Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS 1st Test: ಭಾರತ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 5 ವಿಕೆಟ್ ಕಿತ್ತ ಆಸೀಸ್‌ನ 2ನೇ ಸ್ಪಿನ್ನರ್ ಟಾಡ್ ಮರ್ಫಿ

IND vs AUS 1st Test: Todd Murphy Becomes Australias 2nd Spinner Took 5 Wickets In The 1st Test Match Against India

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ಧ ಭಾರತದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 120ಕ್ಕೂ ಅಧಿಕ ರನ್ ಮುನ್ನಡೆ ಗಳಿಸಿದೆ.

ಭಾರತ ತಂಡ ಮುನ್ನಡೆ ಗಳಿಸಿದರೂ, ಎದುರಾಳಿ ತಂಡದ ಸ್ಪಿನ್ನರ್ ಟಾಡ್ ಮರ್ಫಿ ಭಾರತದ ನೆಲದಲ್ಲಿ ಭಾರತ ವಿರುದ್ಧ ಐದು ವಿಕೆಟ್‌ ಗೊಂಚಲು ಪಡೆದ ಆಸ್ಟ್ರೇಲಿಯಾದ ಎರಡನೇ ಸ್ಪಿನ್ನರ್ ಎಂಬ ದಾಖಲೆಯನ್ನು ಬರೆದರು.

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಸ್ ಭರತ್ ವಿಕೆಟ್ ಪಡೆಯುವ ಮೂಲಕ ಐದು ವಿಕೆಟ್ ಗಳಿಕೆಯನ್ನು ಪೂರ್ಣಗೊಳಿಸಿದರು.

IND vs AUS 1st Test: Todd Murphy Becomes Australias 2nd Spinner Took 5 Wickets In The 1st Test Match Against India

ಕುತೂಹಲಕಾರಿ ಅಂಶದಲ್ಲಿ, ಟಾಡ್ ಮರ್ಫಿ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಆಫ್ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟಾಡ್ ಮರ್ಫಿಯ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ವಿಕೆಟ್ ಕೆಎಲ್ ರಾಹುಲ್ ರೂಪದಲ್ಲಿ ಬಂದಿತು. ನಂತರ ರವಿಚಂದ್ರನ್ ಅಶ್ವಿನ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ಕೆಎಸ್ ಭರತ್ ಅವರು ಟಾಡ್ ಮರ್ಫಿಯ ಸ್ಪಿನ್ ಬಲೆಗೆ ಬಿದ್ದರು.

IND vs AUS 1st Test: Todd Murphy Becomes Australias 2nd Spinner Took 5 Wickets In The 1st Test Match Against India

ಟಾಡ್ ಮರ್ಫಿ ಅವರು ಮಾಜಿ ಸ್ಪಿನ್ನರ್ ಜೇಸನ್ ಕ್ರೆಜ್ಜಾ ನಂತರ ಭಾರತದಲ್ಲಿ ಭಾರತ ತಂಡದ ವಿರುದ್ಧ ಐದು ವಿಕೆಟ್ ಪಡೆದ ಎರಡನೇ ಸ್ಪಿನ್ ಬೌಲರ್ ಎನಿಸಿಕೊಂಡರು. ನವೆಂಬರ್ 2008ರಲ್ಲಿ ಅದೇ ಸ್ಥಳದಲ್ಲಿ ಕ್ರೇಜ್ಜಾ ಭಾರತದ ವಿರುದ್ಧ ಎಂಟು ವಿಕೆಟ್‌ಗಳನ್ನು ಪಡೆದಿದ್ದರು. ಜೇಸನ್ ಕ್ರೆಜ್ಜಾ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದ 37ನೇ ಆಸ್ಟ್ರೇಲಿಯನ್ ಬೌಲರ್ ಆಗಿದ್ದರು.

ರೋಹಿತ್ ಶರ್ಮಾ ದಾಖಲೆಯ ಶತಕ
ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕ್ರಿಕೆಟ್‌ ಜೀವನದ 9ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸುತ್ತಿದ್ದಂತೆ, ಆಟಗಾರನಾಗಿ ಮತ್ತು ನಾಯಕನಾಗಿ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪ (ಟೆಸ್ಟ್, ಏಕದಿನ ಮತ್ತು ಟಿ20)ಗಳಲ್ಲಿ ಶತಕ ಬಾರಿಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತ ತಂಡದ ನಾಯಕನಾಗಿ ರೋಹಿತ್ ಶರ್ಮಾ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಲು ಆಕ್ರಮಣಕಾರಿ ಆಟದ ಜೊತೆಗೆ ಮಾಸ್ಟರ್‌ಕ್ಲಾಸ್ ಪ್ರದರ್ಶನ ನೀಡಿದರು. ಅಂತಿಮವಾಗಿ 212 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 120 ರನ್ ಗಳಿಸಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

Story first published: Friday, February 10, 2023, 16:51 [IST]
Other articles published on Feb 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+