For Quick Alerts
ALLOW NOTIFICATIONS  
For Daily Alerts
 

Rohit Sharma: ಸೋಲಿನ ನಡುವೆಯೂ ಏಷ್ಯಾದಲ್ಲಿ ಈ ಸಾಧನೆ ಮಾಡಿದ 8ನೇ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ

IND vs AUS 3rd ODI: Rohit Sharma 8th Indian Cricketer To Score 10000 International Runs In Asia

ಬುಧವಾರ, ಮಾರ್ಚ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡವು ಆತಿಥೇಯ ತಂಡದ ವಿರುದ್ಧ 21 ರನ್‌ಗಳ ಭರ್ಜರಿ ಗೆಲವು ಸಾಧಿಸಿತು.

ಇದರೊಂದಿಗೆ ಆಸ್ಟ್ರೇಲಿಯಾ ತಂಡ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಭಾರತ ತಂಡವು ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಅನುಭವಿಸಿತು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ 17 ಎಸೆತಗಳಲ್ಲಿ 30 ರನ್ ಗಳಿಸಿ ಸ್ಫೋಟಕ ಆರಂಭ ನೀಡಿದರು. ಈ ಮೂಲಕ ಏಷ್ಯಾದಲ್ಲಿ 10,000 ಅಂತಾರಾಷ್ಟ್ರೀಯ ರನ್ ಗಳಿಸಿದ 8ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

35 ವರ್ಷದ ರೋಹಿತ್ ಶರ್ಮಾ ಆರಂಭದಿಂದಲೂ ಶುಭ್ಮನ್ ಗಿಲ್ ಅವರೊಂದಿಗೆ ಸೇರಿ ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿ ರನ್ ವೇಗಕ್ಕೆ ಚಾಲನೆ ನೀಡಿದ್ದರು.

IND vs AUS 3rd ODI: Rohit Sharma 8th Indian Cricketer To Score 10000 International Runs In Asia

'ಹಿಟ್‌ಮ್ಯಾನ್' ಎಂದೇ ಜನಪ್ರಿಯವಾಗಿರುವ ರೋಹಿತ್ ಶರ್ಮಾ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳ ಬಾರಿಸಿ ದೊಡ್ಡ ಮೊತ್ತ ಗಳಿಸಲೂ ಸಾಧ್ಯವಾಗದಿದ್ದರೂ, ಕ್ರೀಸ್‌ನಲ್ಲಿ ಇರುವಷ್ಟು ಸಮಯ ಪ್ರೇಕ್ಷಕರನ್ನು ರಂಜಿಸಿದರು.

ಏಷ್ಯಾದಲ್ಲಿ 10000 ಅಂತಾರಾಷ್ಟ್ರೀಯ ರನ್ ಗಳಿಸಿದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಎಂಎಸ್ ಧೋನಿ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಇತರ ಗಣ್ಯರ ಪಟ್ಟಿಗೆ ರೋಹಿತ್ ಶರ್ಮಾ ಸೇರಿದರು.

ಇನ್ನು ರೋಹಿತ್ ಶರ್ಮಾ ಅವರು ಏಷ್ಯಾದಲ್ಲಿ 10000 ಅಂತಾರಾಷ್ಟ್ರೀಯ ರನ್ ಪೂರೈಸಿದ ಸಾಧನೆ ಮಾಡಿದ ಹದಿನಾರನೇ ಏಷ್ಯಾದ ಆಟಗಾರರಾದರು. ವಿಶೇಷವಾಗಿ ಸಚಿನ್ ತೆಂಡೂಲ್ಕರ್ ಮೊದಲು ಸಾಧನೆ ಮಾಡಿದ್ದರೆ, ನಂತರ ಶ್ರೀಲಂಕಾದ ಲೆಜೆಂಡ್‌ಗಳಾದ ಕುಮಾರ್ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ ಇದ್ದಾರೆ.

ಸೂರ್ಯಕುಮಾರ್ ಯಾದವ್ ಸತತ 3ನೇ ಗೋಲ್ಡನ್ ಡಕ್‌ಗೆ ಔಟ್
ವಿಶ್ವದ ಟಿ20 ನಂ.1 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲ ವಿಫಲರಾಗಿದ್ದಾರೆ. ಸ್ಫೋಟಕ ಶಾಟ್‌ಗಳಿಗೆ ಹೊಡೆತಗಳಿಗೆ ಹೆಸರುವಾಸಿಯಾಗಿರುವ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಮೊದಲ ಎಸೆತದಲ್ಲಿ ಖಾತೆ ತೆರೆಯದೆ ಔಟಾಗಿದ್ದಾರೆ.

IND vs AUS 3rd ODI: Rohit Sharma 8th Indian Cricketer To Score 10000 International Runs In Asia

ಇದರೊಂದಿಗೆ ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಸೂರ್ಯಕುಮಾರ್ ಯಾದವ್ ಭವಿಷ್ಯ ಅತಂತ್ರವಾಗಿದೆ. ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ ಅವರಂತಹ ಯುವ ಆಟಗಾರರು ಕಾಯುತ್ತಿದ್ದಾರೆ.

ಏಕದಿನ ವಿಶ್ವಕಪ್‌ಗೆ ಮುನ್ನ ಪ್ರಮುಖ ಏಕದಿನ ಸರಣಿಯಲ್ಲಿ ನೀಡಿದ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡು ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಆದರೆ, ಮೂರು ಪಂದ್ಯಗಳಲ್ಲಿ ಯಾವುದೇ ರನ್‌ ಗಳಿಸದಿರುವುದು ಸೂರ್ಯಕುಮಾರ್ ಯಾದವ್ ವಿಫಲತೆಯನ್ನು ಎತ್ತಿ ತೋರಿಸುತ್ತದೆ.

ಮೂರನೇ ಪಂದ್ಯದಲ್ಲಿ 270 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ 9.1 ಓವರ್‌ಗಳಲ್ಲಿ 65 ರನ್‌ಗಳ ಉತ್ತಮ ಜೊತೆಯಾಟ ನೀಡಿತ್ತು. ಇವೆಇಬ್ಬರು ಔಟಾಗುತ್ತಿದ್ದಂತೆ ರನ್ ವೇಗಕ್ಕೆ ಕಡಿವಾಣ ಬಿತ್ತು.

ಮಾಜಿ ನಾಯಕ ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 54 ರನ್ ಗಳಿಸಿ ಮತ್ತೊಮ್ಮೆ ಅರ್ಧಶತಕದ ಆಟವಾಡಿದರು ಮತ್ತು ಕುಸಿತ ಕಂಡಿದ್ದ ಭಾರತಕ್ಕೆ ಆಸರೆಯಾಗಿದ್ದರು. ವಿರಾಟ್ ಕೊಹ್ಲಿಗೆ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ 50 ಎಸೆತಗಳಲ್ಲಿ 32 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು.

ಕೊನೆಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 40 ಎಸೆತಗಳಲ್ಲಿ 40 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಅನಂತರ ಮತ್ತೊಬ್ಬ ಆಲ್‌ರೌಂಡರ್ ರವೀಂದ್ರ ಜಡೇಜಾ 18 ರನ್ ಗಳಿಸಿದ್ದಾಗ ಔಟಾಗುತ್ತಿದ್ದಂತೆಯೇ ಭಾರತದ ಸೋಲು ಖಚಿತವಾಯಿತು.

ಇದಕ್ಕೂ ಮೊದಲು ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.

Story first published: Thursday, March 23, 2023, 6:52 [IST]
Other articles published on Mar 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+