For Quick Alerts
ALLOW NOTIFICATIONS  
For Daily Alerts
 

IND vs AFG: ಟಿ20 ವಿಶ್ವಕಪ್‌ಗೆ ಮುನ್ನ ಹಾರ್ದಿಕ್ ಪಾಂಡ್ಯಗೆ ಟೆನ್ಶನ್ ಹೆಚ್ಚಿಸಿದ ಶಿವಂ ದುಬೆ!

ಭಾರತ ರಾಷ್ಟ್ರೀಯ ತಂಡದಲ್ಲಿ ಆಡಬೇಕೆನ್ನುವ ಕನಸು ಎಲ್ಲ ಯುವ ಕ್ರಿಕೆಟಿಗರದ್ದಾಗಿರುತ್ತದೆ. ಅಂತಹ ಅವಕಾಶಕ್ಕಾಗಿ ಹಾತೊರೆಯುತ್ತಿದ್ದವರಲ್ಲಿ ಶಿವಂ ದುಬೆ ಕೂಡ ಒಬ್ಬರು.

ಬಲಗೈ ಬೌಲಿಂಗ್ ಮತ್ತು ಎಡಗೈ ಬ್ಯಾಟಿಂಗ್ ಮಾಡುವ ಮೂಲಕ ವೈವಿಧ್ಯತೆ ತರುವ ಆಲ್‌ರೌಂಡರ್ ಆಗಿರುವ ಶಿವಂ ದುಬೆ ಈ ಸಮಯದಲ್ಲಿ ಭಾರತ ಕ್ರಿಕೆಟ್‌ನ ಚರ್ಚಾ ವಿಷಯವಾಗಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಐರ್ಲೆಂಡ್‌ನಲ್ಲಿ ಟಿ20 ಸರಣಿಯನ್ನು ಆಡುವ ಅವಕಾಶ ಪಡೆದ ಶಿವಂ ದುಬೆ, 3 ವರ್ಷಗಳ ನಂತರ ಹಿರಿಯ ರಾಷ್ಟ್ರೀಯ ತಂಡಕ್ಕೆ ಮರಳಿದರು. ಅಲ್ಲದೆ, ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಪದಕ ವಿಜೇತ ಅಭಿಯಾನದ ಭಾಗವಾಗಿದ್ದರು.

IND vs AFG: Shivam Dube All-rounder Performance; Tension for Hardik Pandya Ahead of T20 World Cup

ಏಕದಿನ ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಟಿ20 ಸರಣಿಗೆ ಶಿವಂ ದುಬೆ ಅವರನ್ನು ಆಯ್ಕೆ ಮಾಡಲಾಯಿತು. ಆದರೆ, ದುಬೆ ಎಲ್ಲಾ 5 ಪಂದ್ಯಗಳಲ್ಲಿ ಬೆಂಚ್ ಕಾಯಿಸಬೇಕಾಯಿತು.

ನಂತರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ಸರಣಿಯಿಂದ ಹೊರಬಿದ್ದ ನಂತರ, ಶಿವಂ ದುಬೆ ಅವರು ಸ್ವದೇಶದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಮರಳಿದರು. ಇದು ಜೂನ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಮೊದಲು ಭಾರತಕ್ಕೆ ಕೊನೆಯ ಅಂತಾರಾಷ್ಟ್ರೀಯ ಟಿ20 ಸರಣಿಯಾಗಿದೆ.

ಕೆಲವು ಪ್ರಮುಖ ಆಟಗಾರರು ಗಾಯಗೊಂಡಿದ್ದರಿಂದ ಅಥವಾ ಟಿ20 ಸರಣಿಯ ಆಯ್ಕೆಗೆ ಲಭ್ಯವಿಲ್ಲದ ಕಾರಣ, ಶಿವಂ ದುಬೆಗೆ ಅದೃಷ್ಟ ಒಲಿದುಬಂತು. ಮೊದಲ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ನೀಡಿದ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ.

ವೇಗದ ಬೌಲಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಸರಣಿಯನ್ನು ತಪ್ಪಿಸಿಕೊಂಡರು ಮತ್ತು ಜನವರಿ 11ರಂದು ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಲ್‌ರೌಂಡರ್ ಪಾತ್ರವನ್ನು ತುಂಬಲು ಶಿವಂ ದುಬೆ ಹಿಂಜರಿಯಲಿಲ್ಲ.

ಭಾರತ ತಂಡ ಇನ್-ಫಾರ್ಮ್ ವೇಗಿ ಅವೇಶ್ ಖಾನ್ ಕೈಬಿಟ್ಟಿತು ಮತ್ತು 3 ಸ್ಪಿನ್ನರ್‌ಗಳು, ಇಬ್ಬರು ಮುಂಚೂಣಿ ವೇಗಿಗಳು ಮತ್ತು ಆಲ್‌ರೌಂಡರ್ ಶಿವಂ ದುಬೆ ಅವರನ್ನೊಳಗೊಂಡ ಬೌಲಿಂಗ್ ದಾಳಿಯನ್ನು ಆರಿಸಿಕೊಂಡಿತು. ಅಲ್ಲದೆ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡಲು ಅವಕಾಶಗಳನ್ನು ಪಡೆದರು.

