ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೂರನೇ ಟಿ20 ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಔಟ್ ಆದರು. ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಡಬಲ್ ಸೂಪರ್ ಓವರ್ ಥ್ರಿಲ್ಲರ್ ಪಂದ್ಯದಲ್ಲಿ ಕೊಹ್ಲಿಯ ಅದ್ಭುತ ಫೀಲ್ಡಿಂಗ್ ಪ್ರದರ್ಶನ ಅವರಿಗೆ 'ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ' ಪಡೆಯಲು ನೆರವಾಯಿತು.
ಸೂಪರ್‌ಮ್ಯಾನ್ ರೀತಿ ವಿರಾಟ್ ಕೊಹ್ಲಿ ತಮ್ಮ ಫೀಲ್ಡಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು. ಪಂದ್ಯದ ನಿರ್ಣಾಯಕ ಡೆತ್ ಓವರ್‌ಗಳಲ್ಲಿ ಅವರು ತಮ್ಮ ಚಮತ್ಕಾರಿ ಫೀಲ್ಡಿಂಗ್ ಕೌಶಲ್ಯದಿಂದ ಸಿಕ್ಸರ್ ಹೋಗುವ ಚೆಂಡನ್ನು ತಡೆದರು.

17ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಎಸೆತದಲ್ಲಿ ಕರೀಮ್ ಜನತ್ ಅವರು ಲಾಂಗ್-ಆನ್ ಬೌಂಡರಿ ಕಡೆಗೆ ಒಂದು ಬಲವಾದ ಶಾಟ್ ಬಾರಿಸಿದಾಗ, ವಿರಾಟ್ ಕೊಹ್ಲಿ ಸಮಯಕ್ಕೆ ಸರಿಯಾಗಿ ಜಿಗಿದರು.
ವಿರಾಟ್ ಕೊಹ್ಲಿ ಚೆಂಡನ್ನು ಗಾಳಿಯ ಮಧ್ಯದಲ್ಲಿ ಹಿಡಿದಿದ್ದು ಮಾತ್ರವಲ್ಲದೆ, ಬೌಂಡರಿ ಆಚೆಗೆ ಬೀಳುತ್ತಾರೆ. ಆದರೆ ಸಿಕ್ಸರ್ ತಡೆದ ಕೊಹ್ಲಿ ವೇಗವಾಗಿ ಚೆಂಡನ್ನು ಮತ್ತೆ ಮೈದಾನಕ್ಕೆ ಒಳಕ್ಕೆ ಎಸೆದರು, ಯಶಸ್ವಿಯಾಗಿ ಐದು ರನ್‌ಗಳನ್ನು ಉಳಿಸಿದರು.

ಭಾರತದ ಸ್ಟಾರ್ ಆಟಗಾರ ಗಮನಾರ್ಹ ಫೀಲ್ಡಿಂಗ್ ಪ್ರದರ್ಶನ ನೀಡಿದರು ಮತ್ತು ಅವರ ಪ್ರಯತ್ನಕ್ಕಾಗಿ ಮೈದಾನದಾದ್ಯಂತ ಪ್ರಶಂಸೆಯನ್ನು ಗಳಿಸಿದರು.
ನಜಿಬುಲ್ಲಾ ಝದ್ರಾನ್ ಅವರು ಅವೇಶ್ ಖಾನ್ ಅವರ ಎಸೆತವನ್ನು ಗಾಳಿಯಲ್ಲಿ ಬಾರಿಸಿದಾಗ ವಿರಾಟ್ ಕೊಹ್ಲಿ ತಮ್ಮ ಕೈಚಳಕದಿಂದ ಕ್ಯಾಚ್ ಪಡೆದರು.
