Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AFG Test; ಫಾಲೋ ಆನ್‌ ಭೀತಿಯಲ್ಲಿ ಅಫ್ಘಾನಿಸ್ತಾನ; ಭಾರತದ ಬಿಗಿ ಹಿಡಿತ

ನ್ಯೂ ಚಂಡೀಗಢ: ಭರವಸೆಯ ಬೌಲರ್‌ಗಳಾದ ಪ್ರಸಿದ್ಧ್ ಕೃಷ್ಣ ಹಾಗೂ ಯುವ ಆಟಗಾರ ಮಾನವ್ ಸುತಾರ್ ಅವರ ಭರ್ಜರಿ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ಪ್ರವಾಸಿ ಅಫ್ಘಾನಿಸ್ತಾನ ಫಾಲೋ ಆನ್‌ ಭೀತಿಯನ್ನು ಎದುರಿಸುತ್ತಿದೆ.

ಭಾನುವಾರದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದೆ. 3 ವಿಕೆಟ್‌ಗೆ 368 ರನ್‌ಗಳಿಂದ ದಿನದಾಟ ಆರಂಭಿಸಿದ ಶುಭಮನ್ ಗಿಲ್‌ 123, ರಿಷಭ್‌ ಪಂತ್ (6 ಬೌಂಡರಿ, 3 ಸಿಕ್ಸರ್) 81, ವಾಷಿಂಗ್ಟನ್‌ ಸುಂದರ್‌ ಅಜೇಯ 52 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 564 ರನ್‌ ಕಲೆ ಹಾಕಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

Ind vs Afg

ಮೊದಲ ಇನಿಂಗ್ಸ್‌ ಆರಂಭಿಸಿದ ಅಫ್ಘಾನಿಸ್ತಾನದ ಆರಂಭ ಕಳಪೆಯಾಗಿತ್ತು. ಅಬ್ದುಲ್ ಮಲಿಕ್‌, ಸೆದಿಕುಲ್ಲಾ ಅಟಲ್ ಮೊದಲ ವಿಕೆಟ್‌ಗೆ 28 ರನ್‌ಗಳ ಜೊತೆಯಾಟವನ್ನು ನೀಡಿದರು. ಈ ವೇಳೆ ಇನಿಂಗ್ಸ್‌ನ 6ನೇ ಓವರ್‌ ಬೌಲ್‌ ಮಾಡಿದ ಮಾನವ್‌ ಸುತಾರ್ ಅವರ ನಾಲ್ಕನೇ ಎಸೆತದಲ್ಲಿ ಅಬ್ದುಲ್ ಮಲಿಕ್‌ ದೊಡ್ಡ ಹೊಡೆತಕ್ಕೆ ಮುಂದಾದರು. ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಲೈಗ್‌ ಸೈಡ್‌ನ ಸ್ಕ್ವೇರ್‌ನಲ್ಲಿ ನಿಂತಿದ್ದ ಸಿರಾಜ್‌ಗೆ ಕ್ಯಾಚ್ ನೀಡಿದರು.

ಮಾನವ್ ಸುತಾರ್‌ಗೆ 3 ವಿಕೆಟ್‌

17 ರನ್‌ ಬಾರಿಸಿ ದೊಡ್ಡ ಇನಿಂಗ್ಸ್ ಕಟ್ಟುವ ಕನಸಿನಲ್ಲಿದ್ದ ಸೆದಿಕುಲ್ಲಾ ಅಟಲ್ ಇನಿಂಗ್ಸ್‌ನ 9ನೇ ಓವರ್‌ ಎಸೆದ ಪ್ರಸಿದ್ಧ್ ಕೃಷ್ಣ ತೋಡಿದ ಖೆಡ್ಡಾಗೆ ಬಲಿಯಾದರು. ಭರವಸೆಯ ಆಟಗಾರ ರಹಮತುಲ್ಲಾ ಗುರ್ಬಾಜ್‌ (12) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಹಶ್ಮತುಲ್ಲಾ ಶಾಹಿದಿ (20) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲಿಲ್ಲ. ಅಫ್ಸರ್ ಝಜೈ ಸಹ ಮಾನವ್ ಸುತಾರ್ ತೋಡಿದ ಖೆಡ್ಡಾಗೆ ಬಲಿಯಾದರು.

Ind vs Afg

ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ರಹಮತ್ ಶಾ 6 ಬೌಂಡರಿ, 1 ಸಿಕ್ಸರ್‌ ಸೇರಿದಂತೆ ಅಜೇಯ 43 ರನ್‌ ಬಾರಿಸಿದ್ದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನದಾಟದಂತ್ಯಕ್ಕೆ ಅಫ್ಘಾನಿಸ್ತಾನ 5 ವಿಕೆಟ್‌ಗೆ 113 ರನ್‌ ಸೇರಿಸಿದೆ. ಭಾರತದ ಪರ ಪದಾರ್ಪಣೆ ಪಂದ್ಯವನ್ನು ಆಡುತ್ತಿರುವ ಮಾನವ್ ಸುತಾರ್ 3, ಪ್ರಸಿದ್ಧ್ ಕೃಷ್ಣ 2 ವಿಕೆಟ್‌ ಕಬಳಿಸಿದರು.

Story first published: Sunday, June 7, 2026, 18:01 [IST]
Other articles published on Jun 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+