ಮೊಹಾಲಿಯಲ್ಲಿನ ಪಿಚ್‌ನಿಂದ ವೇಗದ ಚಲನೆಯನ್ನು ಪಡೆಯುವ ಮೂಲಕ ಅಫ್ಘಾನಿಸ್ತಾನ ಬ್ಯಾಟರ್‌ಗಳನ್ನು ತೊಂದರೆಗೊಳಿಸಿದ ಮುಂಬೈ ಕ್ರಿಕೆಟಿಗ ಶಿವಂ ದುಬೆ, ಅಫ್ಘಾನಿಸ್ತಾನದ ನಾಯಕ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಪಡೆದರು.

IND vs AFG: Shivam Dube All-rounder Performance; Tension for Hardik Pandya Ahead of T20 World Cup

ಶಿವಂ ದುಬೆ ತಮ್ಮ 2 ಓವರ್‌ಗಳ ಕೋಟಾದಲ್ಲಿ 9 ರನ್‌ಗಳಿಗೆ 1 ವಿಕೆಟ್ ಪಡೆದರು ಮತ್ತು ಭಾರತದ 159 ರನ್‌ಗಳ ಯಶಸ್ವಿ ಚೇಸ್‌ನಲ್ಲಿ 40 ಎಸೆತಗಳಲ್ಲಿ ಅಜೇಯ 60 ರನ್ ಗಳಿಸುವ ಮೂಲಕ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಟೆನ್ಶನ್ ಹೆಚ್ಚಿಸಿದರು.

ಇತ್ತೀಚಿನ ದಿನಗಳಲ್ಲಿ ಗಾಯದ ಸಮಸ್ಯೆಗೆ ಒಳಗಾಗಿರುವ ಹಾರ್ದಿಕ್ ಪಾಂಡ್ಯಗೆ ಬ್ಯಾಕ್‌ಅಪ್ ಆಯ್ಕೆಯಾಗಿ ಶಿವಂ ದುಬೆ ಅವರಂತಹ ಕ್ಲಾಸ್ ಆಟಗಾರನನ್ನು ಪಡೆಯಲು ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಖಂಡಿತವಾಗಿಯೂ ಎದುರು ನೋಡುತ್ತಿರುತ್ತದೆ.

2024ರ ಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಶಿವಂ ದುಬೆ ಅವರು ಭರ್ಜರಿ ಪ್ರದರ್ಶನ ನೀಡಿದ್ದು, ಭಾರತ ತಂಡದ ಸಂಯೋಜನೆಯಲ್ಲಿ ಹಾರ್ದಿಕ್ ಪಾಂಡ್ಯಗೆ ಕಠಿಣ ಸ್ಪರ್ಧೆ ಒಡ್ಡುವಂತೆ ಮಾಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಪಾದದ ಗಾಯಕ್ಕೆ ಒಳಗಾದ ನಂತರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಂದ್ಯಾವಲಿಯಿಂದ ಹೊರಗುಳಿದರು. ಹಾರ್ದಿಕ್ ಪಾಂಡ್ಯ ಅವರು ಸದ್ಯ ಚೇತರಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ ಮತ್ತು 2024ರ ಐಪಿಎಲ್ ಋತುವಿನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲು ಮೈದಾನಕ್ಕೆ ಹಿಂತಿರುಗುವ ನಿರೀಕ್ಷೆಯಿದೆ.

ಮತ್ತೊಂದೆಡೆ, ಶಾರ್ದೂಲ್ ಠಾಕೂರ್ ತಮ್ಮ ಅವಕಾಶಗಳನ್ನು ಸರಿಯಾಗಿ ಪಡೆಯಲು ಸಾಧ್ಯವಾಗದ ಕಾರಣ, ತಂಡದ ಮ್ಯಾನೇಜ್‌ಮೆಂಟ್ ಶಿವಂ ದುಬೆ ಅವರ ಸ್ಥಿರ ಪ್ರದರ್ಶನವನ್ನು ನೋಡಲು ಇಷ್ಟಪಡುತ್ತದೆ.

ರಾಹುಲ್ ದ್ರಾವಿಡ್, ಅಜಿತ್ ಅಗರ್ಕರ್ ಮತ್ತು ರೋಹಿತ್ ಶರ್ಮಾ ಅವರು ಮುಂಬರುವ ಟಿ20 ವಿಶ್ವಕಪ್ ಯೋಜನೆಯನ್ನು ಪಟ್ಟಿ ಮಾಡುವಾಗ ಶಿವಂ ದುಬೆ ಅವರನ್ನು ತಲೆಯಲ್ಲಿಟ್ಟುಕೊಂಡಿರುತ್ತಾರೆ. ಇದಕ್ಕೆ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೆ ಪ್ರದರ್ಶನ ನೀಡಿರುವುದು ದೊಡ್ಡ ಸಾಕ್ಷಿಯಾಗಿದೆ.

2024ರ ಐಪಿಎಲ್‌ನಲ್ಲಿ ಶಿವಂ ದುಬೆ ಅವರು ಎಂಎಸ್ ಧೋನಿ ಅವರಿಗೆ ಒಂದೆರಡು ಓವರ್‌ಗಳನ್ನು ನೀಡುವಂತೆ ಮನವೊಲಿಸಿದರೆ ಮತ್ತು ಅವರ ಅದ್ಭುತ ಕೌಶಲ್ಯವನ್ನು ಸುಧಾರಿಸಲು ಸಾಧ್ಯವಾದರೆ, ಬಿಸಿಸಿಐ ಆಯ್ಕೆಗಾರರ ​​ಗಮನವನ್ನು ಸೆಳೆಯುವುದಂತೂ ಪಕ್ಕಾ.

Story first published: Friday, January 12, 2024, 11:53 [IST]
Other articles published on Jan 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+