For Quick Alerts
ALLOW NOTIFICATIONS  
For Daily Alerts
 

ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಡೌಟ್; 2024ರ ಐಪಿಎಲ್‌ಗೆ ಫಿಟ್!

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತವರಿನಲ್ಲಿ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ.

ಮುಂಬೈ ಇಂಡಿಯನ್ಸ್ ನೂತನ ನಾಯಕ ಹಾರ್ದಿಕ್ ಪಾಂಡ್ಯ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಲಿದ್ದರು. ಮೊದಲ ಟಿ20 ಪಂದ್ಯ ಜನವರಿ 11ರಂದು ನಡೆಯಲಿದ್ದು, ಆದರೆ ಪಂದ್ಯಗಳು ಪ್ರಾರಂಭವಾಗುವ ಹೊತ್ತಿಗೆ ಅವರು ಸಂಪೂರ್ಣವಾಗಿ ಫಿಟ್ ಆಗಿರುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

IND vs AFG: Hardik Pandya Doubtful For T20 Series Against Afghanistan And Fit for IPL 2024

2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ತಮ್ಮ ಪಾದದ ಗಾಯಕ್ಕೆ ಒಳಗಾಗಿದ್ದರು ಮತ್ತು ಅಂದಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಅಂದಿನಿಂದ ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನ ಉಳಿದ ಎಲ್ಲಾ ಪಂದ್ಯಗಳಿಂದ ಹೊರಗುಳಿದರು ಮತ್ತು ಬಹು-ಮಾದರಿಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ವಿಶ್ರಾಂತಿ ಪಡೆದರು.

ಇತ್ತೀಚಿಗೆ ಹಾರ್ದಿಕ್ ಪಾಂಡ್ಯ, ರೋಹಿತ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಕೆಲವು ಘಟನೆಗಳು ನಡೆದಿವೆ ಹಾಗೂ ನಾಯಕತ್ವದ ಜವಾಬ್ದಾರಿಗಳು ಬದಲಾವಣೆಯಾಗಿದೆ. ಐಪಿಎಲ್‌ಗೆ ಸಂಬಂಧಿಸಿದ ಆಶ್ಚರ್ಯಕರ ಸುದ್ದಿ ಏನೆಂದರೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಗುಜರಾತ್ ಟೈಟನ್ಸ್ ನಾಯಕನನ್ನು ಎಲ್ಲಾ ನಗದು ಒಪ್ಪಂದದಲ್ಲಿ ವ್ಯಾಪಾರ ಮಾಡಲು ನಿರ್ಧರಿಸಿತು.

ಹಾರ್ದಿಕ್ ಪಾಂಡ್ಯ ಅವರನ್ನು ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್‌ನ ನೂತನ ನಾಯಕನಾಗಿ ಹೆಸರಿಸಲಾಯಿತು. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೋಲ್ ಮಾಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ನಾಯಕನ ಸ್ಥಾನದಿಂದ ತೆಗೆದು ಹಾಕಿದ ಬಳಿಕ, ಮುಂಬೈ ಇಂಡಿಯನ್ಸ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಕಳೆದುಕೊಂಡಿದೆ.

ಭಾರತ ತಂಡಕ್ಕೆ ಹಿಂತಿರುಗಿದರೆ, ಮುಂಬರುವ ಟಿ20 ವಿಶ್ವಕಪ್‌ಗೆ ಪೂರ್ವಸಿದ್ಧತೆ ಮಾಡಲು ಹೆಚ್ಚಿನ ಟಿ20 ಪಂದ್ಯಗಳನ್ನು ಹೊಂದಿಲ್ಲ. ಅದಕ್ಕಾಗಿಯೇ ಅಫ್ಘಾನಿಸ್ತಾನ ವಿರುದ್ಧದ ಮೂರು ಟಿ20 ಪಂದ್ಯಗಳು ವಿಶ್ವಕಪ್‌ನ ಮುಂದಿನ ಯೋಜನೆಗಳಿಗೆ ನಿರ್ಣಾಯಕವಾಗಿವೆ.

ಟಿ20 ಸಂಯೋಜನೆಯಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಆಟಗಾರ. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದು, ಇಬ್ಬರು ಕ್ರಿಕೆಟಿಗರ ಪಾತ್ರವನ್ನು ಆಡುವ 11ರ ಬಳಗದಲ್ಲಿ ಸಮತೋಲನವ ತರುತ್ತಾರೆ. ಅವರ ಅನುಪಸ್ಥಿತಿಯು ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ದೊಡ್ಡ ಹಾಕಿ ಉಂಟುಮಾಡಿತು.

ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧ 3 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರೆ, ಅವರೇ ಐಸಿಸಿ ಪಂದ್ಯಾವಳಿಗೆ ನಾಯಕರಾಗಿ ಮುಂದುವರೆಯಬಹುದು. ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು, ಅನೇಕ ಪಂದ್ಯಗಳಲ್ಲಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು.

ಒಂದು ವೇಳೆ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್‌ಗೆ ಮರಳಿದರೆ, 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

Story first published: Wednesday, December 27, 2023, 14:49 [IST]
Other articles published on Dec 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+