For Quick Alerts
ALLOW NOTIFICATIONS  
For Daily Alerts
 

IND vs AFG: ವಿಶ್ವಕಪ್‌ನಲ್ಲಿ ಈ ಕಳಪೆ ದಾಖಲೆ ನಿರ್ಮಿಸಿದ ನಾಲ್ಕನೇ ಭಾರತೀಯನಾದ ಮೊಹಮ್ಮದ್ ಸಿರಾಜ್

ಬುಧವಾರ, ಅಕ್ಟೋಬರ್ 11ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 9ನೇ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಅಫ್ಘಾನಿಸ್ತಾನ ಸವಾಲಿನ ಮೊತ್ತವನ್ನು ಕಲೆಹಾಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಹಶ್ಮತುಲ್ಲಾ ಶಾಹಿದಿ, ಅಜ್ಮತುಲ್ಲಾ ಒಮರ್ಜಾಯ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿತು.

IND vs AFG Match:Mohammed Siraj Becomes the 4th Indian To Achieve This Worst Record in ICC World Cup


ಇದೇ ವೇಳೆ ವೇಗಿ ಮೊಹಮ್ಮದ್ ಸಿರಾಜ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ನಾಲ್ಕನೇ ಅತ್ಯಂತ ದುಬಾರಿ ಸ್ಪೆಲ್ ಬೌಲ್ ಮಾಡಿದ ಕುಖ್ಯಾತಿಗೆ ಒಳಗಾದರು.

2023ರ ವಿಶ್ವಕಪ್ ಪಂದ್ಯಾವಳಿಯ ಹಶ್ಮತುಲ್ಲಾ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ಮೊಹಮ್ಮದ್ ಸಿರಾಜ್ 9-0-76-0 ಅಂಕಿಸಂಖ್ಯೆಗಳೊಂದಿಗೆ ಮುಗಿಸಿದರು.

2019ರ ಜೂನ್ 30ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10-0-88-0 ಅಂಕಿಅಂಶಗಳೊಂದಿಗೆ ಮುಕ್ತಾಯಗೊಂಡ ನಂತರ ಯುಜ್ವೇಂದ್ರ ಚಹಾಲ್ ಅತ್ಯಂತ ದುಬಾರಿ ಸ್ಪೆಲ್‌ನ ದಾಖಲೆಯನ್ನು ಹೊಂದಿದ್ದಾರೆ.

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಎರಡನೇ ಅತ್ಯಂತ ದುಬಾರಿ ವೇಗದ ಬೌಲರ್ ಆಗಿ ಉಳಿದಿದ್ದಾರೆ.

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ 2023ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ಆಸ್ಟ್ರೇಲಿಯಾ ವಿರುದ್ಧ 10-0-87-0 ಅಂಕಿಸಂಖ್ಯೆಗಳನ್ನು ಹೊಂದಿದ್ದಾರೆ.

ಲಂಡನ್‌ನ ಐಕಾನಿಕ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 1975ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಕರ್ಸನ್ 11-1-83-0 ಅಂಕಿಅಂಶಗಳನ್ನು ಹೊಂದಿದ್ದಾರೆ.

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಫೈನಲ್‌ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಆರು ವಿಕೆಟುಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ತಂಡವನ್ನು ಸೋಲಿಸಿದ ನಂತರ, ನಂ.1 ಏಕದಿನ ಶ್ರೇಯಾಂಕದ ಬೌಲರ್ ಆಗಿ ವಿಶ್ವಕಪ್‌ಗೆ ಬಂದರು.

ಭಾರತ ತಂಡದ ವಿರುದ್ಧ ಅಫ್ಘಾನಿಸ್ತಾನ ತಂಡ ಮೊದಲ ಬಾರಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ ಮತ್ತು ರಹಮತ್ ಶಾ ಉತ್ತಮ ಆರಂಭವನ್ನು ಪಡೆದರೂ, ಆದರೆ ಅದನ್ನು ಮುಂದುವರಿಸಲು ವಿಫಲರಾದರು.

ಆನಂತರ ಅಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ನಾಲ್ಕನೇ ವಿಕೆಟ್‌ಗೆ 121 ರನ್‌ಗಳ ಜೊತೆಯಾಟವಾಡುವ ಮೂಲಕ ಅಫ್ಘಾನಿಸ್ತಾನ ತಂಡದ ಇನ್ನಿಂಗ್ಸ್‌ಗೆ ಬಲ ತಂದರು.

ಅಶ್ಮತುಲ್ಲಾ ಶಾಹಿದಿ 88 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 80 ರನ್ ಗಳಿಸಿ ಕುಲದೀಪ್ ಯಾದವ್ ಎಸೆತದಲ್ಲಿ ಸ್ವೀಪ್ ಶಾಟ್ ಬಾರಿಸುವ ಯತ್ನದಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು.

ಅಜ್ಮತುಲ್ಲಾ ಒಮರ್ಜಾಯ್ ಕೂಡ ತಮ್ಮ ಶಾಟ್‌ಗಳನ್ನು ಮುಕ್ತವಾಗಿ ಆಡಿ 69 ಎಸೆತಗಳಲ್ಲಿ 2 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಮೂಲಕ 62 ರನ್ ಬಾರಿಸಿದರು.

ಭಾರತದ ಪರ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ 10 ಓವರ್‌ಗಳಲ್ಲಿ 39 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ 7 ಓವರ್‌ಗಳಲ್ಲಿ 43 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Wednesday, October 11, 2023, 20:18 [IST]
Other articles published on Oct 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+