Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AFG Test: 564 ರನ್‌ಗೆ ಡಿಕ್ಲೇರ್ ಮಾಡಿಕೊಂಡ ಗಿಲ್‌ ಪಡೆ

ನ್ಯೂ ಚಂಡೀಗಢ: ಭರವಸೆ ಬ್ಯಾಟರ್‌ಗಳ ಭರ್ಜರಿ ಆಟದ ನೆರವಿನಿಂದ ಟೀಮ್ ಇಂಡಿಯಾ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 564 ರನ್‌ಗೆ ಡಿಕ್ಲೇರ್ ಮಾಡಿಕೊಂಡಿದೆ.

ಟೆಸ್ಟ್‌ನ ಎರಡನೇ ದಿನದಂದು ಮೊದಲ ಇನಿಂಗ್ಸ್ ಆರಂಭಿಸಿದ ಶುಭಮನ್‌ ಗಿಲ್‌ ಅಜೇಯ 103 ಹಾಗೂ ರಿಷಭ್ ಪಂತ್ ಅಜೇಯ 50 ರನ್‌ಗಳಿಂದ ಆಟ ಮುಂದುವರಿಸಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತವನ್ನು ಪೇರಿಸಿತು. ಶುಭಮನ್‌ ಗಿಲ್ 177 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಹಾಯದಿಂದ 126 ರನ್‌ ಸೇರಿಸಿ ಮೊಹಮ್ಮದ್‌ ಸಲೀಮ್‌ಗೆ ವಿಕೆಟ್‌ ಒಪ್ಪಿಸಿದರು.

IND vs AFG Test

ಟೆಸ್ಟ್‌ ತಂಡದ ಉಪನಾಯಕತ್ವ ಕಳೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಕಣಕ್ಕೆ ಇಳಿದ ರಿಷಭ್‌ ಪಂತ್, ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಸಾಬೀತು ಪಡಿಸಿದರು. ಇವರು ತಮ್ಮ ನೈಜ ಆಟವನ್ನು ಆಡಿ 121 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 81 ರನ್‌ ಬಾರಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್ ಬ್ಯಾಟರ್ ಧ್ರುವ್ ಜುರೇಲ್‌ 19 ರನ್ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಇವರ ತಾಳ್ಮೆಗೆ ಮೊಹಮ್ಮದ್‌ ಸಲೀಮ್ ಬ್ರೇಕ್ ಹಾಕಿದರು. ಪದಾರ್ಪಣೆ ಪಂದ್ಯವನ್ನು ಆಡಿದ ಮಾನವ್ ಸುತಾರ್ ತಮ್ಮಲ್ಲಿ ಬ್ಯಾಟಿಂಗ್ ಕ್ಷಮತೆ ಇರುವುದಾಗಿ ಸಾರಿ ಹೇಳಿದರು. ಇವರು 2 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 28 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದರು. ವೇಗದ ಬೌಲರ್‌ ಮೊಹಮ್ಮದ್ ಸಿರಾಜ್ 12 ಎಸೆತಗಳಲ್ಲಿ 22 ರನ್‌ ಸಿಡಿಸಿದರು.

ವಾಷಿಂಗ್ಟನ್‌ ಸುಂದರ್ ಅರ್ಧಶತಕ

ತಮಿಳುನಾಡು ತಂಡದ ವಾಷಿಂಗ್ಟನ್‌ ಸುಂದರ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಅಫ್ಘಾನಿಸ್ತಾನದ ಬೌಲರ್‌ಗಳನ್ನು ಕಾಡಿದರು. ತಮ್ಮಲ್ಲಿನ ಬ್ಯಾಟಿಂಗ್ ಕ್ಷಮತೆಗೆ ತಕ್ಕಂತೆ ಬ್ಯಾಟ್ ಮಾಡಿದ ವಾಷಿಂಗ್ಟನ್‌ ಸುಂದರ್ 5 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 52 ರನ್‌ ಬಾರಿಸಿದರು. ಟೀಮ್ ಇಂಡಿಯಾ 127 ಓವರ್‌ಗಳಲ್ಲಿ 8 ವಿಕೆಟ್‌ಗೆ 564 ರನ್‌ ಸಿಡಿಸಿ ಡಿಕ್ಲೇರ್‌ ಮಾಡಿಕೊಂಡಿತು.

IND vs AFG Test

ಮೊಹಮ್ಮದ್‌ ಸಲೀಮ್‌ ಅಬ್ಬರ

ಭರವಸೆ ವೇಗದ ಬೌಲರ್ ಮೊಹಮ್ಮದ್‌ ಸಲೀಮ್‌ ಅಮೋಘ ಪ್ರದರ್ಶನ ನೀಡಿದರು. ಭಾರತದ ವಿರುದ್ಧ 5 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದ ಅಫ್ಘಾನಿಸ್ತಾನದ ಬೌಲರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು 140 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು.

Story first published: Sunday, June 7, 2026, 13:57 [IST]
Other articles published on Jun 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+