ಪಂದ್ಯದ ನಂತರ ಭಾರತದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಭಾವಶಾಲಿ ಮಾತುಗಳನ್ನಾಡಿದರು. ಫೀಲ್ಡರ್ ಆಫ್ ದಿ ಸೀರೀಸ್ ಪ್ರಶಸ್ತಿಯ ಸಂಭಾವ್ಯ ಪುರಸ್ಕೃತರನ್ನು ಅನಾವರಣಗೊಳಿಸಿದರು. ಬೌಂಡರಿ ಗೆರೆ ಬಳಿ ಅದ್ಭುತ ಫೀಲ್ಡಿಂಗ್ ಮಾಡಿದ ವಿರಾಟ್ ಕೊಹ್ಲಿ ಮತ್ತು ರಿಂಕು ಸಿಂಗ್ ಅವರಂತಹ ಅಸಾಧಾರಣ ಫೀಲ್ಡರ್‌ಗಳನ್ನು ತಂಡವು ಒಪ್ಪಿಕೊಂಡಿತು.
ಅಂತಿಮವಾಗಿ ವಿರಾಟ್ ಕೊಹ್ಲಿ ತಮ್ಮ ಅಸಾಧಾರಣ ಕ್ಯಾಚಿಂಗ್ ಮತ್ತು ಬೌಂಡರಿ ಉದ್ದಕ್ಕೂ ಅದ್ಭುತ ಫೀಲ್ಡಿಂಗ್‌ಗಾಗಿ ಅತ್ಯುತ್ತಮ ಫೀಲ್ಡರ್ ಪದಕ ಪಡೆದರು.
ಇಡೀ ಭಾರತ ತಂಡವು ವಿರಾಟ್ ಕೊಹ್ಲಿಗೆ ಚಪ್ಪಾಳೆಯ ಸುರಿಮಳೆಗೈದರು ಮತ್ತು ನಾಯಕ ರೋಹಿತ್ ಶರ್ಮಾ ಕೂಡ ಸಂತೋಷಪಟ್ಟರು. ಹರ್ಷಚಿತ್ತದಿಂದ ನಗು ಮತ್ತು ಚಪ್ಪಾಳೆಯ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಗಮನಾರ್ಹವಾಗಿ, ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಟಿ20 ಅಂತಾರಾಷ್ಟ್ರೀಯ ಮೂರನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು. ನಾಟಕೀಯ ಎರಡನೇ ಸೂಪರ್ ಓವರ್‌ನ ನಂತರ, 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.
ಮೂರು ಪಂದ್ಯಗಳ ಸರಣಿಯ ಅಂತಿಮ ಪಂದ್ಯವು ವಿಶೇಷವಾಗಿ ತೀವ್ರತೆಯಿಂದ ಕೂಡಿತ್ತು. ಅಫ್ಘಾನಿಸ್ತಾನ ತಂಡವು 6 ವಿಕೆಟ್‌ಗೆ 212 ರನ್‌ಗಳನ್ನು ತಲುಪುವ ಮೂಲಕ, 4 ವಿಕೆಟ್‌ಗೆ 212 ರನ್ ಗಳಿಸಿದ ಭಾರತ ತಂಡದ ಒಟ್ಟು ಮೊತ್ತಕ್ಕೆ ಟೈ ಆಯಿತು.
ಮೊದಲ ಸೂಪರ್ ಓವರ್‌ನಲ್ಲಿ ಅಫ್ಘಾನಿಸ್ತಾನ ತಂಡವು 1 ವಿಕೆಟ್‌ಗೆ 16 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಆತಿಥೇಯ ತಂಡವು ಈ ಸ್ಕೋರ್ ಅನ್ನು ಸಮಗೊಳಿಸಿತು. ಇದು ಎರಡನೇ ಸೂಪರ್ ಓವರ್‌ಗೆ ತಳ್ಳಿತು.
ಎರಡನೇ ಓವರ್‌ನಲ್ಲಿ ಭಾರತ 2 ವಿಕೆಟ್‌ಗೆ 11 ರನ್ ಗಳಿಸಿತು. ನಂತರ ಸ್ಪಿನ್ನರ್ ರವಿ ಬಿಷ್ಣೋಯ್ ನಿರ್ಣಾಯಕ ಪಾತ್ರ ವಹಿಸಿದರು. ಕೇವಲ ಮೂರು ಎಸೆತಗಳಲ್ಲಿ 2 ವಿಕೆಟ್ ಪಡೆದು ಭಾರತದ ಗೆಲುವಿಗೆ ಮುದ್ರೆಯೊತ್ತಿದರು.