Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲ ಓವರ್‌ನಲ್ಲಿ ವಿಕೆಟ್‌ ಪಡೆದ ಮಾನವ್ ಸುತಾರ್‌ ದಾಖಲೆ

ನ್ಯೂ ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಣ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯದಲ್ಲಿ, ಭಾರತ ಟೆಸ್ಟ್‌ ಪಂದ್ಯದಲ್ಲಿ ಬಲಿಷ್ಠ ಹಿಡಿತ ಸಾಧಿಸಿದೆ. ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ಅನ್ನು 564 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ದಿನದ ಆಟದ ಅಂತ್ಯಕ್ಕೆ ಅಫ್ಘಾನಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 113 ರನ್‌ ಸೇರಿಸಿ, ಫಾಲೋ ಆನ್ ಭೀತಿ ಅನುಭವಿಸುತ್ತಿದೆ. ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಮಾನವ್ ಸುತಾರ್ ಬಿಗುವಿನ ದಾಳಿ ನಡೆಸಿ ಆರ್ಭಟಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಸುತಾರ್ 3 ವಿಕೆಟ್‌ ಪಡೆದು ಬೀಗಿದ್ದಾರೆ. ಸುತಾರ್ ತಮ್ಮ ಮೊದಲ ಓವರ್‌ನಲ್ಲಿಯೇ ವಿಕೆಟ್ ಪಡೆಯುವ ಮೂಲಕ ವಿಶೇಷ ಪಟ್ಟಿಯಲ್ಲಿ ಸ್ಥಾನ ಪಡೆದರು.

ಅಫ್ಘಾನಿಸ್ತಾನ ವಿರುದ್ಧದ ಈ ಟೆಸ್ಟ್ ಪಂದ್ಯಕ್ಕೆ ಸ್ಟಾರ್ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದ ಮಾನವ್ ಸುತಾರ್ ಬ್ಯಾಟಿಂಗ್‌ನಲ್ಲಿ 41 ಎಸೆತಗಳಲ್ಲಿ 28 ರನ್ ಸಿಡಿಸಿದರು. ಭಾನುವಾರ ಇವರಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಬಳಸಿಕೊಂಡು ಬೌಲ್ ಮಾಡಿದ ಸುತಾರ್ ಮೊದಲ ಓವರ್‌ನಲ್ಲೇ, ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಅಬ್ದುಲ್ ಮಲಿಕ್ ಅವರನ್ನು ನಾಲ್ಕನೇ ಎಸೆತದಲ್ಲಿ ಔಟ್ ಮಾಡಿದರು. ಈ ಮೂಲಕ ಸುತಾರ್ ವಿಶೇಷ ಕ್ಲಬ್‌ಗೆ ಎಂಟ್ರಿ ಪಡೆದರು.

IND vs AFG

ಭಾರತೀಯ ಬೌಲರ್ ತಮ್ಮ ಮೊದಲ ಟೆಸ್ಟ್ ಪಂದ್ಯದ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದ ನಂತರ 25 ವರ್ಷಗಳು ಕಳೆದಿದ್ದವು. ಈಗ ಈ ಸಾಧನೆ ಮಾನವ್ ಸುತಾರ್ ಅವರ ಪಾಲಾಗಿದೆ. ಇವರಿಗೂ ಮೊದಲ 2001ರಲ್ಲಿ ಟಿನು ಯೋಹನ್ನನ್ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.

ಪಂದ್ಯದ ಚಿತ್ರಣ

ಭಾರತದ ಪರ ಟೆಸ್ಟ್‌ ಪಂದ್ಯದಲ್ಲಿ ನಾಯಕ ಶುಭಮನ್‌ ಗಿಲ್‌, ರಿಷಭ್‌ ಪಂತ್‌, ಕೆಎಲ್ ರಾಹುಲ್‌ ಅಮೋಘ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 564 ರನ್‌ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಈ ಪಂದ್ಯದಲ್ಲಿ ನಾಯಕ ಶುಭಮನ್‌ ಗಿಲ್ 126 ರನ್ ಗಳಿಸಿದರೆ, ರಾಹುಲ್ 100 ರನ್ ಸಿಡಿಸಿದರು. ಸುದರ್ಶನ್ ಮತ್ತು ಪಂತ್ ತಲಾ 81 ರನ್ ಗಳಿಸಿದರು. ಸುಂದರ್ ಕೂಡ ಅಜೇಯ 52 ರನ್ ಗಳಿಸಿದರು.

Story first published: Sunday, June 7, 2026, 20:25 [IST]
Other articles published on Jun 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+