ಗುರುವಾರ, ಜನವರಿ 11ರಂದು ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ತಂಡವು ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ.
ಇದೇ ವೇಳೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಟಿ20 ಪಂದ್ಯಗಳಲ್ಲಿ ತಂಡಕ್ಕೆ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಲು ಬೆಂಬಲಿಸಿದ್ದಾರೆ.

2024ರ ಟಿ20 ವಿಶ್ವಕಪ್ ಕೆಲವೇ ತಿಂಗಳುಗಳಿಗೆ ಮುನ್ನ ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲು 14 ತಿಂಗಳುಗಳ ನಂತರ ಮರಳುತ್ತಿದ್ದಾರೆ.
2023ರ ಅಹಮದಾಬಾದ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ ರೋಹಿತ್ ಶರ್ಮಾ ವೈಟ್-ಬಾಲ್ ಕ್ರಿಕೆಟ್ ಆಡಿಲ್ಲ.
ಮೊದಲ ಟಿ20 ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ಟಿ20 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಇನ್ನಿಂಗ್ಸ್ ತೆರೆಯಲು ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಬೆಂಬಲಿಸಿದರು. ಆರಂಭಿಕ ಆಟಗಾರನಾಗಿ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಪ್ರದರ್ಶನದಿಂದ ತಂಡವು ಸಂತೋಷವಾಗಿದೆ ಎಂದು ಹೇಳಿದರು.

ಯಶಸ್ವಿ ಜೈಸ್ವಾಲ್ ಅಡಿದ 15 ಟಿ20 ಪಂದ್ಯಗಳಲ್ಲಿ 33.07ರ ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ. ಅಲ್ಲದೆ, 159.25ರ ಸ್ಟ್ರೈಕ್‌ರೇಟ್‌ನಲ್ಲಿ ಮೂರು ಅರ್ಧಶತಕ ಮತ್ತು ಏಕೈಕ ಶತಕವನ್ನು ಸಿಡಿಸಿದ್ದಾರೆ.
"ನಾವು ಖಂಡಿತವಾಗಿಯೂ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಇನ್ನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದೇವೆ. ನಾವು ಇಂತಹ ತಂಡವನ್ನು ಹೊಂದಿರುವಾಗ, ತಂಡದ ಹಿತದೃಷ್ಟಿಯಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ನಾವು ಯಾರ ಬಾಗಿಲನ್ನು ಮುಚ್ಚಿಲ್ಲ. ಆದರೆ ಯಶಸ್ವಿ ಜೈಸ್ವಾಲ್ ನಮಗೆ ಓಪನರ್ ಆಗಿ ಮಾಡಿದ್ದರ ಬಗ್ಗೆ ನಮಗೆ ಸಂತೋಷವಾಗಿದೆ. ಅವರು ನಮಗೆ ಅಗ್ರಸ್ಥಾನದಲ್ಲಿ ಎಡಗೈ ಸಂಯೋಜನೆಯನ್ನು ನೀಡುತ್ತಾರೆ," ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.
ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ವಿರಾಟ್ ಕೊಹ್ಲಿ ನಂತರ, ಎರಡನೇ ಅತಿ ಹೆಚ್ಚು ಸಾರ್ವಕಾಲಿಕ ರನ್ ಸ್ಕೋರರ್ ಆಗಿದ್ದಾರೆ. ಭಾರತದ ಪರ ಆಡಿದ 148 ಟಿ20 ಪಂದ್ಯಗಳಲ್ಲಿ "ಹಿಟ್‌ಮ್ಯಾನ್' 3,853 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪದಲ್ಲಿ 139.24ರ ಸ್ಟ್ರೇಕ್‌ರೇಟ್ ಮತ್ತು 31.31ರ ಸರಾಸರಿ ಹೊಂದಿದ್ದಾರೆ. ಭಾರತ ತಂಡದ ನಾಯಕ ಟಿ20 ಕ್ರಿಕೆಟ್‌ನಲ್ಲಿ 29 ಅರ್ಧಶತಕ ಮತ್ತು ನಾಲ್ಕು ಶತಕಗಳನ್ನು ಬಾರಿಸಿದ್ದಾರೆ.
ಅಫ್ಘಾನಿಸ್ತಾನ ತಂಡವು ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಎಂದಿಗೂ ಸೋಲಿಸಿಲ್ಲ. ಉಭಯ ತಂಡಗಳ ನಡುವೆ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಸೋತಿದೆ, ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ ಅಫ್ಘಾನಿಸ್ತಾನವು 10ನೇ ಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ಅತ್ಯಂತ ಕಡಿಮೆ ಸ್ವರೂಪದಲ್ಲಿ ಅಗ್ರ ಶ್ರೇಯಾಂಕದ ತಂಡವಾಗಿದೆ.