ಪ್ರಯತ್ನಗಳಿಗೆ ಫಲ ದೊರೆತಾಗ ಸಂತಸವಾಗುತ್ತದೆ: 5 ವಿಕೆಟ್ ಗೊಂಚಲು ಪಡೆದ ಶಮಿ ಹೇಳಿದ್ದಿಷ್ಟು!

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ 10 ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ್ದು 51 ರನ್‌ಗಳಿಗೆ 5 ವಿಕೆಟ್ ಸಂಪಾದಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಬ್ಯಾಟಿಂಗ್ ಸ್ನೇಹು ಪಿಚ್‌ನಲ್ಲಿಯೂ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್ ಆಗಿದೆ. ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್ ಹಾಗೂ ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ಶಾರ್ಟ್ ಹಾಗೂ ಶಾನ್ ಅಬಾಟ್ ಅವರ ವಿಕೆಟ್‌ಗಳನ್ನು ಶಮಿ ಪಡೆದುಕೊಂಡಿದ್ದಾರೆ.
ಇನ್ನು ಮೊದಲ ಇನ್ನಿಂಗ್ಸ್‌ನ ಮುಕ್ತಾಯದ ಬಳಿಕ ಕಳೆದ ಪಂದ್ಯದಲ್ಲಿ ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಆರು ವಿಕೆಟ್‌ಗಳ ಗೊಂಚಲಿನ ಬಳಿಕ ಶಮಿ ಐದು ವಿಕೆಟ್‌ಗಳನ್ನು ಪಡೆದ ವಿಚಾರವಾಗಿ ಅವರಲ್ಲಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಶಮಿ "ಬಹಳ ಖುಷಿಯಾಗಿದೆ, ಸಿರಾಜ್ ಜೊತೆಗಿನ ಕಂಪನಿಯನ್ನು ನಾನು ಬಹಳ ಆನಂದಿಸುತ್ತಿದ್ದೇನೆ. ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡಿ ಲಯವನ್ನು ಕಂಡುಕೊಳ್ಳುವು್ಉ ಬಹಳ ಮುಖ್ಯವಾಗುತ್ತದೆ" ಎಂದಿದ್ದಾರೆ.
ಮುಂದುವರಿದು ಶಮಿ "ಇಲ್ಲಿನ ವಾತಾವರಣ ಸಾಕಷ್ಟು ಬಿಸಿಯಾಗಿದೆ. ಅಲ್ಲದೆ ಪಿಚ್‌ನಿಂದಲೂ ಇಲ್ಲಿ ಹೆಚ್ಚಿನ ನೆರವು ಇರಲಿಲ್ಲ. ಹಾಗಾಗಿ ಉತ್ತಮ ಲೆಂತ್‌ನಲ್ಲಿ ಬೌಲಿಂಗ್ ನಡೆಸುವುದು ಹಾಗೂ ವೇಗದಲ್ಲಿ ಏರಿಳಿತಗಳನ್ನು ಮಾಡುವುದು ಮಾತ್ರವೇ ನಮ್ಮ ಮುಂದಿದ್ದ ಆಯ್ಕೆಯಾಗಿತ್ತು. ನಿಮ್ಮ ಪ್ರಯತ್ನಗಳನ್ನು ನಡೆಸಿದಾಗ ಮತ್ತು ಅವುಗಳಿಂದಾಗಿ ವಿಕೆಟ್‌ಗಳು ದೊರೆತಾಗ ಬಹಳ ಖುಷಿಯಾಗುತ್ತದೆ. ಅದು ನಿಮ್ಮ ತಂಡಕ್ಕೆ ಒಳ್ಳೆಯ ಫಲಿತಾಂಶ ನೀಡುತ್ತದೆ ಹಾಗೂ ನಿಮಗೂ ಆತ್ಮವಿಶ್ವಾಸ ನೀಡುತ್ತದೆ" ಎಂದಿದ್ದಾರೆ.
ಇನ್ನು ಓ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಇಂದಿನ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ವಿರುದ್ಧ 37 ವಿಕೆಟ್‌ಗಳನ್ನು ಏಕದಿನ ಮಾದರಿಯಲ್ಲಿ ಪಡೆದಂತಾಗಿದೆ. ಈ ಮೂಲಕ ಅಜಿತ್ ಅಗರ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಭಾರತದ ಮಾಜಿ ನಾಯಕ ಕಪಿಲ್‌ದೇವ್ ಆಸ್ಟ್ರೇಲಿಯಾ ವಿರುದ್ಧ 45 ವಿಕೆಟ್‌ಗಳನ್ನು ಪಡೆದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ & ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ
ಬೆಂಚ್: ತಿಲಕ್ ವರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ
ಬೆಂಚ್: ಅಲೆಕ್ಸ್ ಕ್ಯಾರಿ, ಜೋಶ್ ಹ್ಯಾಜಲ್ವುಡ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ತನ್ವೀರ್ ಸಂಘ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications