For Quick Alerts
ALLOW NOTIFICATIONS  
For Daily Alerts
 

ರವೀಂದ್ರ ಜಡೇಜಾ vs ಅಕ್ಷರ್ ಪಟೇಲ್; ಟಿ20 ಕ್ರಿಕೆಟ್‌ಗೆ ಈತ ಉತ್ತಮ ಎಂದ ಮಾಜಿ ಕ್ರಿಕೆಟಿಗ

ಭಾನುವಾರ, ಜನವರಿ 14ರಂದು ಇಂದೋರ್‌ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಸರಣಿಯ 2ನೇ ಟಿ20 ಪಂದ್ಯದಲ್ಲಿ ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ಮತ್ತೊಮ್ಮೆ ತಮ್ಮನ್ನು ತಾವು ಸಮರ್ಥಿಸಿಕೊಂಡರು ಮತ್ತು ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದರು.

ಕಡಿಮೆ ಎಕಾನಮಿಯಲ್ಲಿ ಬೌಲ್ ಮಾಡುವ ಅಕ್ಷರ್ ಪಟೇಲ್ ಅವರ ಸಾಮರ್ಥ್ಯ ಮತ್ತು ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಪ್ರತಿಭೆ ಅವರನ್ನು ಭಾರತ ತಂಡಕ್ಕೆ ಸಂಪೂರ್ಣ ಆಸ್ತಿಯನ್ನಾಗಿ ಮಾಡುತ್ತದೆ. ಗಾಯದ ಕಾರಣದಿಂದ ಹೊರಗುಳಿಯುವ ಮೊದಲು ಅಕ್ಷರ್ ಪಟೇಲ್ 2023ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಭಾಗವಾಗಿದ್ದರು.

IND vs AFG: Axar Patel is Better Than Ravindra Jadeja For T20 Cricket Says Parthiv Patel

ಇದೀಗ ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್ 2024ರ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಆಡುವ 11ರ ಬಳಗದಲ್ಲಿ ತಮ್ಮ ಸ್ಥಾನಕ್ಕಾಗಿ ರವೀಂದ್ರ ಜಡೇಜಾ ಅವರೊಂದಿಗೆ ಸ್ಪರ್ಧೆಯನ್ನು ಹೊಂದಿದ್ದಾರೆ.

ಆದಾಗ್ಯೂ, ಭಾರತದ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್‌ ಅವರು ಮತ್ತೊಬ್ಬ ಆಲ್‌ರೌಂಡರ್ ರವೀಂದ್ರ ಜಡೇಜಾ ಬದಲಾಗಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದ್ದಾರೆ.

IND vs AFG: Axar Patel is Better Than Ravindra Jadeja For T20 Cricket Says Parthiv Patel

ಇಂದೋರ್‌ನಲ್ಲಿ 2ನೇ ಟಿ20 ಪಂದ್ಯದ ಮುಕ್ತಾಯದ ನಂತರ, ಪ್ರಸಾರಕರೊಂದಿಗೆ ಮಾತನಾಡಿದ ಪಾರ್ಥಿವ್ ಪಟೇಲ್, ಟಿ20 ಸ್ವರೂಪಕ್ಕೆ ಬಂದಾಗ ಭಾರತ ತಂಡದಲ್ಲಿ ಅಕ್ಷರ್‌ ಪಟೇಲ್‌ರನ್ನು ಒಂದು ನಿರ್ದಿಷ್ಟ ಆಯ್ಕೆಯನ್ನಾಗಿ ಮಾಡುತ್ತದೆ ಎಂಬುದನ್ನು ವಿವರಿಸಿದರು.

"ಅಕ್ಷರ್‌ ಪಟೇಲ್‌ ಬೌಲಿಂಗ್ ಮಾಡುವ ನಿಖರತೆ ಆತನ ಶಕ್ತಿಯಾಗಿದೆ. ಅವನು ಹೆಚ್ಚಾಗಿ ಸ್ಲಾಟ್‌ನಲ್ಲಿ ಬೌಲ್ ಮಾಡುವುದಿಲ್ಲ, ನೀವು ಅವನ ಬೌಲಿಂಗ್‌ನಲ್ಲಿ ಹೊಡೆಯಬೇಕಾದರೆ, ನೀವು ಮುಂದೆ ಹೆಜ್ಜೆ ಬಳಸಿ ಹೊಡೆಯಬೇಕು ಅಥವಾ ಜಾಗವನ್ನು ಮಾಡಿಕೊಳ್ಳಬೇಕು. ಆತ ಬೌಲಿಂಗ್ ಮಾಡುವ ವೇಗದಿಂದಾಗಿ ಹೆಜ್ಜೆ ಬಳಸುವುದು ಸುಲಭವಲ್ಲ," ಎಂದು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಜಿಯೋ ಸಿನಿಮಾದಲ್ಲಿ ಹೇಳಿದರು.

ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಮತ್ತು ಕೌಶಲ್ಯವನ್ನು ಹೊಂದಿರುವ ಅಕ್ಷರ್ ಪಟೇಲ್ ಅವರನ್ನು ಉತ್ತಮ ಕ್ರಿಕೆಟಿಗನನ್ನಾಗಿ ಮಾಡುತ್ತದೆ. ಆತ ಎಲ್ಲೆಡೆ ಪ್ರದರ್ಶನ ನೀಡಬಲ್ಲ ಎಂದು ಪಾರ್ಥಿವ್ ಪಟೆಲ್ ಅಭಿಪ್ರಾಯಪಟ್ಟರು.

"ಅಕ್ಷರ್ ಪಟೇಲ್ ಎಲ್ಲಾ ಕ್ರಮಾಂಕದಲ್ಲಿ ಪ್ರದರ್ಶನ ನೀಡಬಲ್ಲ ಆಟಗಾರ. ಈ ಟಿ20 ಸ್ವರೂಪದಲ್ಲಿ ನಾವು ರವೀಂದ್ರ ಜಡೇಜಾ ಬಗ್ಗೆ ಮಾತನಾಡುತ್ತೇವೆ. ಆದರೆ ಅಕ್ಷರ್ ನಿಮಗೆ ಸ್ಥಿರತೆಯನ್ನು ನೀಡುತ್ತಾನೆ ಎಂದು ನಾನು ಭಾವಿಸುತ್ತೇನೆ. ಅಕ್ಷರ್ ಪಟೇಲ್ ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುತ್ತಾನೆ ಮತ್ತು ಅದು ಅವರನ್ನು ಇನ್ನೂ ಉತ್ತಮ ಕ್ರಿಕೆಟಿಗನನ್ನಾಗಿ ಮಾಡುತ್ತದೆ," ಎಂದು ಆರ್‌ಸಿಬಿ ಮಾಜಿ ಆಟಗಾರ ಹೇಳಿದರು.

ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಕ್ಷರ್ ಪಟೇಲ್ 4 ಓವರ್‌ಗಳಲ್ಲಿ 17 ರನ್ ನೀಡಿ 2 ವಿಕೆಟ್‌ಗಳೊಂದಿಗೆ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ಬ್ಯಾಟಿಂಗ್‌ಗೆ ಉತ್ತಮವಾದ ಪಿಚ್‌ನಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡವನ್ನು 172 ರನ್‌ಗಳಿಗೆ ನಿರ್ಬಂಧಿಸಿತು. ಈ ವೇಳೆ ಅಕ್ಷರ್ ಪಟೇಲ್ ತಮ್ಮ ಬಿಗಿ ಬೌಲಿಂಗ್‌ನಲ್ಲಿ ಇಬ್ರಾಹಿಂ ಜದ್ರಾನ್ ಮತ್ತು ಗುಲ್ಬದಿನ್ ನೈಬ್ ಅವರ ವಿಕೆಟ್‌ ಪಡೆದರು.

ಅಕ್ಷರ್‌ಗೆ ಸರಣಿಯಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ. ಆದರೆ ಪವರ್-ಶಾಟ್ ಬಾರಿಸುವ ಸಾಮರ್ಥ್ಯದಿಂದಾಗಿ ಅವರು ತಂಡಕ್ಕೆ ಹೆಚ್ಚಿನ ಮೌಲ್ಯವನ್ನು ತರುತ್ತಾರೆ ಎಂದು ಪಾರ್ಥಿವ್ ಪಟೇಲ್ ಹೇಳಿದರು.

"ಟಿ20 ಸ್ವರೂಪದಲ್ಲಿ ಅಕ್ಸರ್ ಹೆಚ್ಚು ವೈವಿಧ್ಯತೆಯನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಒಂದು ಆಯಾಮದಲ್ಲಿ ಬೌಲಿಂಗ್ ಮಾಡುವುದಿಲ್ಲ. ಅವನು ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾನೆ. ನನ್ನ ಮಟ್ಟಿಗೆ ಅಕ್ಷರ್ ಪಟೇಲ್ ಅವರು ರವೀಂದ್ರ ಜಡೇಜಾಗಿಂತ ಮುಂದಿದ್ದಾರೆ," ಎಂದು ಪಾರ್ಥಿವ್ ಪಟೇಲ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡದ ಮೂರನೇ ಮತ್ತು ಅಂತಿಮ ಟಿ20 ಪಂದ್ಯವು ಬುಧವಾರ, ಜನವರಿ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Story first published: Tuesday, January 16, 2024, 12:12 [IST]
Other articles published on Jan 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+