For Quick Alerts
ALLOW NOTIFICATIONS  
For Daily Alerts
 

Shivam Dube: ವಿಶೇಷ ಸಾಧನೆ ಮೂಲಕ ಕೊಹ್ಲಿ, ಯುವರಾಜ್, ಹಾರ್ದಿಕ್ ಪಟ್ಟಿಗೆ ಸೇರಿದ ಶಿವಂ ದುಬೆ!

ಗುರುವಾರ, ಜನವರಿ 12ರಂದು ಮೊಹಾಲಿಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಹಣಾಹಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ 1-0 ಅಂತರದ ಮುನ್ನಡೆ ಸಾಧಿಸಿತು.

ಇದೇ ವೇಳೆ ಭಾರತೀಯ ಆಲ್‌ರೌಂಡರ್ ಶಿವಂ ದುಬೆ ಅರ್ಧಶತಕ ಬಾರಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯ-ವಿಜೇತ ಆಟಗಾರನಾದರು.

IND vs AFG: Shivam Dube Joins Elite List of Virat Kohli And Yuvraj Singh With A Special Record

ಭಾರತ ತಂಡದ ರನ್ ಚೇಸಿಂಗ್ ವೇಳೆ ಶಿವಂ ದುಬೆ ಕೇವಲ 40 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಮೇತ ಅಜೇಯ 60 ರನ್ ಗಳಿಸಿದರು. ಇದಕ್ಕೂ ಮುನ್ನ ಬೌಲಿಂಗ್ ಮಾಡುವಾಗ ಶಿವಂ ದುಬೆ ತಮ್ಮ ಎರಡು ಓವರ್‌ಗಳಲ್ಲಿ ಕೇವಲ 9 ರನ್‌ಗಳನ್ನು ಬಿಟ್ಟುಕೊಟ್ಟು ಇಬ್ರಾಹಿಂ ಝದ್ರಾನ್ ಅವರ ಪ್ರಮುಖ ವಿಕೆಟ್ ಪಡೆದರು.

ಶಿವಂ ದುಬೆ ಅವರ ಆಲ್‌ರೌಂಡ್ ಪ್ರದರ್ಶನದ ಮೂಲಕ ವಿಶೇಷ ಸಾಧನೆಯೊಂದನ್ನು ಮಾಡಿದರು. ಶಿವಂ ದುಬೆ ಅವರು ಟಿ20 ಪಂದ್ಯದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿ ವಿಕೆಟ್ ಪಡೆದ ನಾಲ್ಕನೇ ಭಾರತೀಯ ಕ್ರಿಕೆಟಿಗನಾದರು.

ಇದಕ್ಕೂ ಮುನ್ನ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಮೂರು ಬಾರಿ ಈ ಸಾಧನೆ ಮಾಡಿದ್ದರೆ, ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಇನ್ನು ಬಲಗೈ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೊನೆಯದಾಗಿ ಒಮ್ಮೆ ಈ ಸಾಧನೆ ಮಾಡಿದ್ದಾರೆ.

IND vs AFG: Shivam Dube Joins Elite List of Virat Kohli And Yuvraj Singh With A Special Record

ಶಿವಂ ದುಬೆ ನೇತೃತ್ವದ ಭಾರತದ ಯುವ ಆಟಗಾರರು ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆರು ವಿಕೆಟ್‌ಗಳ ಗೆಲುವು ದಾಖಲಿಸಲು ಅವಕಾಶ ಮಾಡಿಕೊಂಡರು.

ಅಫ್ಘಾನಿಸ್ತಾನ ತಂಡದ ಪರ ಅನುಭವಿ ಮೊಹಮ್ಮದ್ ನಬಿ 27 ಎಸೆತಗಳಲ್ಲಿ 42 ರನ್ ಮತ್ತು ಯುವ ಆಟಗಾರ ಅಜ್ಮತುಲ್ಲಾ ಒಮರ್ಜಾಯ್ 22 ಎಸೆತಗಳಲ್ಲಿ 29 ರನ್ ನಡುವಿನ 43 ಎಸೆತಗಳಲ್ಲಿ 68 ರನ್‌ಗಳ ಜೊತೆಯಾಟವು ಆಫ್ಘಾನಿಸ್ತಾನ ತಂಡವನ್ನು ಐದು ವಿಕೆಟ್‌ಗೆ 158 ರನ್‌ ಕಲೆಹಾಕಲು ನೆರವಾಯಿತು.

ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಅಫ್ಘಾನಿಸ್ತಾನ ಗಳಿಸಿದ ಒಟ್ಟು ಮೊತ್ತವು ಸಾಕಾಗಲಿಲ್ಲ. ಏಕೆಂದರೆ ಭಾರತ ತಂಡ 17.3 ಓವರ್‌ಗಳಲ್ಲಿ ಸುಲಭವಾಗಿ ಗುರಿ ತಲುಪಿತು.

ಏಷ್ಯನ್ ಗೇಮ್ಸ್ ನಂತರ ಮೊದಲ ಟಿ20 ಪಂದ್ಯ ಆಡಿದ ಶಿವಂ ದುಬೆ ಮತ್ತು ತಿಲಕ್ ವರ್ಮಾ (22 ಎಸೆತಗಳಲ್ಲಿ 26 ರನ್) ನಾಲ್ಕು ಓವರ್‌ಗಳಲ್ಲಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡ ನಂತರ, 29 ಎಸೆತಗಳಲ್ಲಿ 44 ರನ್‌ಗಳ ಜೊತೆಯಾಟ ನಿರ್ಮಿಸಿದರು.

14 ತಿಂಗಳ ನಂತರ ಟಿ20 ಕ್ರಿಕೆಟ್‌ಗೆ ಮರಳಿದ ರೋಹಿತ್ ಶರ್ಮಾ ಡಕ್‌ಗೆ ರನೌಟ್ ಆದರು. ಭಾರತ ತಂಡದ ನಾಯಕನ ಆಟವು ಕೇವಲ ಎರಡು ಎಸೆತಗಳಿಗೆ ಸೀಮಿತವಾಯಿತು.

ಸಾಮಾನ್ಯವಾಗಿ ಶಾಂತ ಮತ್ತು ಕೂಲ್ ರೋಹಿತ್ ಶರ್ಮಾ ಈ ಸಂದರ್ಭದಲ್ಲಿ ತನ್ನ ಕೋಪವನ್ನು ತೋರಿಸಿದರು. ಶುಭ್ಮನ್ ಗಿಲ್ ತ್ವರಿತ ಸಿಂಗಲ್‌ಗಾಗಿ ತನ್ನ ಕರೆಗೆ ಗಮನ ಕೊಡಲಿಲ್ಲ ಎಂದು ರೋಹಿತ್ ಶರ್ಮಾ ತಾಳ್ಮೆ ಕಳೆದುಕೊಂಡರು.

ಶುಭ್ಮನ್ ಗಿಲ್ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ ಮತ್ತು ವೇಗದ 23 ರನ್ ಗಳಿಸಿ ಔಟಾದರು. ನಂತರ ತಿಲಕ್ ವರ್ಮಾ ಮತ್ತು ಶಿವಂ ದುಬೆ ಜೋಡಿ ಇನ್ನಿಂಗ್ಸ್ ಅನ್ನು ಮೇಲೆತ್ತಲು ಪ್ರಯತ್ನಿಸಿದರು ಮತ್ತು ಭಾರತ ತಂಡ ಅಲ್ಲಿಂದ ಹಿಂತಿರುಗಿ ನೋಡಲಿಲ್ಲ.

ಗಾಯಕ್ಕೆ ತುತ್ತಾಗುವ ಹಾರ್ದಿಕ್ ಪಾಂಡ್ಯಗೆ ಬ್ಯಾಕಪ್ ಆಗಿರುವ ಶಿವಂ ದುಬೆ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ, ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ರಿಂಕು ಸಿಂಗ್ ಅಜೇಯ 16 ರನ್ ಗಳಿಸಿ ಶಿವಂ ದುಬೆ ಅವರಿಗೆ ಸಾಥ್ ನೀಡಿದರು. ಇದಕ್ಕೂ ಮುನ್ನ ಜಿತೇಶ್ ಶರ್ಮಾ 20 ಎಸೆತಗಳಲ್ಲಿ 31 ರನ್ ಗಳಿಸಿ ತಮ್ಮ ಉತ್ತಮ ಕೊಡುಗೆ ನೀಡಿದರು.

Story first published: Friday, January 12, 2024, 21:42 [IST]
Other articles published on Jan 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+