IND vs AUS 2nd T20I: ಮಳೆಯಿಂದಾಗಿ ರದ್ದಾಗಾತ್ತಾ ನಾಗ್ಪುರ ಪಂದ್ಯ?; ಹವಾಮಾನ ವರದಿ ಏನಿದೆ?

ಆರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡದ ವಿರುದ್ಧ 1ನೇ ಟಿ20 ಪಂದ್ಯದಲ್ಲಿ ಸೋತ ನಂತರ ಆತಿಥೇಯ ಭಾರತ ತಂಡ ಸೆಪ್ಟೆಂಬರ್ 23ರಂದು (ಶುಕ್ರವಾರ) ನಾಗ್ಪುರದಲ್ಲಿ 2ನೇ ಟಿ20 ಪಂದ್ಯದಲ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದು, ರೋಹಿತ್ ಶರ್ಮಾ ಬಳಗ ಪುಟಿದೇಳಲು ಎದುರು ನೋಡುತ್ತಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯವು ಶುಕ್ರವಾರ ರಾತ್ರಿ ಭಾರತೀಯ ಕಾಲಮಾನ 7 PM ಕ್ಕೆ ಪ್ರಾರಂಭವಾಗುತ್ತದೆ.
ಕಳೆದ ಕೆಲವು ದಿನಗಳಿಂದ ನಾಗ್ಪುರದಲ್ಲಿ ಮಳೆಯಾಗುತ್ತಿದ್ದು, ಗುರುವಾರದಂದು ಎರಡೂ ತಂಡಗಳ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ. ಪಂದ್ಯದ ದಿನದಂದು ಮಳೆಯಿಂದ ಓವರ್ ಕಡಿತ ಅಥವಾ ರದ್ದಾಗುವ ಆತಂಕವಿದೆ. ಆದಾಗ್ಯೂ ಅಕ್ಯುವೆದರ್ ಪ್ರಕಾರ, ದಿನದ ಹವಾಮಾನವು ಆಶಾದಾಯಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ತಾಪಮಾನವು ಸುಮಾರು 25ರಿಂದ 25 ಡಿಗ್ರಿ ಸೆಲ್ಸಿಯಸ್
ಆಕ್ಯುವೆದರ್ ಪ್ರಕಾರ, ಶುಕ್ರವಾರದ ಸರಾಸರಿ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು 64 ಪ್ರತಿಶತದಷ್ಟು ಮೋಡದ ಹೊದಿಕೆ ಇರುತ್ತದೆ ಎಂದು ಅಂದಾಜಿಸಲಾಗಿದೆ.
ನಿರ್ದಿಷ್ಟವಾಗಿ ಪಂದ್ಯದ ಸಮಯದ ಬಗ್ಗೆ ಮಾತನಾಡುವುದಾದರೆ, ಟಾಸ್ ಭಾರತೀಯ ಕಾಲಮಾನ 6:30 PM ಕ್ಕೆ ನಡೆಯುತ್ತದೆ ಮತ್ತು ಪಂದ್ಯವು ನಿಖರವಾಗಿ ಅರ್ಧ ಗಂಟೆಯ ನಂತರ ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ, ಅಕ್ಯುವೆದರ್ ಪ್ರಕಾರ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಆಟದ ಕೊನೆಯ ಭಾಗದಲ್ಲಿ ತಾಪಮಾನವು ಸುಮಾರು 25ರಿಂದ 25 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸೋತ ನಂತರ ಭಾರತ ತಂಡವು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 0-1 ರಿಂದ ಹಿನ್ನಡೆಯಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ.

1-0 ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯ
ಉಭಯ ತಂಡಗಳ ನಡುವಿನ ಸರಣಿಯಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾವು ಮಂಗಳವಾರ ಮೊಹಾಲಿಯಲ್ಲಿ ಗೆದ್ದ ನಂತರ ಪ್ರಸ್ತುತ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ಭಾರತಕ್ಕೆ ಆಹ್ವಾನಿಸಿತು. ನಾಯಕ ರೋಹಿತ್ ಶರ್ಮಾ (11) ಮತ್ತು ವಿರಾಟ್ ಕೊಹ್ಲಿ (2) ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಇದು ಮೆನ್ ಇನ್ ಬ್ಲೂ ತಂಡವನ್ನು 35 ರನ್‌ಗಳಿಗೆ 2 ಪ್ರಮುಖ ವಿಕೆಟ್ ಕಳೆದುಕೊಂಡು ಹೋರಾಡುವಂತೆ ಮಾಡಿತು.

ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳಲ್ಲಿ 71* ರನ್
ನಂತರ ಕೆಎಲ್ ರಾಹುಲ್ (55) ಮತ್ತು ಸೂರ್ಯಕುಮಾರ್ ಯಾದವ್ (46) 68 ರನ್ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 71* ರನ್ ಗಳಿಸಿ ಇನ್ನಿಂಗ್ಸ್ ಅನ್ನು 208/6 ರಲ್ಲಿ ಮುಗಿಸಿದರು.
ಆಸ್ಟ್ರೇಲಿಯ ಪರ ವೇಗಿಗಳಾದ ನಾಥನ್ ಎಲ್ಲಿಸ್ (3/30) ಮತ್ತು ಜೋಶ್ ಹೇಜಲ್‌ವುಡ್ (2/39) ಉತ್ತಮ ಬೌಲಿಂಗ್ ಸ್ಪೆಲ್ ಮಾಡಿದರು.
209 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡ ಆಸ್ಟ್ರೇಲಿಯದ ಆರಂಭಿಕರಾದ ಆರೋನ್ ಫಿಂಚ್ (22) ಮತ್ತು ಕ್ಯಾಮರೂನ್ ಗ್ರೀನ್ 39 ರನ್‌ಗಳ ವೇಗದ ಜೊತೆಯಾಟದಿಂದ ಆಸ್ಟ್ರೇಲಿಯಕ್ಕೆ ದೃಢವಾದ ಆರಂಭವನ್ನು ನೀಡಿದರು. ಗ್ರೀನ್ ಪ್ರಭಾವಶಾಲಿ ಸ್ಟ್ರೋಕ್‌ಗಳನ್ನು ಆಡಿದರು ಮತ್ತು ಸ್ಟೀವ್ ಸ್ಮಿತ್ (35) ಅವರೊಂದಿಗೆ 70 ರನ್‌ಗಳ ಜೊತೆಯಾಟವನ್ನು ಮಾಡಿದರು. ಕ್ಯಾಮರೂನ್ ಗ್ರೀನ್ 30 ಎಸೆತಗಳಲ್ಲಿ ಆಕರ್ಷಕ 61 ರನ್ ಗಳಿಸಿ ಔಟಾದರು.

ನಾಲ್ಕು ವಿಕೆಟ್‌ಗಳಿಂದ ಗೆದ್ದ ಆಸೀಸ್
ಭಾರತ ತಂಡವು ಕೇವಲ 36 ರನ್‌ಗಳ ಅಂತರದಲ್ಲಿ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ (1), ಮತ್ತು ಜೋಶ್ ಇಂಗ್ಲಿಸ್ (17) ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಉತ್ತಮ ಪುನರಾಗಮನ ಮಾಡಿತು. ಆದರೆ ವಿಕೆಟ್‌ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ (45*) ಮತ್ತು ಚೊಚ್ಚಲ ಪಂದ್ಯವಾಡಿದ ಟಿಮ್ ಡೇವಿಡ್ (18) ) ಆಸೀಸ್ ನಾಲ್ಕು ವಿಕೆಟ್‌ಗಳಿಂದ ಗೆಲ್ಲಲು 62-ರನ್ ಮುರಿಯದ ಜೊತೆಯಾಟ ನೀಡಿದರು ಮತ್ತು ಇನ್ನಿಂಗ್ಸ್ ಅನ್ನು 211/6ಕ್ಕೆ ಮುಗಿಸಿದರು.
ಕ್ಯಾಮರೂನ್ ಗ್ರೀನ್ ಅವರ 61 ಮತ್ತು 1/46 ಗೆ "ಪಂದ್ಯದ ಶ್ರೇಷ್ಠ' ಪ್ರಶಸ್ತಿಯನ್ನು ಪಡೆದರು. ಎರಡನೇ ಟಿ20 ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications