Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS: ಭಾರೀ ಚರ್ಚೆಗೆ ಗ್ರಾಸವಾದ ರವೀಂದ್ರ ಜಡೇಜಾ ವಿಡಿಯೋ; ಬೆರಳಿಗೆ ಹಚ್ಚಿಕೊಂಡಿದ್ದೇನು ಎಂದು ಪ್ರಶ್ನಿಸಿದ ಮೈಕಲ್ ವಾನ್

IND vs AUS 1st Test: Michael Vaughan Questioned What Ravindra Jadeja Put On His Spin Finger

ಗುರುವಾರ, ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಆರಂಭವಾಗೊಂಡಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮೊದಲ ದಿನದಂದು ಪ್ರವಾಸಿ ತಂಡದ ವಿರುದ್ಧ ಆತಿಥೇಯ ತಂಡ ಮೇಲುಗೈ ಸಾಧಿಸಿದೆ.

ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಆಲ್‌ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ಗೆ ಅತ್ಯುತ್ತಮವಾಗಿ ಪುನರಾಗಮನ ಮಾಡಿದರು.

ರವೀಂದ್ರ ಜಡೇಜಾ 22 ಓವರ್‌ಗಳಲ್ಲಿ 47 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು. ಇದು ಅವರ 11ನೇ ಐದು ವಿಕೆಟ್ ಗೊಂಚಲಾಗಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಭಾರತದ ಬೌಲರ್‌ಗಳು 177 ರನ್‌ಗಳಿಗೆ ಆಲೌಟ್ ಮಾಡಿದರು.

ಪಂದ್ಯಕ್ಕೂ ಮುನ್ನ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಬಗ್ಗೆ ಯೋಜನೆ ಹಾಕಿಕೊಂಡಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು, ರವೀಂದ್ರ ಜಡೇಜಾ ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಅಶ್ವಿನ್‌ಗಿಂತ ರವೀಂದ್ರ ಜಡೇಜಾ ಹೆಚ್ಚು ವಿಕೆಟ್ ಪಡೆದರು.

IND vs AUS 1st Test: Michael Vaughan Questioned What Ravindra Jadeja Put On His Spin Finger

ಇದೇ ವೇಳೆ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 15.5 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ 450 ವಿಕೆಟ್‌ಗಳನ್ನು ಪೂರೈಸಿದರು.

177 ರನ್‌ಗಳಿಗೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಜೇಯ 56 ರನ್‌ಗಳ ನೆರವಿನಿಂದ 1 ವಿಕೆಟ್‌ಗೆ 77 ರನ್‌ ಕಲೆ ಹಾಕಿದೆ. ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ಇನ್ನೂ 100 ರನ್‌ ಗಳಿಸಬೇಕಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರವೀಂದ್ರ ಜಡೇಜಾ ಅವರು ಬೌಲಿಂಗ್ ಮಾಡುವಾಗಿನ ವಿಡಿಯೋ ಭಾರಿ ಚರ್ಚೆ ಹುಟ್ಟುಹಾಕಿದೆ. ರವೀಂದ್ರ ಜಡೇಜಾ ಅವರು ಮೊಹಮ್ಮದ್ ಸಿರಾಜ್‌ನಿಂದ ಏನೋ ತೆಗೆದುಕೊಂಡು ತಮ್ಮ ಬೆರಳಿಗೆ ಹಚ್ಚಿಕೊಂಡಿರುವುದು ಕಂಡುಬಂದಿದೆ. ಇದೀಗ ಇದೇ ವಿಡಿಯೋವನ್ನು ಆಸ್ಟ್ರೇಲಿಯಾ ಮಾಧ್ಯಮವೊಂದು ವಿವಾದ ಹುಟ್ಟಿಕೊಳ್ಳುವಂತೆ ಮಾಡಿದೆ.

ಆಸ್ಟ್ರೇಲಿಯನ್ ಮಾಧ್ಯಮ ಔಟ್ಲೆಟ್ foxsports.com.au ಒಂದು ವರದಿಯನ್ನು ಮಾಡಿದ್ದು, ಶೀರ್ಷಿಕೆಯೊಂದಿಗೆ ಅದೇ ಟ್ವೀಟ್ ಅನ್ನು ಪೋಸ್ಟ್ ಮಾಡಿದೆ. "ಆಸಕ್ತಿದಾಯಕವಾಗಿದೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಶ್ನಾರ್ಹ ಕ್ಷಣದ ದೃಷ್ಟಿ ಕಾಣಿಸಿಕೊಂಡ ನಂತರ ಚರ್ಚೆಯು ಸ್ಫೋಟಗೊಂಡಿದೆ," ಎಂದು ಬರೆದುಕೊಂಡಿದೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಕೂಡ ಇದೇ ವರದಿಯನ್ನು ಟ್ವೀಟ್ ಮಾಡಿದ್ದಾರೆ. "ರವೀಂದ್ರ ಜಡೇಜಾ ತನ್ನ ಸ್ಪಿನ್ ಮಾಡುವ ಬೆರಳಿಗೆ ಏನು ಸವರಿಕೊಂಡಿದ್ದಾನೆ. ಇದನ್ನು ಎಂದಿಗೂ ನೋಡಿಲ್ಲ," ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೇನ್ ಕೂಡ ಈ ಘಟನೆಯ ವೀಡಿಯೊದಲ್ಲಿ ಕಾಮೆಂಟ್ ಮಾಡಿದ್ದು, 'ಇಂಟರೆಸ್ಟಿಂಗ್' ಎಂಬ ಒಂದೇ ಪದದ ಕಾಮೆಂಟ್ ಮಾಡಿದ್ದಾರೆ.

Story first published: Thursday, February 9, 2023, 21:22 [IST]
Other articles published on Feb 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+