾಗಿ ಹೊರನಡೆದರು. ಆಗ ಬಂದ ಕಳೆದೆರಡು ಪಂದ್ಯಗಳ ಹೀರೋ ಶಿವಂ ದುಬೆ ಕೇವಲ 1 ರನ್ ಗಳಿಸಿ ಔಟಾದರು. ಇನ್ನು ಸಂಜು ಸ್ಯಾಮ್ಸನ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.

ಆಗ ಜೊತೆಯಾದ ಆರಂಭಿಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಜೋಡಿ ಮುರಿಯದ ಐದನೇ ವಿಕೆಟ್‌ಗೆ 95 ಎಸೆತಗಳಲ್ಲಿ 190 ರನ್‌ಗಳ ಜೊತೆಯಾಟ ನಿರ್ಮಿಸಿತು. ಇದು ಭಾರತ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.

ನಾಯಕ ರೋಹಿತ್ ಶರ್ಮಾ 69 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಸಮೇತ ಜೀವನಶ್ರೇಷ್ಠ ಅಜೇಯ 121 ರನ್‌ಗಳೊಂದಿಗೆ ತಮ್ಮ ಇನ್ನಿಂಗ್ಸ್ ಮುಕ್ತಾಯಗೊಳಿಸಿದರೆ, ರಿಂಕು ಸಿಂಗ್ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್‌ಗಳಿಂದ 69 ರನ್ ಬಾರಿಸಿ ಪೋಷಕ ಪಾತ್ರವನ್ನು ನಿರ್ವಹಿಸಿದರು.

ಆ ಬಳಿಕ ಅಫ್ಘಾನಿಸ್ತಾನ ತಂಡದ ಇನ್ನಿಂಗ್ಸ್‌ನಲ್ಲಿ ರಹಮನುಲ್ಲಾ ಗುರ್ಬಾಜ್ 50 ರನ್, ಇಬ್ರಾಹಿಂ ಜದ್ರಾನ್ 50 ರನ್ ಮತ್ತು ಗುಲ್ಬದಿನ್ ನೈಬ್ ಅವರ 55 ರನ್‌ ಹಾಗೂ ಮೊಹಮ್ಮದ್ ನಬಿ ಅವರ 34 ರನ್‌ಗಳ ಸಹಾಯದಿಂದ 212 ರನ್ ಗಳಿಸಲು ನೆರವಾಯಿತು.

ಇನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಭಾರತದ ಆಲ್‌ರೌಂಡರ್ ಶಿವಂ ದುಬೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Wednesday, January 17, 2024, 23:40 [IST]
Other articles published on Jan 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+