IND vs AUS 2nd Test: ಆಸ್ಟ್ರೇಲಿಯಾ ತಂಡದ ಬಲಿಷ್ಠ ಆಡುವ 11ರ ಬಳಗ ಆಯ್ಕೆ ಮಾಡಿದ ಅಲನ್ ಬಾರ್ಡರ್

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ, ಫೆಬ್ರವರಿ 17ರಂದು ಪ್ರಾರಂಭವಾಗಲಿದೆ. ಈಗಾಗಲೇ ಎರಡೂ ತಂಡಗಳು ಮೈದಾನ ತಲುಪಿದ್ದು, ಅಭ್ಯಾಸದಲ್ಲಿ ನಿರತವಾಗಿವೆ.
ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಅತಿಥೇಯ ಭಾರತ ತಂಡ ಪ್ರವಾಸಿ ತಂಡದ ವಿರುದ್ಧ ಇನ್ನಿಂಗ್ಸ್ ಹಾಗೂ 132 ರನ್‌ಗಳ ಭರ್ಜರಿ ಜಯ ಗಳಿಸಿ, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗ ಅಲನ್ ಬಾರ್ಡರ್ ಅವರು ತನ್ನ ಆದ್ಯತೆಯ ಆಸ್ಟ್ರೇಲಿಯಾ ತಂಡದ ಆಡುವ 11ರ ಬಳಗವನ್ನು ಹೆಸರಿಸಿದ್ದಾರೆ. ಈ ವೇಳೆ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಭಾರತ ವಿರುದ್ಧ 7 ವಿಕೆಟ್ ಪಡೆದು ಮಿಂಚಿದ್ದ 22 ವರ್ಷದ ಸ್ಪಿನ್ನರ್ ಟಾಡ್ ಮರ್ಫಿ ಅವರನ್ನು ತಮ್ಮ ಆಯ್ಕೆಯ ತಂಡದಿಂದ ಹೊರಗಿಟ್ಟಿದ್ದಾರೆ.

ಮೂವರು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನೊಂದಿಗೆ ತಂಡ ಸಂಯೋಜನೆ
ಆತಿಥೇಯ ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡದ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಆಟಗಾರರ ಕುರಿತು ತಿಳಿಸಿದ ಅಲನ್ ಬಾರ್ಡರ್, ನಾಗ್ಪುರ ಪಂದ್ಯದಲ್ಲಿ ಮಿಂಚಿದ ಹೊರತಾಗಿಯೂ ಯುವ ಸ್ಪಿನ್ನರ್ ಟಾಡ್ ಮರ್ಫಿಯನ್ನು ಕೈಬಿಟ್ಟು ಮೂವರು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನೊಂದಿಗೆ ಆಡುವುದನ್ನು ಒಳಗೊಂಡಂತೆ ಆಸ್ಟ್ರೇಲಿಯಾ ತಂಡವು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
"ದೆಹಲಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ನಾಥನ್ ಲಿಯಾನ್ ಸ್ಪಿನ್ ಆಯ್ಕೆಯೊಂದಿಗೆ ಆಡಬೇಕಾಗಿದೆ. ಲಿಯಾನ್ ಮೊದಲ ಆಯ್ಕೆಯಾಗಲು ಹಲವು ವರ್ಷಗಳಲ್ಲಿ ಸಾಕಷ್ಟು ಅವಕಾಶಗಳನ್ನು ನಿರ್ಮಿಸಿದ್ದಾರೆ. ಆದರೆ ಟಾಡ್ ಮರ್ಫಿನನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ನಾವು ಯಶಸ್ವಿಯಾಗಲು ಮೂರು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್ ಸೂತ್ರವನ್ನು ನಾನು ಪರಿಗಣಿಸುತ್ತೇನೆ," ಎಂದು SEN 1170 ಬ್ರೇಕ್‌ಫಾಸ್ಟ್‌ನಲ್ಲಿ ಅಲನ್ ಬಾರ್ಡರ್ ಅಭಿಪ್ರಾಯಪಟ್ಟರು.

ಡೇವಿಡ್ ವಾರ್ನರ್ ನಮಗೆ ಪ್ರಮುಖ ಆಟಗಾರ
"ಭಾರತ ವಿರುದ್ಧ ರನ್ ಗಳಿಸಲು ಕಷ್ಟಪಡುತ್ತಿರುವ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ಈ ಸರಣಿಯಲ್ಲಿ ಕೈಬಿಡಬೇಕೆಂದು ನಾನು ಇಷ್ಟಪಡುವುದಿಲ್ಲ. ಡೇವಿಡ್ ವಾರ್ನರ್ ನಮಗೆ ಪ್ರಮುಖ ಆಟಗಾರನಾಗಿದ್ದಾನೆ. ಅಗ್ರಕ್ರಮಾಂಕದಲ್ಲಿ ಅವನಿಂದ ಹೆಚ್ಚಿನ ರನ್ ನಿರೀಕ್ಷೆ ಇದೆ," ಎಂದು ಅಲನ್ ಬಾರ್ಡರ್ ತಿಳಿಸಿದರು.
ಇನ್ನು ಮೊದಲ ಟೆಸ್ಟ್ ಪಂದ್ಯದಿಂದ ಟ್ರಾವಿಸ್ ಹೆಡ್ ಅವರನ್ನು ಕೈಬಿಟ್ಟ ನಿರ್ಧಾರದಿಂದ ಅಲನ್ ಬಾರ್ಡರ್ ಅಚ್ಚರಿ ವ್ಯಕ್ತಪಡಿಸಿದರು ಮತ್ತು ಭಾರತ ವಿರುದ್ಧದ ಎರಡನೇ ಪಂದಕ್ಕೆ ಆಯ್ಕೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಳು ಇನ್ನಿಂಗ್ಸ್‌ಗಳಲ್ಲಿ ಟ್ರಾವಿಸ್ ಹೆಡ್ 525 ರನ್ ಗಳಿಸುವ ಮೂಲಕ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದರು.

ಅಲನ್ ಬಾರ್ಡರ್ ಆಯ್ಕೆ ಆಸ್ಟ್ರೇಲಿಯಾದ ಆಡುವ 11ರ ಬಳಗ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಾಂಬ್, ಕ್ಯಾಮೆರಾನ್ ಗ್ರೀನ್ (ಫಿಟ್ ಆಗಿದ್ದರೆ), ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಝಲ್‌ವುಡ್ (ಫಿಟ್ ಆಗಿದ್ದರೆ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications