ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus 2nd T20: ಟಾಸ್ ವಿಳಂಬ, ಜೊತೆಯಾದ ಆರ್‌ಸಿಬಿ ಆಟಗಾರರು

Virat kohli and maxwell

ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯದ ಟಾಸ್ ತಡವಾಗುತ್ತಿದ್ದಂತೆ ಉಭಯ ತಂಡದ ಆಟಗಾರರು ಮಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ. 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸುಲಭವಾಗಿ ಸೋಲಿಸಿತು.

ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

ತಡವಾದ ಟಾಸ್ ಆಯ್ಕೆ

ತಡವಾದ ಟಾಸ್ ಆಯ್ಕೆ

ಅದೇ ಹೊತ್ತಿಗೆ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ ತಂಡ ಇಂದಿನ ಪಂದ್ಯ ಗೆದ್ದು ಸರಣಿ ಜೀವಂತವಾಗಿರಿಸಲು ಇರಲು ಎದುರು ನೋಡುತ್ತಿದೆ. ಮೈದಾನದ ತೇವಾಂಶದಿಂದ ಟಾಸ್ ತಡವಾಯಿತು. ಹೀಗಾಗಿ ಮೈದಾನದ ಸ್ವರೂಪವನ್ನು ಪರಿಶೀಲಿಸಿದ ಬಳಿಕ ಉಭಯ ತಂಡಗಳ ನಡುವಿನ ಪಂದ್ಯ ಖಚಿತಗೊಂಡಿತು. 8 ಓವರ್‌ಗಳ ಪಂದ್ಯ ನಿಗದಿಯಾಗಿದ್ದು, 2 ಓವರ್ ಪವರ್ ಪ್ಲೇ ಜೊತೆಗೆ ಒಬ್ಬ ಬೌಲರ್ ಗರಿಷ್ಠ 2 ಓವರ್ ಮಾತ್ರ ಬೌಲಿಂಗ್ ಮಾಡಬಹುದಾಗಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದೆ.

ಓವರ್‌ಗಳ ಕಡಿತ

ಓವರ್‌ಗಳ ಕಡಿತ

ಅಲ್ಲದೆ, ಪಂದ್ಯ ಆರಂಭವಾಗುವುದು ಸುಮಾರು ಒಂದು ಗಂಟೆ ತಡವಾಗಿದ್ದರಿಂದ ಆಟದ ಓವರ್‌ಗಳನ್ನು 8 ಓವರ್‌ಗಳಿಗೆ ಕಡಿತಗೊಳಿಸಲಾಗಿದೆ. ಪಂದ್ಯ ಶುರುವಾಗುವುದ ಇನ್ನೂ ಸ್ವಲ್ಪ ವಿಳಂಭವಾಗಿದ್ದರೆ, ಪಂದ್ಯವು ಕೇವಲ 5 ಓವರ್‌ಗೆ ಸೀಮಿತವಾಗುತ್ತಿತ್ತು. ಆದ್ರೀಗ ಟೀಂ ಇಂಡಿಯಾ ಅಭಿಮಾನಿಗಳು 8 ಓವರ್‌ಗಳ ರೋಚಕ ಪಂದ್ಯ ವೀಕ್ಷಿಸುವ ಅವಕಾಶ ಒದಗಿಬಂದಿದೆ. ಹೀಗಾಗಿ ಪಂದ್ಯ ಗೆಲ್ಲುವಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ರೀತಿ ಬುಮ್ರಾ ಮತ್ತೊಮ್ಮೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

3 ಫಾರ್ಮೆಟ್ ಕ್ರಿಕೆಟ್ ಆಡಬಲ್ಲ ಪ್ಲೇಯರ್ ನಾನು, ತಂಡಕ್ಕೆ ವಾಪಸ್ಸಾಗಲು ರೆಡಿಯಿದ್ದೇನೆ: ಶಾರ್ದೂಲ್ ಠಾಕೂರ್

ಅಪ್ಪಿಕೊಂಡ ವಿರಾಟ್ ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್

ಏತನ್ಮಧ್ಯೆ, ಟಾಸ್ ವಿಳಂಬದಿಂದಾಗಿ ಭಾರತ-ಆಸ್ಟ್ರೇಲಿಯಾ ತಂಡದ ಆಟಗಾರರು ತಮ್ಮ ಸ್ನೇಹವನ್ನು ಮೈದಾನದಲ್ಲಿ ತೋರಿದ್ದಾರೆ. ಆ ವೇಳೆ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆಸ್ಟ್ರೇಲಿಯದ ಆಟಗಾರ ಮ್ಯಾಕ್ಸ್ ವೆಲ್ ಅವರನ್ನು ಪರಸ್ಪರ ಅಪ್ಪಿಕೊಂಡು ಮಾತನಾಡಿದ್ದಾರೆ. ಇದಾದ ಬಳಿಕ ಹರ್ಷಲ್ ಪಟೇಲ್ ಕೂಡ ಮ್ಯಾಕ್ಸ್ ವೆಲ್ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು.

ಆರ್‌ಸಿಬಿ ಪ್ಲೇಯರ್‌ಗಳನ್ನ ಒಟ್ಟಾಗಿ ನೋಡಿದ ಅಭಿಮಾನಿಗಳು

ಇದಾದ ನಂತರ ವಿರಾಟ್ ಕೊಹ್ಲಿ-ಮ್ಯಾಕ್ಸ್‌ವೆಲ್ ತಬ್ಬಿಕೊಂಡು ಅವರ ಸ್ನೇಹವನ್ನು ಕೊಂಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಹರ್ಷಲ್ ಪಟೇಲ್ ಹಾಗೂ ದಿನೇಶ್ ಕಾರ್ತಿಕ್ ಒಟ್ಟಾಗಿ ಆಡುವುದರ ಜೊತೆಗೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದಾಗಿದ್ದಾರೆ.

Story first published: Friday, September 23, 2022, 21:19 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X